ಬೆಂಗಳೂರು: ಬೆಳ್ಳಂಬೆಳಗ್ಗೆ ಮನೆ ಬಳಿ ಬಂದಿದ್ದವರ ಅಹವಾಲನ್ನು ಸಿಎಂ ಯಡಿಯೂರಪ್ಪ ಸ್ವೀಕರಿಸಿದರು. ಆರೋಗ್ಯ ಇಲಾಖೆ ನೌಕರರ ವರ್ಗಾವಣೆ ಮಾಡಬೇಕು. ಈ ಹಿಂದೆ ವರ್ಗಾವಣೆ ಆಗಿದ್ರೂ ಆದೇಶವನ್ನ ತಡೆಹಿಡಿಯಲಾಗಿದೆ. ಆದಷ್ಟೂ ಬೇಗ ಮೂವ್‌ಮೆಂಟ್ ಆರ್ಡರ್ ನೀಡುವಂತೆ ಸಿಎಂ ಬಿಎಸ್‌ವೈಗೆ ಮನವಿ ಮಾಡಿದರು.
ಇದೇ ವೇಳೆ ಯಡಿಯೂರಪ್ಪನವರಿಗೆ ಭಾವಚಿತ್ರ ನೀಡಿ ಅಭಿಮಾನಿಗಳು ಶುಭಕೋರಿದರು. ಇತ್ತ ಸಿಎಂ ನಿವಾಸಕ್ಕೆ ಡಿಜಿಪಿ ನೀಲಮಣಿ ರಾಜು, ಬೆಂಗಳೂರು ಕಮೀಷನರ್ ಭಾಸ್ಕರ್ ರಾವ್ ದವಳಗಿರಿ ನಿವಾಸಕ್ಕೆ ಭೇಟಿ ನೀಡಿದ್ದರು. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆ, ಇಂದು ಮಧ್ಯಾಹ್ನ12.30ಕ್ಕೆ ಸಿಎಂ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿ ನಡೆಸಲಿದ್ದಾರೆ.