ಆನೇಕಲ್: ಕಳ್ಳತನ ಮಾಡಲು ಬಂದ ಖದೀಮರು ಸೆಕ್ಯೂರಿಟಿ ಗಾರ್ಡ್ ಕೈ ಕಾಲು ಕಟ್ಟಿ ಹಾಕಿ ಕೊಲೆ ಮಾಡಿರುವ ಘಟನೆ ಆನೇಕಲ್ ಬಳಿಯ ಜಿಗಣಿಯ ಶ್ರೀರಾಮ ಪುರದಲ್ಲಿ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಮಗ್ಬುಲ್ ಅಲಿ(55) ಕೊಲೆಯಾದ ದುರ್ದೈವಿ.
ಮತ್ತೊಬ್ಬ ಗಾರ್ಡ್ ರಸೀದ್ ಉಲ್ ಇಸ್ಲಾಂ ಎಂಬಾತನಿಗೆ ಗಾಯಗಳಾಗಿದ್ದು, ಖದೀಮರಿಂದ ತಪ್ಪಿಸಿಕೊಂಡಿದ್ದಾನೆ. ಸೆಕ್ಯೂರಿಟಿ ಗಾರ್ಡ್ಗಳು ಇಬ್ಬರೂ ಅಸ್ಸಾಂ ಮೂಲದವರಾಗಿದ್ದು, ಜಿಗಣಿಯ ಐಡಿಯಲ್ ಲೇಔಟ್ನಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ 12.30ರ ಸಮಯದಲ್ಲಿ ಬಡಾವಣೆಗೆ ನುಗ್ಗಿರುವ ಕಳ್ಳರು, ಸೆಕ್ಯೂರಿಟಿ ಗಾರ್ಡ್ಗಳ ಕೈಕಟ್ಟಿ ಬಾಯಿಗೆ ಟೇಪ್ ಹಾಕಿ ಕೃತ್ಯವೆಸಗಿದ್ದಾರೆ.
ಬಡಾವಣೆ ಕಾಮಗಾರಿಗೆ ಸಾಕಷ್ಟು ಸಲಕರಣೆಗಳನ್ನು ಶೇಖರಣೆ ಮಾಡಲಾಗಿದ್ದು, ತಡರಾತ್ರಿ ಕಳ್ಳತನಕ್ಕೆ ಮಾರಕಾಸ್ತ್ರಗಳೊಂದಿಗೆ ಕಳ್ಳರು ಬಂದಿದ್ದರು. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಐಷರಾಮಿ ಜೀವನ ನಡೆಸಲು ಮನೆಗಳ್ಳತನ: ಇಬ್ಬರು ಆರೋಪಿಗಳ ಬಂಧನ