ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಬೃಹತ್ ಲಸಿಕಾ ಅಭಿಯಾನವನ್ನ ನಡೆಸಲಾಗಿದ್ದು, ರಾಜ್ಯಾದ್ಯಂತ 11,601 ಸರ್ಕಾರಿ ಹಾಗೂ 407 ಖಾಸಗಿ ಸೇರಿದಂತೆ ಒಟ್ಟು 12,008 ಕೇಂದ್ರಗಳಲ್ಲಿ ಲಸಿಕೆ ನೀಡಲಾಯ್ತು.
ಒಂದು ತಿಂಗಳ ಕಾಲ ನಡೆಯುತ್ತಿದ್ದ ಲಸಿಕೀಕರಣ ಇಂದು ಒಂದೇ ದಿನ ನಡೆದಿದೆ. ಕಳೆದ ಸೆಪ್ಟೆಂಬರ್ 2 ರಂದು ಒಂದೇ ದಿನ 12ಲಕ್ಷ ಲಸಿಕೆ ಡೋಸ್ ನೀಡಿ, ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ಇಂದು ಬೆಳಗ್ಗೆ 8 ಗಂಟೆಯಿಂದ ಶುರುವಾದ ಲಸಿಕಾಭಿಯಾನ ರಾತ್ರಿ 9:30ರ ತನಕ ನಡೆದಿದ್ದು, ಬಹುತೇಕ ಜಿಲ್ಲೆಗಳಲ್ಲೊ ಟಾರ್ಗೆಟ್ ರೀಚ್ ಆಗಿದೆ. ಕೆಲವು ಭಾಗದಲ್ಲಂತೂ ಟಾರ್ಗೆಟ್ ಮೀರಿ ಲಸಿಕೀಕರಣ ನಡೆದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಲಕ್ಷ ಗುರಿ ಹೊಂದಿಲಾಗಿತ್ತು, ಆದರೆ ಸುಮಾರು 4 ಲಕ್ಷಕ್ಕೂ ಹೆಚ್ಚು ಮಂದಿಗೆ ಡೋಸ್ ನೀಡಿ, ಶೇ. 81ರಷ್ಟುಗುರಿ ಸಾಧಿಸಲಾಗಿದೆ. ಬೆಂಗಳೂರು ನಗರವೂ ಮೊದಲ ಸ್ಥಾನದಲ್ಲಿದ್ದು, ಶಿವಮೊಗ್ಗ, ಧಾರವಾಡ, ರಾಮನಗರ,ಹಾಸನ ಹಾಗೂ ದಾವಣಗೆರೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಹಾವೇರಿಯಲ್ಲಿ ನಿರೀಕ್ಷೆಗೂ ಮೀರಿ ಲಸಿಕೆ ನೀಡಲಾಗಿದೆ..
ಹೇಗಿತ್ತು ಬೃಹತ್ ಲಸಿಕಾಭಿಯಾನ?
ಬೆಳಗ್ಗೆ- 11:30ರೊಳಗೆ- 5,27,419
ಮಧ್ಯಾಹ್ನ- 12:30ರೊಳಗೆ- 6,59,834
ಮಧ್ಯಾಹ್ನ- 1:30ರೊಳಗೆ- 11,60,227
ಮಧ್ಯಾಹ್ನ- 2:30ರೊಳಗೆ- 13,09,935
ಮಧ್ಯಾಹ್ನ- 3:30ರೊಳಗೆ- 15,47,305
ಮಧ್ಯಾಹ್ನ- 4:30ರೊಳಗೆ- 18,18,096
ಸಂಜೆ - 5:30ರೊಳಗೆ- 20,75,820
ಸಂಜೆ- 6:30ರೊಳಗೆ- 23,01,639
ರಾತ್ರಿ- 7:30ರೊಳಗೆ- 26,25,752
ರಾತ್ರಿ- 8:30ರೊಳಗೆ- 26,92,955
ರಾತ್ರಿ- 9:30ರೊಳಗೆ- 27,80,032
ಯಾವ ಜಿಲ್ಲೆಯಲ್ಲಿ ಹೇಗಿತ್ತು ಲಸಿಕಾಭಿಯಾನ
ಜಿಲ್ಲೆ- ಗುರಿ- ಸಾಧನೆ
ಬೆಂಗಳೂರು ನಗರ - 50,000-70,282-141%
ಶಿವಮೊಗ್ಗ - 80,000- 1,05,400- 132%
ಧಾರವಾಡ- 85,000- 1,07,799- 127%
ರಾಮನಗರ- 50,000- 61,633 - 123%
ಹಾಸನ- 80000 - 95627-120%
ದಾವಣಗೆರೆ- 80000 - 88,918 -111%
ಚಿಕ್ಕಬಳ್ಳಾಪುರ- 70000- 73,298- 105%
ಚಿಕ್ಕಮಗಳೂರು -60000- 62,684- 104%
ತುಮಕೂರು -125000- 1,27,407- 102%
ಹಾವೇರಿ -70000- 70,788- 101%
ಬಾಗಲಕೋಟೆ -75000- 75,332- 100%
ಬಳ್ಳಾರಿ -150000- 1,40,571- 94%
ಚಿತ್ರದುರ್ಗ -70000- 65,569-94%
ಮಂಡ್ಯ- 125000-1,17,004-94%
ದಕ್ಷಿಣಕನ್ನಡ -150000-1,34,577-90%
ಕೊಡಗು -20000-17,770- 89%
ಉತ್ತರಕನ್ನಡ- 85,000-74,034-87%
ಬೆಂಗಳೂರು ಗ್ರಾಮಾಂತರ-60,000-51,356-86%
ಬೆಳಗಾವಿ- 3,00,000-2,49,217- 83%
ಬೀದರ್- 70,000-58,110-83%
ಮೈಸೂರು-1,25,000- 1,01,159- 81%
ಬಿಬಿಎಂಪಿ-5,00,000- 4,04,496- 81%
ವಿಜಯಪುರ- 1,00,000- 80,582-81%
ಕೋಲಾರ- 75,000- 58,457- 78%
ಯಾದಗಿರಿ- 45,000- 34,384- 76%
ಕಡಿಮೆ ಲಸಿಕೀಕರಣ
ಚಾಮರಾಜನಗರ- 50,000 -33,882 - 68%
ಗದಗ - 50,000- 33,719 - 67%
ಉಡುಪಿ- 80,000- 49,928- 62%
ರಾಯಚೂರು-85,000-48,061-57%
ಕೊಪ್ಪಳ- 60,000- 32,882 - 55%
ಕಲಬುರಗಿ-1,50,000-55,106- 37%
ಇದನ್ನು ಓದಿ:ದೇಶಾದ್ಯಂತ 2.25 ಕೋಟಿ ಕೋವಿಡ್ ಲಸಿಕೆ ಡೋಸ್ ವಿತರಣೆ: ಮೋದಿ ಜನ್ಮದಿನದಂದು ಐತಿಹಾಸಿಕ ದಾಖಲೆ