ETV Bharat / state

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣ: ಸಂಜನಾಗೆ ಕಂಟಕವಾಯ್ತಾ ಆ ಮೂರು ಜನರ ಹೇಳಿಕೆ!? - actress Sanjana Galrani news\

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ಆರೋಪ ಪ್ರಕರಣದಡಿ ಸದ್ಯ ಸಿಸಿಬಿ ಅಧಿಕಾರಿಗಳು ಸಂಜನಾ ಗಲ್ರಾನಿಯನ್ನು ಬಂಧಿಸಿದ್ದಾರೆ. ನಟಿ ಸಂಜನಾ ಬಂಧನಕ್ಕೆ ಆ ಮೂರು ಜನರ ಹೇಳಿಕೆ ಕಂಟಕವಾಯ್ತಾ ಎಂಬ ಮಾತು ಕೇಳಿಬರುತ್ತಿದೆ.

Actress sanjana arrest
ನಟಿ ಸಂಜನಾಗೆ ಬಂಧನ
author img

By

Published : Sep 8, 2020, 3:55 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಡಿ ಸದ್ಯ ಸಿಸಿಬಿ ಅಧಿಕಾರಿಗಳು ಸಂಜನಾ ಗಲ್ರಾನಿಯನ್ನು ಬಂಧಿಸಿದ್ದಾರೆ. ಸದ್ಯ ಮೆಡಿಕಲ್ ಟೆಸ್ಟ್ ನಡೆಸಿದ ನಂತರ ವಿಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯದ ಎದುರು ಹಾಜರುಪಡಿಸಲಿದ್ದಾರೆ.

ನಟಿ ಸಂಜನಾಗೆ ಬಂಧನಕ್ಕೆ ಕಾರಣವಾಯ್ತಾ ಆ ಮೂವರ ಹೇಳಿಕೆ?: ನಟಿ ಸಂಜನಾಗೆ ಮೊದಲ ಕಂಟಕ ಸ್ನೇಹಿತ ರಾಹುಲ್, ಈತ ಸಿಸಿಬಿ ಅಧಿಕಾರಿಗಳೆದುರು ತನ್ನ ಹೇಳಿಕೆಯಲ್ಲಿ ಸಂಜನಾ ರಹಸ್ಯ ಬಾಯ್ಬಿಟ್ಟಿದ್ದಾನೆ ಎನ್ನಲಾಗ್ತಿದೆ.

ಎರಡನೇ ಕಂಟಕ ಇವೆಂಟ್ ಆರ್ಗನೈಸರ್ ಪೃಥ್ವಿ ಶೆಟ್ಟಿ. ಈತ ಸಂಜನಾ ಭಾಗವಹಿಸುತ್ತಿದ್ದ ಪಾರ್ಟಿಗಳ‌ ವಿವರ ನೀಡಿದ್ದ. ಮೂರನೇ ಕಂಟಕ ನಿನ್ನೆ ಬಂಧನವಾದ ನಿಯಾಜ್​. ಈತನ ಮೂಲಕ ಸಂಜನಾ ಡ್ರಗ್ಸ್​ ಪಡೆದುಕೊಂಡಿದ್ದಳು ಎಂಬ‌ ಮಾಹಿತಿ ನೀಡಿದ್ದ. ಈ ಮೂಲಕ ನಟಿ ಸಂಜನಾಗೆ ಮೂರು ಮಂದಿಯ ಹೇಳಿಕೆ ಕಂಟಕವಾಗಿದ್ದು, ಸದ್ಯ ಇದರ ಆಧಾರದ ಮೇಲೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಸಂಜನಾ ಕೋವಿಡ್​ ವರದಿ ನೆಗೆಟಿವ್​: ನಟಿ ಸಂಜನಾ ಗಲ್ರಾನಿಯ ಕೊರೊನಾ ಪರೀಕ್ಷೆಯ ವರದಿ ನೆಗೆಟಿವ್​ ಬಂದಿದೆ. ಮತ್ತೊಂದೆಡೆ ಸಿಸಿಬಿ ಅಧಿಕಾರಿಗಳು ಸಂಜನಾ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.