ETV Bharat / state

ಎತ್ತಿನಹೊಳೆ ಯೋಜನೆ ಮುಗಿಯಲ್ಲ, ಜನರಿಗೆ ನೀರಿಲ್ಲ: ಆಂಜನೇಯ ರೆಡ್ಡಿ

ಎತ್ತಿನಹೊಳೆ ಯೋಜನೆ ಮುಗಿಯುವುದಿಲ್ಲ, ಜನರಿಗೆ ಕುಡಿಯುವುದಕ್ಕೆ ನೀರು ಸಿಗುವುದಿಲ್ಲ ಎಂದು ಸರ್ಕಾರದ ವಿರುದ್ಧ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

author img

By

Published : Apr 14, 2019, 7:02 PM IST

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ

ಬೆಂಗಳೂರು: ಎರಡು ವರ್ಷದಲ್ಲಿ ಈ ಭಾಗದ ಜನರಿಗೆ ಎತ್ತಿನಹೊಳೆ ಯೋಜನೆಯ ಮೂಲಕ ನೀರು ತರಿಸುತ್ತೇನೆ ಎಂದು ಹೇಳಿ ಸಂಸದರಾಗಿ ಆಯ್ಕೆಯಾದ ಎಂ.ವೀರಪ್ಪ ಮೊಯ್ಲಿ ಹತ್ತು ವರ್ಷಗಳಾದರೂ ನೀರು ತಂದಿಲ್ಲ ಎಂದು ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಹೇಳಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿಯ ನೀರಾವರಿ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನೀರಾವರಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಕೋಲಾರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಸೇರಿದಂತೆ ಈ ಭಾಗದ ಜನರು ನೀರಿಗಾಗಿ ಹಾತೊರೆಯುತ್ತಿದ್ದಾರೆ. ಬಯಲು ಪ್ರದೇಶ ಭಾಗದ ಜನರಿಗೆ ಪ್ರಮುಖವಾಗಿ ನೀರು ಬೇಕಿದ್ದು, ಅದನ್ನು ಒದಗಿಸುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ. 2009 ರಲ್ಲಿ ವೀರಪ್ಪಮೊಯ್ಲಿ ಅವರು ಈ ಭಾಗದಲ್ಲಿ ಚುನಾವಣೆಗೆ ಸ್ಪರ್ಧಿಸುವಾಗ ಎರಡು ವರ್ಷದಲ್ಲಿ ನೀರು ತರುತ್ತೇನೆ ಎಂದು ಹೇಳಿದ್ದರು. ಆದರೆ ಇದುವರೆಗೂ ನೀರು ಬಂದಿಲ್ಲ. ‌ಅದು ಬರುವುದೂ ಇಲ್ಲ ಎಂದು ಮೊಯ್ಲಿ ವಿರುದ್ದ ಅಸಮಾಧಾನ ಹೊರಹಾಕಿದರು.

ಎಲ್ಲಾ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ತಯಾರು ಮಾಡಿ ಹೊರಡಿಸುತ್ತವೆ. ಆದ್ರೆ ಪ್ರಣಾಳಿಕೆ ಅಂಶಗಳನ್ನು ಯಾರೂ ಕೂಡಾ ಜಾರಿಗೆ ತರುವುದಿಲ್ಲ. ಅದಕ್ಕಾಗಿ ನಾವೇ ಹೊಸದಾಗಿ ಸಮಸ್ಯೆಗೆ ಪರಿಹಾರ ಹುಡುಕುವಂತಹ ಪ್ರಣಾಳಿಕೆಯನ್ನ ಹೊರಡಿಸಿದ್ದೇವೆ ಎಂದರು.

ಯೋಜನೆಯ ಬಗ್ಗೆ ರಾಜಕಾರಣಿಗಳ ಬೇಜವಾಬ್ದಾರಿತನವನ್ನು ಉಲ್ಲೇಖಿಸುತ್ತಾ ಅವರು, ಎತ್ತಿನ ಹೊಳೆ ಕಾಮಗಾರಿಗೆ ಸಾವಿರಾರು ಕೋಟಿ ವೆಚ್ಚವಾಗಿದೆ, ಅದ್ರೆ ನೀರು ಮಾತ್ರ ಬಂದಿಲ್ಲ ಇದರ ವಿರುದ್ಧ ಸಿಬಿಐ ತನಿಖೆಯಾಗಿಬೇಕಿದೆ ಎಂದು ಆಗ್ರಹಿಸಿದರು.

