ETV Bharat / state

ಟಿಪ್ಪುವನ್ನು ಆರಾಧಿಸುವವರು ಕನ್ನಡದ ವಿರೋಧಿಗಳು: ಸಿ ಟಿ ರವಿ

ಟಿಪ್ಪುವನ್ನು ಆರಾಧಿಸುವವರು ಕನ್ನಡದ ವಿರೋಧಿಗಳು. ಅಂತವರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ತಾಯಿ, ಅಜ್ಜಿ ಎಲ್ಲರೂ ಕನ್ನಡಿಗರೆ ಎಂದು ಸಿ ಟಿ ರವಿ ವಿಧಾನಸೌಧದಲ್ಲಿ ಹೇಳಿದ್ದಾರೆ.

CT Ravi
ಸಿ ಟಿ ರವಿ
author img

By

Published : Sep 14, 2022, 2:24 PM IST

Updated : Sep 14, 2022, 2:51 PM IST

ಬೆಂಗಳೂರು: ಟಿಪ್ಪುವನ್ನು ಆರಾಧಿಸುವವರು ಕನ್ನಡದ ವಿರೋಧಿಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಾಗ್ದಾಳಿ ನಡೆಸಿದರು.

ಸಿ ಟಿ ರವಿ ವಿರುದ್ಧ ಸಿ ಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂತವರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ತಾಯಿ, ಅಜ್ಜಿ ಎಲ್ಲರೂ ಕನ್ನಡಿಗರೆ. ನಾನು ಕನ್ನಡವನ್ನೇ ಮಾತನಾಡ್ತೀನಿ. ಕನ್ನಡದಲ್ಲೇ ಬೈಯ್ಯುತ್ತೇನೆ ಎಂದು ಕಿಡಿಕಾರಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಾಗ್ದಾಳಿ

ಜೆಡಿಎಸ್​ ಟೀಕಿಸಿದ ಸಿ ಟಿ ರವಿ: ಹಿಂದಿ ದಿವಸ್ ವಿರುದ್ಧ ಜೆಡಿಎಸ್‌ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, 1949ರಲ್ಲಿ ಕೇಂದ್ರದಲ್ಲಿ ಅಮಿತ್ ಶಾ ಇದ್ರಾ?. ಆವತ್ತು ನೆಹರು, ಪಟೇಲರು ಅಧಿಕಾರದಲ್ಲಿದ್ದರು. ಸಂಪರ್ಕ ಭಾಷೆ ಹಿಂದಿ ಮಾಡಿದ್ದು ಅಮಿತ್ ಶಾ ಅವರಾ?. 1996 ರಲ್ಲಿ ದೇವೇಗೌಡ್ರು ಪ್ರಧಾನಿಯಾಗಿದ್ದಾಗ ಹಿಂದಿ ದಿವಸ್ ಆಚರಣೆ ಮಾಡಿಲ್ವಾ?. ಜನತಾ ಸಮೂಹದ ನಾಯಕರು ಬೆಂಗಳೂರಿಗೆ ಬಂದಾಗ ಬೃಹತ್ ಸಮಾವೇಶ ನಡೆಸಿ ಹಿಂದಿಯಲ್ಲೇ ಭಾಷಣ ಮಾಡಿದ್ರು ಎಂದು ಟೀಕಿಸಿದರು.

1990 ರಲ್ಲಿ ಇದ್ದ ರಾಜಕಾರಣ ಯಾಕೆ ಈಗ ಇಲ್ಲ?. ನಾವು ಎಲ್ಲ ಭಾಷೆಗಳಿಗೂ ಸಮಾನ ಗೌರವ, ಅವಕಾಶ ಕೊಟ್ಟಿದ್ದೇವೆ. NEP ಮೂಲಕ ಎಲ್ಲಾ ಭಾಷೆ ಕಲಿಯಲು ಅವಕಾಶ ಮಾಡಿಕೊಡಲಾಗಿದೆ‌. ಭಾರತೀಯತೆ ಅಂದ್ರೆ ಕೇವಲ ಹಿಂದಿ ಅಲ್ಲ. ಎಲ್ಲ ಭಾಷೆಗಳನ್ನು ಒಳಗೊಳ್ಳುವುದು ಭಾರತೀಯತೆ. ಜೆಡಿಎಸ್‌ನವರಿಗೆ ಮೋದಿ, ಅಮಿತ್ ಶಾ ವಿಚಾರ ಬಂದಾಗ ಮಾತ್ರ ಹಿಂದಿ ವಿರೋಧ ನೆನಪಾಗುತ್ತದೆ. ಕೇಂದ್ರ ಸರ್ಕಾರ ಯಾರ ಮೇಲಾದ್ರೂ ಹಿಂದಿ ಹೇರಿದೆಯಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಹಿಂದಿ ದಿವಸ ಆಚರಣೆ ಮಾಡಬಾರದು: ಕುಮಾರಸ್ವಾಮಿ ಆಗ್ರಹ

ಎಲ್ಲರೂ ಕನ್ನಡ ಮಾತನಾಡ್ತಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಕನ್ನಡ ಮಾತನಾಡಲು ಅವಕಾಶ ಇದೆ. ದೆಹಲಿಯಲ್ಲೂ ಕನ್ನಡ ರಾಜ್ಯೋತ್ಸವ ಮಾಡ್ತೀವಿ. ಬೇರೆ ರಾಜ್ಯದ ಉತ್ಸವಗಳನ್ನು ಮಾಡ್ತೀವಿ. ಭಾರತ ತೇರೆ ತುಕ್ಡೆ ಹೋಂಗೆ ಎನ್ನುವ ರೀತಿ ಮಾಡಲ್ಲ ಎಂದು ಟಾಂಗ್ ನೀಡಿದರು.

Last Updated : Sep 14, 2022, 2:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.