ಆನೇಕಲ್(ಬೆಂಗಳೂರು): ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿ ಹಾಗೂ ಸಿಂಹದ ಮರಿಗಳ ಕಲರವ ಮತ್ತಷ್ಟು ಹೆಚ್ಚಾಗಿದೆ. ಜೈವಿಕ ಉದ್ಯಾನದ ಹುಲಿ ಅನುಷ್ಕಾಗೆ ಮುದ್ದಾದ ಎರಡು ಹುಲಿ ಮರಿಗಳು ಹಾಗೂ ಸನಾ ಎಂಬ ಸಿಂಹಿಣಿಗೆ ಎರಡು ಮುದ್ದಾದ ಮರಿಗಳು ಜನಿಸಿವೆ.
ಬನ್ನೇರುಘಟ್ಟ ಝೂ ಆಸ್ಪತ್ರೆಯಲ್ಲಿ ಹುಲಿ ಹಾಗೂ ಸಿಂಹದ ಮರಿಗಳಿಗೆ ಆರೈಕೆ ಮಾಡಲಾಗುತ್ತಿದೆ. ಆದರೆ ಹುಟ್ಟಿದ ಬಳಿಕ ತಾಯಿಯಿಂದ ಸೂಕ್ತ ಅರೈಕೆ ಸಿಗದ ಕಾರಣ ಮೃಗಾಲಯ ಸಿಬ್ಬಂದಿಯಿಂದಲೇ ಮರಿಗಳ ಆರೈಕೆ ನಡೆಯುತ್ತಿದೆ. ಮೇಕೆ ಹಾಲು ಹಾಗೂ ಪೌಷ್ಟಿಕಾಂಶದ ಟಾನಿಕ್ ನೀಡಿ ಮರಿಗಳ ಆರೈಕೆ ಮಾಡಲಾಗುತ್ತಿದೆ.
ಸದ್ಯ ಎರಡು ಹುಲಿ ಹಾಗೂ ಎರಡು ಸಿಂಹದ ಮರಿಗಳು ಆರೋಗ್ಯವಾಗಿವೆ. ಬನ್ನೇರುಘಟ್ಟ ಉದ್ಯಾನದಲ್ಲಿ ಹುಲಿ ಹಾಗೂ ಸಿಂಹದ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, 19 ಹುಲಿಗಳು ಹಾಗೂ 24 ಸಿಂಹಗಳಿವೆ.