ಕಳೆದ ಐದು ವರ್ಷಗಳಲ್ಲಿ ಹೊಸಕೋಟೆಯ ಬಿಜೆಪಿ ನಾಯಕ ಬಚ್ಚೆಗೌಡರು ಶಾಶ್ವತ ನೀರಾವರಿ ಬಗ್ಗೆ ಹೋರಾಟ ಮಾಡಬೇಕಿತ್ತು. ಆದರೆ ಅವರು ಆ ಕೆಲಸ ಮಾಡಿಲ್ಲ. ಈಗ ಚುನಾವಣೆಯ ಹಿನ್ನೆಲೆಯಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.

Intro:Slug: ೨ ವರ್ಷ‌ ಅಂತ ಹೇಳಿ‌ ೧೦ ವರ್ಷವಾದರೂ ನೀರು ತರದ ವೀರಪ್ಪಮೊಯ್ಲಿ: ಆಂಜನೇಯ ರೆಡ್ಡಿ

ಬೆಂಗಳೂರು: ಎರಡು ವರ್ಷದಲ್ಲಿ ಈ ಭಾಗದ ಜನರಿಗೆ ಎತ್ತಿನ ಹೊಳೆ ಯೋಜನೆಯ ಮೂಲಕ ನೀರು ತರುತ್ತೇನೆ ಎಂದು ಹೇಳಿ ಸಂಸದರಾಗಿ ಆಯ್ಕೆಯಾಗಿದ್ದ ವೀರಪ್ಪಮೊಯ್ಲಿ ಹತ್ತು ವರ್ಷಗಳಾದರೂ ನೀರು‌ ತಂದಿಲ್ಲ. ನೀರನ್ನು‌ ತರಲು ಸಾಧ್ಯವಿಲ್ಲ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ ಹೇಳಿದರು.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನೀರಾವರಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಈ ಕೋಲಾರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಸೇರಿದಂತೆ ಈ ಭಾಗದ ಜನರು ನೀರಿಗಾಗಿ ಆತೋರೆಯುತ್ತಿದ್ದಾರೆ... ಬಯಲು ಪ್ರದೇಶ ಈ ಭಾಗದ ಜನರಿಗೆ ಪ್ರಮುಖವಾಗಿ ನೀರು ಬೇಕಿದ್ದು ಅದನ್ನು ಒದಗಿಸುವಲ್ಲಿ ಎಲ್ಲಾ ಪಕ್ಷಗಳು ವಿಫಲವಾಗಿವೆ.. ೨೦೦೯ ರಲ್ಲಿ ವೀರಪ್ಪಮೊಯ್ಲಿ ಈ ಭಾಗದಲ್ಲಿ ಸ್ಪರ್ಧೆ ಮಾಡುವಾಗ ಎರಡು ವರ್ಷದಲ್ಲಿ ನೀರು ತರುತ್ತೇನೆ ಎಂದು ಹೇಳಿದ್ರು.. ಆದರೆ ಇದುವರೆಗೂ ನೀರು ಬಂದಿಲ್ಲ..‌ಅದು ಬರುವುದಿಲ್ಲ ಎಂದು ವೀರಪ್ಪಮೊಯ್ಲಿ ವಿರುದ್ದ ಅಸಮಾಧಾನ ಹೊರಹಾಕಿದ್ರು..

