ETV Bharat / state

ಶಾಸಕ ಟಿಬಿ ಜಯಚಂದ್ರಗೆ ಬೆದರಿಕೆ ಕರೆ.. ಸಚಿವ ಎಚ್​ಕೆ ಪಾಟೀಲ ಹೇಳಿದ್ದೇನು? - ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ

ಕಾಂಗ್ರೆಸ್​ ಹಿರಿಯ ಶಾಸಕ ಟಿಬಿ ಜಯಚಂದ್ರಗೆ ಬೆದರಿಕೆ ಕರೆ ಬಂದಿರುವುದು ತಿಳಿದು ಬಂದಿದೆ.

Threatening call to MLA TB Jayachandra  HK Patil Reaction on threatening call  former minister TB Jayachandra news  ಶಾಸಕ ಟಿಬಿ ಜಯಚಂದ್ರಗೆ ಬೆದರಿಕೆ ಕರೆ  ಸಚಿವ ಎಚ್​ಕೆ ಪಾಟೀಲ ಹೇಳಿದ್ದೇನು  ನೈಸ್ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಒತ್ತಾಯ  ಕ್ರಮಕ್ಕೆ ಒತ್ತಾಯಿಸಿದ್ದ ಶಾಸಕ ಟಿಬಿ ಜಯಚಂದ್ರಗೆ ಬೆದರಿಕೆ  ಮಾಜಿ ಸಚಿವ ಜಯಚಂದ್ರಗೆ ಸೂಕ್ತ ಭದ್ರತೆ  ನೈಸ್‌ ಸಂಸ್ಥೆಯ ಹಗರಣ  ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ  ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ
ಸಚಿವ ಎಚ್​ಕೆ ಪಾಟೀಲ ಹೇಳಿಕೆ
author img

By

Published : Jul 29, 2023, 4:38 PM IST

Updated : Jul 29, 2023, 6:08 PM IST

ಸಚಿವ ಎಚ್​ಕೆ ಪಾಟೀಲ ಹೇಳಿಕೆ

ಬೆಂಗಳೂರು : ಸಿರಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ ಬಂದಿದೆ ಎಂದು ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ಸಚಿವರಾಗಿದ್ದ ಅವಧಿಯಲ್ಲಿ ಟಿಬಿ ಜಯಚಂದ್ರ ನೈಸ್‌ ಸಂಸ್ಥೆಯ ಹಗರಣಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದರು. ಅಲ್ಲದೇ ಆ ವರದಿಯನ್ವಯ ನೈಸ್‌ ಸಂಸ್ಥೆಯ ಮೇಲೆ ಕ್ರಮ ಜಾರಿಗೊಳಿಸುವಂತೆ ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಆಗ್ರಹಿಸಿದ್ದರು.

ಅಂದಿನಿಂದಲೂ ಜಯಚಂದ್ರರಿಗೆ ಸತತವಾಗಿ ಬೇರೆ ಬೇರೆ ನಂಬರುಗಳಿಂದ ದೂರವಾಣಿ ಕರೆ ಬರಲಾರಂಭಿಸಿವೆ. ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಒಡ್ಡಲಾಗುತ್ತಿದೆ. ಆದ್ದರಿಂದ ಕೂಡಲೇ ಕಾರ್ಯ ಪ್ರವೃತ್ತರಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಯಚಂದ್ರರ ವಿಶೇಷ ಕರ್ತವ್ಯಾಧಿಕಾರಿ ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ.

ನಗರದ ಡಾಲ​ರ್ಸ್​ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಇದ್ದ ವೇಳೆ ಜಯಚಂದ್ರ ಅವರಿಗೆ ಕರೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸಂಜಯನಗರ ಠಾಣೆ ಇನ್ಸ್‌ಪೆಕ್ಟರ್‌ ಗುರುಪ್ರಸಾದ್‌ ಅವರು, ಜಯಚಂದ್ರ ಅವರ ಮನೆಗೆ ತೆರಳಿ ಮಾಹಿತಿ ಪಡೆದಿದ್ದಾರೆ.

ಮಾಜಿ ಸಚಿವ ಜಯಚಂದ್ರಗೆ ಸೂಕ್ತ ಭದ್ರತೆ : 2014 ಮತ್ತು 2016ರ ನಡುವೆ ನಂದಿ ಮೂಲಸೌಕರ್ಯ ಕಾರಿಡಾರ್ ಎಂಟರ್‌ಪ್ರೈಸಸ್‌ನಲ್ಲಿ (ನೈಸ್) ನಡೆದಿರುವ ಅಕ್ರಮಗಳ ಕುರಿತು ಮಾಜಿ ಸಚಿವ ಮತ್ತು ನವದೆಹಲಿಯ ರಾಜ್ಯದ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ಅವರು ವರದಿ ನೀಡಿದ್ದರು. ಇದರ ಬೆನ್ನಲ್ಲೇ ಜೀವ ಬೆದರಿಕೆ ಕರೆ ಬಂದಿದೆ. ಹೀಗಾಗಿ ಅವರಿಗೆ ಸರ್ಕಾರ ಸೂಕ್ತ ಭದ್ರತೆ ನೀಡಲಾಗುವುದು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್​ಕೆ ಪಾಟೀಲ್ ಹೇಳಿದರು.

