ETV Bharat / state

ಇದು ಮೋದಿಯವರು ಕೊಡ್ತಾ ಇರುವ ಲಸಿಕೆ, ಅದರ ಕ್ರೆಡಿಟ್ ಅವರಿಗೆ ಸಲ್ಲುತ್ತದೆ : ಸಚಿವ ಆರ್ ಅಶೋಕ್

author img

By

Published : Jun 9, 2021, 6:57 PM IST

ಇದು ಸರ್ಕಾರದ ಫಂಡ್. ಸರ್ಕಾರದ ಹಣ ಹೇಗೆ ಖರ್ಚು ಮಾಡಬೇಕು ಎಂದು ತೀರ್ಮಾನ ಮಾಡೋದು ಸರ್ಕಾರ. ಕಾಂಗ್ರೆಸ್ ಪಕ್ಷಕ್ಕೆ ಆ ಜವಾಬ್ದಾರಿ ಕೊಟ್ಟಿಲ್ಲ ಎಂದು ಕಿಡಿಕಾರಿದರು. ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಹಣವನ್ನು ಕೊಡ್ತೇವೆ ಎಂದು ಕಾಂಗ್ರೆಸ್ ಬೊಬ್ಬೆ ಹೊಡೀತಿ. ಅವರು ಪಾರ್ಟಿ ಫಂಡ್ ನೀಡಿ ಬೊಬ್ಬೆ ಹೊಡೆಯಲಿ..

r-ashok
ಸಚಿವ ಆರ್ ಅಶೋಕ್

ಬೆಂಗಳೂರು : ಇದು ಮನಮೋಹನ್ ಸಿಂಗ್ ಸರ್ಕಾರ, ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಸರ್ಕಾರ ಕೊಡುತ್ತಿರುವ ಲಸಿಕೆ ಅಲ್ಲ. ಇದು ಮೋದಿ ಸರ್ಕಾರ ಕೊಡುತ್ತಿರುವ ಲಸಿಕೆ. ಹಾಗಾಗಿ, ಇದರ ಕ್ರೆಡಿಟ್ ಅವರಿಗೆ ಸಲ್ಲುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೂರು ಕೋಟಿ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ತನ್ನ ಫಂಡ್​ನಲ್ಲಿ ಎಷ್ಟೇ ಕೊಟ್ರೂ ತಗೊತೀವಿ. ಆದರೆ, ಇದು ಕಾಂಗ್ರೆಸ್ ಫಂಡ್ ಅಲ್ಲ. ಅಷ್ಟು ಹಣ ಅವರ ಕಚೇರಿಯಲ್ಲಿ ಇಲ್ಲ ಅನ್ನಿಸುತ್ತೆ.

ಇದು ಸರ್ಕಾರದ ಫಂಡ್. ಸರ್ಕಾರದ ಹಣ ಹೇಗೆ ಖರ್ಚು ಮಾಡಬೇಕು ಎಂದು ತೀರ್ಮಾನ ಮಾಡೋದು ಸರ್ಕಾರ. ಕಾಂಗ್ರೆಸ್ ಪಕ್ಷಕ್ಕೆ ಆ ಜವಾಬ್ದಾರಿ ಕೊಟ್ಟಿಲ್ಲ ಎಂದು ಕಿಡಿಕಾರಿದರು. ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಹಣವನ್ನು ಕೊಡ್ತೇವೆ ಎಂದು ಕಾಂಗ್ರೆಸ್ ಬೊಬ್ಬೆ ಹೊಡೀತಿ. ಅವರು ಪಾರ್ಟಿ ಫಂಡ್ ನೀಡಿ ಬೊಬ್ಬೆ ಹೊಡೆಯಲಿ ಎಂದು ಸಚಿವರು ವಾಗ್ದಾಳಿ ನಡೆಸಿದರು. ಮೌಲಾನಾ ಮತ್ತು ಮೌಸಿನ್‌ಗಳಿಗೆ ಧಾರ್ಮಿಕದತ್ತಿ ಇಲಾಖೆಯಿಂದ ಪರಿಹಾರ ಹಣ ನೀಡುತ್ತಿರುವ ಆರೋಪ ಸಂಬಂಧ ಪ್ರತಿಕ್ರಿಯಿಸಿ, ಸರ್ಕಾರ ಆ ರೀತಿ ಮಾಡಲ್ಲ. ಅಲ್ಪಸಂಖ್ಯಾತ ಇಲಾಖೆಯಲ್ಲೇ ಇರುವ ಅನುದಾನ ಬಳಸಿ ಪರಿಹಾರ ನೀಡುತ್ತೇವೆ. ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.

ತೌಕ್ತೆಯಿಂದ 209 ಕೋಟಿ ರೂ.‌ ಹಾನಿ : ತೌಕ್ತೆ ಚಂಡಮಾರುತಕ್ಕೆ ರಾಜ್ಯದಲ್ಲಿ ಒಟ್ಟು 209 ಕೋಟಿ ರೂ.‌ ನಷ್ಟವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ತೌಕ್ತೆ ಚಂಡಮಾರುತದ ಹಾನಿ ಪರಿಶೀಲನೆ ನಡೆಸಿದ್ದು, ಒಟ್ಟು 209 ಕೋಟಿ ರೂ. ನಷ್ಟ ಆಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಓದಿ: ಖರೀದಿಸಿ ತಂದ ಕುದುರೆಗಳ ಮೇಲೆ ಸವಾರಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ: ಬಿಎಸ್​ವೈ ಕುರಿತು ಹೆಚ್​ಡಿಕೆ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.