ಮಂಗಳೂರಿನಲ್ಲಿ ಸತತ ಸೋಲನುಭವಿಸಿದ ವೀರಪ್ಪಮೊಯ್ಲಿಯನ್ನು ಅಲ್ಲಿನ ಜನ ಡೆಸ್ಟ್ ಬಿನ್ ಗೆ ಹಾಕಿದ್ರು.. ಅಲ್ಲಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಬಂದಾಗ ಅವರಲ್ಲಿ ನಾವು ಮನವಿ ಮಾಡಿದ್ದು ಒಂದೇ ಅದು ನೀರಿನ ಸಮಸ್ಯೆ.. ನಮಗೆ ಶಾಶ್ವತ ನೀರಾವರಿ ಬೇಕು ಎಂದು ಅದಕ್ಕೆ ಒಪ್ಪಿ ಭರವಸೆ ನೀಡಿದ್ದ ಅವರು ಹತ್ತು ವರ್ಷವಾದರೂ ನೀರು ತಂದಿಲ್ಲ ಎಂದರು.. ಎಲ್ಲಾ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ತಯಾರು ಮಾಡಿ ಹೊರಡಿಸುತ್ತಾರೆ.. ಆದರೆ ಅದರಲ್ಲಿ ನಮ್ಮ ಭಾಗದ ಜನರಿಗೆ ಶಾಶ್ವತ ನೀರಾವರಿಗೆ ಯೋಜನೆ ಮಾಡಿ ಅದನ್ನು ಜಾರಿಗೆ ತರುವಂತ ಕೆಲಸ ಹಾಗಬೇಕು.. ಆದರೆ ಇದನ್ನು ಯಾವ ಪಕ್ಷಗಳು ಮಾಡುತ್ತಿಲ್ಲ.. ಅದಕ್ಕಾಗಿ ನಾವು ಹೊಸದಾಗಿ ನೀರಿನ ಸಮಸ್ಯೆಗೆ ಬೇಕಾದ ಪರಿಹಾರವನ್ನು ಹುಡುಕುವಂತ ಪ್ರಣಾಳಿಕೆಯನ್ನು ಹೊರಟಿಸಿದ್ದಿವಿ.. ಇದನ್ನು ಯಾವುದೇ ಅಭ್ಯರ್ಥಿ ಗೆಲ್ಲಲಿ ಸೋಲಲಿ ಜಾರಿಗೆ ತರುವಂತ ಕೆಲಸ ಮಾಡಬೇಕು ಎಂದರು..

ಇನ್ನು ಎತ್ತಿನ ಹೊಳೆ ಯೋಜನೆಯನ್ನು ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಹೇಳಿದರು ಅದನ್ನು ಮಾಡುತ್ತಿಲ್ಲ.. ಸಾವಿರಾರು ಕೋಟಿ ವ್ಯಚ್ವ ಮಾಡಿರುವ ಈ ಯೋಜನೆಯಿಂದ ನೀರು ಮಾತ್ರ ಬಂದಿಲ್ಲ.. ಇದರ ವಿರುದ್ದ ಸಿಬಿಐ ತನಿಖೆ ನಡೆಸಲಿ ಎಂದ ಅವರು, ಕಳೆದ ಐದು ವರ್ಷಗಳಲ್ಲಿ ಬಚ್ಚೆಗೌಡರು ಶಾಶ್ವತ ನೀರಾವರಿ ಬಗ್ಗೆ ಹೋರಾಟಗಳನ್ನು ಮಾಡಬೇಕಿತ್ತು ಆದರೆ ಮಾಡಿಲ್ಲ.. ಇವಾಗ ಜನರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ರು..

ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಶಾಶ್ವತ ನೀರಾವರಿಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯ್ತು.. ಹೋರಾಟ ಸಮಿತಿಯ ಆಂಜನೇಯ ರೆಡ್ಡಿ ಅವರು ಪ್ರಣಾಳಿಕೆ ಬಿಡುಗಡೆ ಮಾಡಿ ಎತ್ತಿನಹೊಳೆ ಯೋಜನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.. ಪ್ರತಿ ಚುನಾವಣೆಯಲ್ಲಿ ಎತ್ತಿನ ಹೊಳೆ ಯೋಜನೆ ಚುನಾವಣೆ ಅಸ್ತ್ರವನ್ನಾಗಿ ಅಭ್ಯರ್ಥಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ರುBody:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.