ಬೆಂಗಳೂರು: 2022ನೇ ಸಾಲಿನ ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ಧ್ವಜಾರೋಹಣ ಮಾಡುವ ಉಸ್ತುವಾರಿ ಸಚಿವರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಜಿಲ್ಲಾ ಕೇಂದ್ರಗಳಲ್ಲಿ (ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ) ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ ಎಂದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ತಿಳಿಸಿದ್ದಾರೆ.
ಸರ್ಕಾರಿ ಆದೇಶದ ಪ್ರಕಾರ ಯಾವ ಜಿಲ್ಲೆಯಲ್ಲಿ, ಯಾರಿಂದ ಧ್ವಜಾರೋಹಣ:
ಬೆಳಗಾವಿ - ಸಚಿವ ಗೋವಿಂದ ಕಾರಜೋಳ
ಬಳ್ಳಾರಿ - ಬಿ ಶ್ರೀರಾಮುಲು
ಚಾಮರಾಜನಗರ - ವಿ ಸೋಮಣ್ಣ
ಉಡುಪಿ - ಎಸ್ ಅಂಗಾರ
ತುಮಕೂರು - ಆರಗ ಜ್ಞಾನೇಂದ್ರ
ರಾಮನಗರ - ಡಾ ಅಶ್ವಥ್ ನಾರಾಯಣ್
ಬಾಗಲಕೋಟೆ - ಸಿ ಸಿ ಪಾಟೀಲ್
ಕೊಪ್ಪಳ - ಆನಂದ್ ಸಿಂಗ್
ಉತ್ತರ ಕನ್ನಡ - ಕೋಟಾ ಶ್ರೀನಿವಾಸ ಪೂಜಾರಿ
ಯಾದಗಿರಿ - ಪ್ರಭು ಚೌಹಾಣ್
ಕಲಬುರಗಿ - ಮುರುಗೇಶ್ ನಿರಾಣಿ
ಹಾವೇರಿ - ಅರೆಬೈಲ್ ಶಿವರಾಂ ಹೆಬ್ಬಾರ್
ಮೈಸೂರು - ಎಸ್ ಟಿ ಸೋಮಶೇಖರ್
ಚಿತ್ರದುರ್ಗ - ಬಿಸಿ ಪಾಟೀಲ್
ದಾವಣಗೆರೆ - ಬಿಎ ಬಸವರಾಜ್
ಬೆಂಗಳೂರು ಗ್ರಾಮಾಂತರ - ಡಾ. ಕೆ ಸುಧಾಕರ್
ಹಾಸನ - ಕೆ ಗೋಪಾಲಯ್ಯ
ವಿಜಯನಗರ - ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ
ಚಿಕ್ಕಬಳ್ಳಾಪುರ - ಎಂಟಿಬಿ ನಾಗರಾಜ್
ಶಿವಮೊಗ್ಗ - ಕೆ ಸಿ ನಾರಾಯಣ ಗೌಡ
ಕೊಡಗು - ಬಿಸಿ ನಾಗೇಶ್
ದಕ್ಷಿಣ ಕನ್ನಡ - ವಿ ಸುನಿಲ್ ಕುಮಾರ್
ಧಾರವಾಡ - ಆಚಾರ್ ಹಾಲಪ್ಪ ಬಸಪ್ಪ
ರಾಯಚೂರು - ಶಂಕರ್ ಪಾಟೀಲ್ ಮುನೇನಕೊಪ್ಪ
ಕೋಲಾರ - ಮುನಿರತ್ನ
ಮಂಡ್ಯ - ಆರ್ ಅಶೋಕ್
ವಿಜಯಪುರ, ಗದಗ, ಬೀದರ್ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಯಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಲಿದ್ದಾರೆ.