ಬೆಂಗಳೂರು: ಆರ್.ಆರ್. ನಗರ ಉಪಚುನಾವಣೆಯ ಫಲಿತಾಂಶ ಮಂಗಳವಾರ ಹೊರಬೀಳಲಿದ್ದು, ಹೈ ವೋಲ್ಟೇಜ್ನಲ್ಲಿರುವ ಆರ್ ಆರ್ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ರೀತಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.
ಗುಪ್ತಚರ ಇಲಾಖೆ ಈಗಾಗಲೇ ಕಣ್ಗಾವಲು ಇಟ್ಟು ಫಲಿತಾಂಶ ಮೊದಲು ಹಾಗೂ ನಂತರ ಯಾವುದೇ ಘಟನೆಗಳು ನಡಿಯದಂತೆ ಎಚ್ಚರಿಕೆ ವಹಿಸಿ. ಚುನಾವಣೆ ನಡೆಯುವಾಗ ಅಹಿತಕರ ಘಟನೆ, ಗಲಾಟೆಗಳು ನಡೆಯುತ್ತವೆ ಎಂಬ ಕೆಲ ಊಹಾಪೋಹಗಳು ಎದ್ದಿದ್ದವು. ಈ ವೇಳೆ ಅತೀ ಹೆಚ್ವು ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಖಾಕಿ ಕಣ್ಗಾವಲು ಹಾಕಲಾಗಿತ್ತು. ನಾಳೆ ಯಾವುದೇ ಪಕ್ಷ ಅಭ್ಯರ್ಥಿ ಗೆಲವು ಸಾಧಿಸಿದರೆ ಸಂಭ್ರಮ ಒಂದೆಡೆಯಾದರೆ ಮತ್ತೊಂದೆಡೆ ಸೋತ ಅಭ್ಯರ್ಥಿಯ ಕೆಲ ಬೆಂಬಲಿಗರು, ಅಥವಾ ಕೆಲ ಕಿಡಿಗೇಡಿಗಳು ಅಹಿತಕರ ಘಟನೆಗಳನ್ನ ನಡೆಸುವ ಸಾಧ್ಯತೆ ಇರುತ್ತದೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪಶ್ಚಿಮ, ಪೂರ್ವ, ಸಿಸಿಬಿಯ ಹೆಚ್ಚುವರಿ ಆಯುಕ್ತರುಗಳಿಗೆ, ಡಿಸಿಪಿಗಳಿಗೆ ಹೆಚ್ಚಿನ ಭದ್ರತೆ ಹೊಣೆ ನೀಡಿದ್ದಾರೆ.
11 ಗಂಟೆಗೆ ಭದ್ರತೆ ಕುರಿತು ಸಭೆ:
ನಾಳೆ ನಡೆಯುವ ಆರ್ ಆರ್ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ್ ಶಾಲೆ ಸುತ್ತ ಭದ್ರತೆ, ಮಲ್ಲೇಶ್ವರ ಬಿಜೆಪಿ ಕಚೇರಿ ಸುತ್ತ ಭದ್ರತೆ, ಕಾಂಗ್ರೆಸ್ ಕಚೇರಿ, ಅಭ್ಯರ್ಥಿಗಳ ಮನೆಯ ಸುತ್ತ ಯಾವ ರೀತಿ ಪೊಲೀಸರು ಹಾಗೂ ಸಿಬ್ಬಂದಿ, ಕೆಎಸ್ಆರ್ಪಿ ಅಲರ್ಟ್ ಆಗಿರಬೇಕೆಂಬುದು ಸಭೆಯಲ್ಲಿ ನಿರ್ಧಾರವಾಗಲಿದೆ. ಹಾಗೆ ಯಾರೇ ಅಹಿತಕರ ಘಟನೆ ನಡೆಸಲು ಬಂದರೆ ಮುಂಜಾಗ್ರತವಾಗಿ ಅಂತವರನ್ನು ವಶಕ್ಕೆ ಪಡೆಯಿರಿ. ಪುಡಿ ರೌಡಿಗಳನ್ನು ಬಂಧಿಸುವಂತೆ ಸಭೆಯಲ್ಲಿ ಸೂಚಿಸಿದ್ದಾರೆ.
ಗುಪ್ತಚರ ಇಲಾಖೆ ಫುಲ್ ಅಲರ್ಟ್:
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷದ ಅಭ್ಯರ್ಥಿಗಳು ಹಾಗೂ ಬೆಂಬಲಿಗರ ಮೇಲೆ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ. ಗುಪ್ತಚರ ಇಲಾಖೆ ಈಗಾಗಲೇ ಆರ್ಆರ್ ನಗರ ಸುತ್ತ ನಾಳೆ ಏನು ನಡೆಯುತ್ತದೆ. ಯಾವ ಕಡೆ ಸಂಭ್ರಮ ಮಾಡ್ತಾರೆ. ಎಷ್ಟು ಜನ ಸೇರುತ್ತಾರೆ, ಬೆಂಬಲಿಗರ ಮನಸ್ಥಿತಿ ಏನು ಅನ್ನೋದ್ರ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.