ಬೆಂಗಳೂರು : ಕನ್ನಡ ಭಾವ-ಬದುಕು ಕಲ್ಪನೆಯೊಂದಿಗೆ ಕನ್ನಡ ನಮ್ಮತನದ ಬಗ್ಗೆ ಚಿಂತನ-ಮಂಥನ ಕಾರ್ಯಕ್ರಮವನ್ನು ಬೆಂಗಳೂರಿನ ಮಣಿಪಾಲ್ ಸೆಂಟರ್ನಲ್ಲಿ ಆಯೋಜಿಸಲಾಗಿತ್ತು.
ಕನ್ನಡ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಭರಣ ಮಾತನಾಡಿ, ಭವಿಷ್ಯದ ಕನ್ನಡದ ಬಗ್ಗೆ ಯೋಚಿಸಬೇಕು. ಕನ್ನಡ ಬೆಳೆಸಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಲು ಆಂದೋಲನವಾಗಬೇಕಿದೆ. ಕಡ್ಡಾಯವಾಗಿ ಕನ್ನಡರಿಗೆ ಕೆಲಸ ಅಂತಾ ಇಲ್ಲ. ಈ ವರ್ಷವನ್ನು ಕನ್ನಡ ಕಾಯಕ ವರ್ಷವನ್ನಾಗಿ ಆಚರಿಸಬೇಕು ಎಂದರು.
ಈ ಸಮಾರಂಭದ ಮುಖ್ಯ ಅತಿಥಿಯಾಗಿ ಕನ್ನಡ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ, ಸಾಹಿತಿ ಡಾ.ನಾ.ದಾ.ಶೆಟ್ಟಿ, ಜಯ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್, ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಹಾಗೂ ವೇಣುಶರ್ಮಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೇಶವ ಪ್ರಸಾದ್ ಮುಳಿಯ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಇಲ್ಲಿ ಮಂಡನೆಯಾದ ವಿಚಾರಗಳನ್ನು ಕನ್ನಡಕ್ಕಾಗಿ ಕೆಲಸ ಮಾಡುವ ಸಂಸ್ಥೆ-ಸಂಘಟನೆಗಳ ಡ್ಯಾಂಕುಮೇಟ್ಗಳಿಗೆ ಕಳುಹಿಸಿಕೊಡಲಾಯಿತು. ಈ ಕಾರ್ಯಕ್ರಮ ಕನ್ನಡಾಭಿಮಾನ ಬೆಳೆಸಲಿಕ್ಕೆ ನಾಂದಿಯಾಯಿತು.
ಇದನ್ನೂ ನೋಡಿ: ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಂದ ಕನ್ನಡ ರಾಜ್ಯೋತ್ಸವ ಆಚರಣೆ - ನೇರಪ್ರಸಾರ