ಈ ಘಟನೆ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಟಿಬಿ ಜಯಚಂದ್ರ ಅವರಿಗೆ ಜೀವ ಬೆದರಿಕೆ ಬಂದಿದ್ದು ನಿಜ. ನಾನು ಸಹ ಮಾಧ್ಯಮಗಳಲ್ಲಿ ಸಹ ನೋಡಿದ್ದೇನೆ. ಈಗ ಕುರಿತು ಮಾಹಿತಿ ಸಹ ಪಡೆದುಕೊಂಡಿದ್ದೇನೆ ಎಂದರು. ಅವರು ಒಳ್ಳೆಯ ಸಚಿವರಾಗಿದ್ದರು. ಸಮರ್ಥವಾಗಿ ಕೆಲಸ ಮಾಡುತ್ತಾ ಇದ್ದಾರೆ. ಈಗ ನೈಸ್ ಯೋಜನೆ ಕುರಿತು ಒಳ್ಳೆಯ ವರದಿ ಕೊಟ್ಟಿದ್ದಾರೆ. ನಿಷ್ಪಕ್ಷಪಾತ ಹಾಗೂ ಒಳ್ಳೆಯ ವರದಿ ಕೊಡಲಾಗಿದೆ. ಆದರೆ ವರದಿ ಕೊಟ್ಟ ಹಿನ್ನೆಲೆಯಲ್ಲಿ ಕರೆ ಬಂದಿರಬಹುದು. ಟಿಬಿ ಜಯಚಂದ್ರ ಅವರು ಸಹ ಸ್ವತಃ ಹೇಳಿದ್ದಾರೆ. ಅವರಿಗೆ ಕಾನೂನಾತ್ಮಕವಾಗಿ ಏನು ಬೇಕು ಅದನ್ನ ಕೊಡುತ್ತೇವೆ.‌ ಸೂಕ್ತ ರಕ್ಷಣೆ ಸಹ ನೀಡಲಾಗುವುದು. ಜಯಚಂದ್ರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಇಂತಹ ಬೆದರಿಕೆಗೆ ಅವರು ಹೆದರಲ್ಲ ಎಂದು ಸಚಿವರು ಹೇಳಿದರು.

ಶಾಸಕರ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈಗಾಗಲೇ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚೆ ಮಾಡಲಾಗಿದೆ. ಶಾಸಕರ ಅಸಮಾಧಾನ ತಣಿಸಲು ಆಗಸ್ಟ್​ 2 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ದೆಹಲಿಯಲ್ಲಿ ಕರೆದ ಸಭೆಗೂ ಶಾಸಕರ ಅಸಮಾಧಾನಕ್ಕೂ ಸಂಬಂಧ ಬೇಡ. ದೆಹಲಿಯಲ್ಲಿ ಪಕ್ಷದ ವರಿಷ್ಠರು ಮೇಲಿಂದ ಮೇಲೆ ಸಭೆ ಕರೆಯುತ್ತಿರುತ್ತಾರೆ. ಅದೊಂದು ಪಕ್ಷದ ಆಂತರಿಕ ಸಭೆ ಆಗಿದೆ. ದೆಹಲಿ ಸಭೆಗೂ ಶಾಸಕರ‌ ಅಸಮಾಧಾನಕ್ಕೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಶಾಸಕರ ಬೇಡಿಕೆ, ಸಮಸ್ಯೆ ಕುರಿತು ಸುದೀರ್ಘವಾದ ಚರ್ಚೆ ಮಾಡಲಾಗಿದೆ ಎಂದರು.

ವರಿಷ್ಠರಾದ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷರು ಸಭೆ ಕರೆದಿದ್ದು ನಿಜ. ಅಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿಕೆ ಹರಿಪ್ರಸಾದ್ ಹಾಗೂ ಶಾಸಕರ ಅಸಮಾಧಾನ ಕುರಿತು ಸಭೆ ಕರೆದಿಲ್ಲ ಎಂದರು. ಈಗಾಗಲೇ ರಾಜ್ಯದ ಪ್ರವಾಸೋದ್ಯಮ ಹೇಗೆ ಅಭಿವೃದ್ಧಿ ಮಾಡಬೇಕು ಎಂಬ ಚರ್ಚೆ ಮಾಡಲಾಗಿದ್ದು, ಸಾಕಷ್ಟು ಪ್ರವಾಸಿ ತಾಣಗಳಿಗೆ ಜನರು ಹೋಗುತ್ತಿದ್ದಾರೆ‌. ಅಲ್ಲಿ ಮೂಲಸೌಕರ್ಯ ಸೇರಿದಂತೆ ಅಗತ್ಯ ನೆರವು ನೀಡಲಾವುದು ಎಂದರು. ಉಡುಪಿಯ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಮುಖ್ಯಮಂತ್ರಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಕೈಗೊಳ್ಳುತ್ತಾರೆ ಎಂದರು.

ಓದಿ: ಹೆಚ್‌ ಡಿ ದೇವೇಗೌಡರ ವಿರುದ್ಧ ನೈಸ್‌ ಸಂಸ್ಥೆಯ ಮಾನನಷ್ಟ ಪ್ರಕರಣ.. ಮಾಜಿ ಪ್ರಧಾನಿಗೆ ಹಿನ್ನಡೆ

Last Updated : Jul 29, 2023, 6:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.