ETV Bharat / state

ಬೆಂಗಳೂರಿನಲ್ಲಿ ಇಂದು ಮತ್ತೆ 2 ಕೊರೊನಾ ಕೇಸ್​​​ ಪತ್ತೆ - ವೈಟ್ ಫೀಲ್ಡ್

ತಮಿಳುನಾಡಿನಿಂದ ಬೆಂಗಳೂರಿಗೆ ಹಿಂದಿರುಗಿದ 65 ವರ್ಷದ ಮಹಿಳೆ P-2259ಗೆ ಕೊರೊನಾ ದೃಢಪಟ್ಟಿದೆ. ಇನ್ನೊಂದೆಡೆ ಬೆಂಗಳೂರು ಹೊರವಲಯದ ವೈಟ್ ಫೀಲ್ಡ್ ಬಳಿಯ ವರ್ತೂರಿನಲ್ಲಿ ಮತ್ತೊಂದು ಹೊಸ ಕೊರೊನಾ ಪ್ರಕರಣ ದೃಢಪಟ್ಟಿದೆ.

2ಕೊರೊನಾ
2ಕೊರೊನಾ
author img

By

Published : May 26, 2020, 2:42 PM IST

ಬೆಂಗಳೂರು: ನಗರದಲ್ಲಿಂದು ಎರಡು ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ತಮಿಳುನಾಡಿನಿಂದ ವಾಪಸಾಗಿದ್ದ 65 ವರ್ಷದ ಮಹಿಳೆ ಹಾಗೂ ವೈಟ್ ಫೀಲ್ಡ್ ಬಳಿಯ ವರ್ತೂರಿನಲ್ಲಿ ಹೊಸ ಕೊರೊನಾ ಪಾಸಿಟಿವ್​ ಪ್ರಕರಣ ದೃಢಪಟ್ಟಿದೆ.

ತಮಿಳುನಾಡಿನಿಂದ ಬೆಂಗಳೂರಿಗೆ ಹಿಂದಿರುಗಿದ 65 ವರ್ಷದ ಮಹಿಳೆ P-2259ಗೆ ಕೊರೊನಾ ದೃಢಪಟ್ಟಿದೆ. ಇನ್ನೊಂದೆಡೆ ಬೆಂಗಳೂರು ಹೊರವಲಯದ ವೈಟ್ ಫೀಲ್ಡ್ ಬಳಿಯ ವರ್ತೂರಿನಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಇಲ್ಲಿನ ಸಿದ್ಧಾಪುರದ ನಿವಾಸಿಯಾಗಿದ್ದ P-2258, 33 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಈತ ಕೋಲ್ಕತ್ತಾದಿಂದ ಬಂದಿದ್ದ. ಮೂಳೆ ಸಂಬಂಧಿತ ಚಿಕಿತ್ಸೆಗಾಗಿ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ. ವರ್ತೂರಿನಲ್ಲಿ ಅಣ್ಣನ ಮನೆಯಲ್ಲಿ ಒಟ್ಟು 5 ಜನ ಕುಟುಂಬಸ್ಥರು ವಾಸವಾಗಿದ್ದರು. ಅನಾರೋಗ್ಯ ಹಿನ್ನೆಲೆ ಸರ್ಜರಿ ಅಗತ್ಯವಿತ್ತು. ಸರ್ಜರಿಗೂ ಮುನ್ನ ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ.

ಕುಟುಂಬದ 4 ಜನರನ್ನು ಪ್ರಾಥಮಿಕ ಸಂಪರ್ಕಿತರೆಂದು ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕಿತರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ಈತ ವಾಸಿಸುತ್ತಿದ್ದ ಪ್ರದೇಶವನ್ನು ಕಂಟೇನ್​ಮೆಂಟ್ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯನ್ನು ಕೂಡಾ ಸ್ವಚ್ಛ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.