ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಭದ್ರತೆಗಾಗಿ ಅಳವಡಿಸಿದ್ದ ಸಿಸಿ ಕ್ಯಾಮರವನ್ನೇ ಕಳ್ಳ ಎಗರಿಸಿರುವ ಪ್ರಕರಣ ನಡೆದಿದೆ.
ಕಮಲಾನಗರದ ಮಾರ್ಕೆಟ್ ರಸ್ತೆಯ ಅಂಗಡಿಯೊಂದರ ಮುಂಭಾಗ ಅಳವಡಿಸಿದ್ದ ಸಿಸಿ ಕ್ಯಾಮರ ಕಳ್ಳತನವಾಗಿದೆ. ಮಧ್ಯರಾತ್ರಿ ಆಗಮಿಸಿದ ವ್ಯಕ್ತಿ ಶಾಪ್‌ವೊಂದಕ್ಕೆ ಆಗಮಿಸಿ ಅಂಗಡಿ ಸುತ್ತಮುತ್ತ ಗಮನಿಸಿದ್ದಾನೆ. ಈ ವೇಳೆ ಅಲ್ಲಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿದ ಆತ ಕೂಡಲೇ ಮೇಲೆ ಹತ್ತಿ ಸಿಸಿ ಕ್ಯಾಮೆರಾ ತೆಗೆದು ಪರಾರಿಯಾಗಿದ್ದಾನೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.