ETV Bharat / state

ನೆರೆ ಸಂತ್ರಸ್ತರಿಗೆ ಸೂರು ಕಟ್ಟಿಕೊಡಲು 3ತಿಂಗಳ ಗಡುವು: ಗಡುವು ಮೀರಿದ್ರೆ ಸಸ್ಪೆಂಡ್​​-  ಆರ್.ಅಶೋಕ್ ಎಚ್ಚರಿಕೆ! - r ashok latest news

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಕಂದಾಯ ಸಚಿವ ಆರ್.ಅಶೋಕ್ ವಿಡಿಯೋ ಕಾನ್ಫರೆನ್ಸ್ ಮೂಲಕ ನೆರೆ ಪರಿಹಾರ ಪ್ರಗತಿ ಪರಿಶೀಲನೆ ನಡೆಸಿದರು. ನೆರೆ ಸಂತ್ರಸ್ತರಿಗೆ ಸೂರು ಕಟ್ಟಿಕೊಡುವ ಕೆಲಸ ಮುಗಿಸಲು ಮೂರು ತಿಂಗಳ ಗಡುವು ನೀಡಿದ್ದು, ಅಷ್ಟರಲ್ಲಿ ಕೆಲಸ ಮುಗಿಸದೇ ಇದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.

Three months time to do neighboring victims home: R Aahok!
ನೆರೆ ಸಂತ್ರಸ್ತರಿಗೆ ಸೂರು ಕಟ್ಟಿಕೊಡಲು ಮೂರು‌ ತಿಂಗಳ ಗಡುವು, ನಿರ್ಲಕ್ಷ್ಯ ಮಾಡಿದ‌ ಅಧಿಕಾರಿಗಳ ಅಮಾನತು: ಆರ್.ಅಶೋಕ್ !
author img

By

Published : Jan 29, 2020, 5:04 PM IST

ಬೆಂಗಳೂರು: ನೆರೆ ಸಂತ್ರಸ್ತರಿಗೆ ಸೂರು ಕಟ್ಟಿಕೊಡುವ ಕೆಲಸ ಮುಗಿಸಲು ಮೂರು ತಿಂಗಳ ಗಡುವು ನೀಡಿದ್ದು, ಅಷ್ಟರಲ್ಲಿ ಕೆಲಸ ಮುಗಿಸದೇ ಇದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಕಂದಾಯ ಸಚಿವ ಆರ್.ಅಶೋಕ್ ವಿಡಿಯೋ ಕಾನ್ಫರೆನ್ಸ್ ನಡೆಸಿ, ನೆರೆ ಪರಿಹಾರ ಪ್ರಗತಿ ಪರಿಶೀಲನೆ ನಡೆಸಿದರು.

ಸಚಿವ ಆರ್.ಅಶೋಕ್

ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಶೋಕ್, ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ‌ ಜೊತೆ ವಿಡಿಯೋ ಸಂವಾದ ನಡೆಸಿದ್ದೇನೆ, ವಿಶೇಷವಾಗಿ ಪ್ರವಾಹದಿಂದ ಸಂತ್ರಸ್ತರಾದ ಜನರ ಸಂಕಷ್ಟಕ್ಕೆ ಕೈಗೆತ್ತಿಕೊಂಡಿರುವ ಪರಿಹಾರ ಕಾರ್ಯದ ಪ್ರಗತಿ ಪರಿಶೀಲನೆ ಮಾಡಿದ್ದೇನೆ, ಇನ್ನು ಮೂರು ತಿಂಗಳಿನಲ್ಲಿ ಎಲ್ಲ ಮನೆ ಪೂರ್ಣಗೊಳಿಸಲು ಗಡುವು ನೀಡಿದ್ದು‌,15 ದಿನದಲ್ಲಿ ಶೇ.50 ರಷ್ಟು ಮನೆಗಳ ನಿರ್ಮಾಣ ಆಗಬೇಕು ಎಂದು ಸೂಚಿಸಲಾಗಿದೆ ಎಂದರು.

9009 ಮನೆಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಮನೆಗಳ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ, ಅಗತ್ಯ ಹಣ ಬಿಡುಗಡೆ ಮಾಡಲಾಗಿದೆ. ಡಿಸಿ ಖಾತೆಯಲ್ಲೂ 5 ಕೋಟಿಗೂ ಕಡಿಮೆ‌ ಹಣ ಇರದಂತೆ ಸೂಚಿಸಲಾಗಿದೆ, ಮನೆ ಕಳೆದುಕೊಂಡವರಿಗೆ ಎರಡನೇ ಕಂತು ಒಂದು ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದು ಅದನ್ನು ಪಡೆದುಕೊಂಡು ಕೆಲಸ ಮುಂದುವರೆಸುವಂತೆ ಮನೆ ಮಾಲೀಕರಿಗೆ ತಿಳಿಸಿದರು.

ಮನೆ ನಿರ್ಮಾಣ, ದುರಸ್ತಿಗೆ ಎ.ಬಿ.ಸಿ ಎನ್ನುವ ಕೆಟಗರಿ ಮಾಡಿದ್ದನ್ನು ಈಗ ಮಾರ್ಪಡಿಸಲಾಗಿದ್ದು, ಭಾಗಶಃ ರಿಪೇರಿಗೆ ಮೂರು ಲಕ್ಷ, ಪೂರ್ತಿ ಹೊಸದಾಗಿ ಮನೆ ಕಟ್ಟಲು ಐದು ಲಕ್ಷ ಕೊಡಲಾಗುತ್ತಿದೆ. ದುರಸ್ತಿ ಬದಲು ಹೊಸದಾಗಿ ಮನೆ ಕಟ್ಟಲು ಮುಂದಾದರೆ ಅವರಿಗೂ ಐದು ಲಕ್ಷ ಕೊಡಲಾಗುತ್ತದೆ ಎಂದು ತಿಳಿಸಿದರು.

ಧನುರ್ಮಾಸದ ಕಾರಣ ಮನೆಗಳ ದುರಸ್ತಿ, ಮುರು ನಿರ್ಮಾಣ ವಿಳಂಬವಾಯಿತು, ಇದೀಗ ಅದಕ್ಕೆ ವೇಗ ನೀಡಲಾಗುತ್ತದೆ. ಪ್ರತೀ ಪಿಡಿಒಗೆ 15 ಮನೆಗಳ ಜವಾಬ್ದಾರಿ ಕೊಡಲು ಸೂಚಿಸಿದ್ದೇನೆ, ಪ್ರಗತಿ ಸಾಧಿಸದೇ ಇದ್ದಲ್ಲಿ ಪಿಡಿಒಗಳ ಅಮಾನತು ಮಾಡುವಂತೆ ಸೂಚಿಸಿದ್ದೇನೆ ಎಂದರು.

ನೆರೆಪೀಡಿತ ಪೀಡಿತ ಪ್ರದೇಶಗಳಲ್ಲಿ ಬಿದ್ದಿದ್ದ ವಿದ್ಯುತ್ ಕಂಬ ಮರು ಸ್ಥಾಪನೆ ಮಾಡಲಾಗಿದೆ, ಒಂದು ಕಡೆ ಸೇತುವೆ ಬಿದ್ದ ಕಾರಣ ವಸ್ತು ಸಾಗಣೆ ಆಗಿಲ್ಲ, ಸೋಲಾರ್ ವ್ಯವಸ್ಥೆ ಮಾಡಿದ್ದೇವೆ, ಹಾನಿಗೊಳಗಾಗಿದ್ದ ಶಾಲಾಕಟ್ಟಡಗಳಲ್ಲಿ ಶೇ.90 ರಷ್ಟು ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿದೆ, ಉಳಿದ ಶೇ.10 ರಷ್ಟು ಕಟ್ಟಡಗಳ ದುರಸ್ತಿ ಕಾರ್ಯವೂ ಆದಷ್ಟು ಬೇಗ ಆರಂಭಿಸಲಾಗುತ್ತದೆ. ಕುಡಿವ ನೀರಿನ ಬೋರ್​ಗಳಿಗೆ ಶೇ.100 ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಆಡಳಿತವೇ ಹಳ್ಳಿಗಳಿಗೆ ತೆರಳಬೇಕು ಎನ್ನುವ ಕಾರಣಕ್ಕೆ ತಿಂಗಳಿಗೆ ಒಂದು ದಿನ ಹಳ್ಳಿಗೆ ತೆರಳುವಂತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಗೆ ಸೂಚನೆ ನೀಡಿದ್ದೇನೆ. ತಿಂಗಳ ಮೂರನೇ ಶನಿವಾರ ಹಳ್ಳಿಗೆ ತೆರಳಲು ಒಪ್ಪಿದ್ದಾರೆ, ಅಂದು ಬೆಳಗ್ಗೆ 10 ರಿಂದ‌ ಸಂಜೆ 5 ರವರೆಗೆ ಕಡ್ಡಾಯವಾಗಿ ಹಾಜರಿದ್ದು ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರ, ಸಮಸ್ಯೆಗಳ ಪರಿಶೀಲನೆ, ಜಾಗೃತಿ ಕಾರ್ಯಕ್ರಮ ಮಾಡಬೇಕು. ರಾಜ್ಯದಲ್ಲಿ 30 ಸಾವಿರ ಹಳ್ಳಿ ಇವೆ, ಒಂದು ಬಾರಿಗೆ ಒಂದು ಸಾವಿರ ಹಳ್ಳಿ ತಲುಪಲಿದ್ದೇವೆ, ಮೂರು ನಾಲ್ಕು ವರ್ಷದಲ್ಲಿ ಎಲ್ಲಾ ಹಳ್ಳಿ ಕವರ್ ಮಾಡಲಿದ್ದೇವೆ ಎಂದರು.

ನಾನು ಕೂಡಾ ಹಳ್ಳಿ ವಾಸ್ತವ್ಯ ಮಾಡಲಿದ್ದೇನೆ, ಕೇವಲ ಉದ್ಘಾಟನೆ ಮಾಡಲ್ಲ ನಾನು ಇಡೀ ದಿನ ಹಳ್ಳಿಯಲ್ಲಿ ಇರಲಿದ್ದೇನೆ ಎಂದರು. ಎಂಟನೆ ಜನಗಣತಿ ಕಾರ್ಯ ಏಪ್ರಿಲ್ 15ರಿಂದ ಮೇ 25ರವರಗೆ ನಡೆಯುತ್ತಿದೆ. ಮೊಬೈಲ್ ಆಪ್ ಮೂಲಕವೇ ಜನಗಣತಿ ನಡೆಸಲು ನಿರ್ಧರಿಸಲಾಗಿದೆ. ಕಾಗದ ರಹಿತ ಜನಗಣತಿ ಮಾಡುವುದು ನಮ್ಮ ಉದ್ದೇಶವಾಗಿದ್ದು, ದೇಶದಲ್ಲಿ ಮೊದಲ ಕಾಗದ ರಹಿತ ಜನಗಣತಿಯಲ್ಲಿ ಯಶಸ್ವಿಯಾಗುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.