ETV Bharat / state

ಬಿಜೆಪಿಯಲ್ಲಿ ವಂಶಪಾರಂಪರ್ಯ ಇಲ್ಲ, ಬಿಎಸ್​ವೈ ಪಕ್ಷದ ನಾಯಕರೇ ಹೊರತು ಮಾಲೀಕರಲ್ಲ : ಸಿ ಟಿ ರವಿ - City Ravi's statement on Eshwarappa's letter

ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಕುಟುಂಬ, ಡಿಎಂಕೆಗೆ ಕರುಣಾನಿಧಿ, ಸಮಾಜವಾದಿ ಪಕ್ಷಕ್ಕೆ ಮುಲಾಯಂ ಸಿಂಗ್ ಯಾದವ್, ಹೀಗೆ ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇದೆ. ಆದರೆ, ನಮ್ಮಲ್ಲಿ ಅಂತಹ ಪ್ರವೃತ್ತಿ ಇಲ್ಲ, ಕಾರ್ಯಕರ್ತರೇ ಮಾಲೀಕರು..

There is no Family Politics in BJP, says CT Ravi
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ
author img

By

Published : Apr 5, 2021, 5:04 PM IST

ಬೆಂಗಳೂರು : ಕರ್ನಾಟಕದಲ್ಲಿ ವಂಶಪಾರಂಪರ್ಯ ಆಡಳಿತ ಇಲ್ಲ. ನಮ್ಮ‌ ಪಕ್ಷದ ಡಿಎನ್​ಎನಲ್ಲಿಯೂ ಅದು ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು. ಈ ಮೂಲಕ‌ ಯಡಿಯೂರಪ್ಪ ಕುಟುಂಬಕ್ಕೆ ಉತ್ತರಾಧಿಕಾರ ಸಿಗುವುದಿಲ್ಲ ಎನ್ನುವ ಸುಳಿವು ನೀಡಿದ್ದಾರೆ.

ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷ ಉತ್ತರಾಧಿಕಾರಿಗಳ ಸಂಸ್ಕೃತಿಯ ಪಕ್ಷವಲ್ಲ, ನಮ್ಮ ಪಕ್ಷಕ್ಕೆ ಯಾರೋ ಒಬ್ಬ ವ್ಯಕ್ತಿ ಮಾಲೀಕ ಅಲ್ಲ, ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಮಾಲೀಕರು. ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಕುಟುಂಬ, ಡಿಎಂಕೆಗೆ ಕರುಣಾನಿಧಿ, ಸಮಾಜವಾದಿ ಪಕ್ಷಕ್ಕೆ ಮುಲಾಯಂ ಸಿಂಗ್ ಯಾದವ್, ಹೀಗೆ ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇದೆ. ಆದರೆ, ನಮ್ಮಲ್ಲಿ ಅಂತಹ ಪ್ರವೃತ್ತಿ ಇಲ್ಲ, ಕಾರ್ಯಕರ್ತರೇ ಮಾಲೀಕರು ಎಂದರು.

ಬಿಎಸ್​ವೈ ಬಿಜೆಪಿ ನಾಯಕ, ಮಾಲೀಕರಲ್ಲ : ಯಡಿಯೂರಪ್ಪ ನಮ್ಮ‌ ಸರ್ವೋಚ್ಛ ನಾಯಕರೇ ಹೊರತು, ಮಾಲೀಕರಲ್ಲ. ನಮ್ಮ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಯಕ, ಅಮಿತ್ ಶಾ ನಾಯಕ. ಯಡಿಯೂರಪ್ಪ ನಾಯಕನಾದರೆ ಕಾರ್ಯಕರ್ತರೇ ಮಾಲೀಕರು. ಓನರ್​ಶಿಪ್ ಬೇರೆ, ನಾಯಕರ ಮಕ್ಕಳು‌ ರಾಜಕೀಯಕ್ಕೆ ಬರುವುದು ಬೇರೆ. ಇತರ ಪಕ್ಷದಲ್ಲಿ ಅಂತಿಮ ನಿರ್ಧಾರ ಯಾವುದೋ ಒಬ್ಬ ನಾಯಕನ ಕುಟುಂಬ ತೆಗೆದುಕೊಳ್ಳುತ್ತದೆ.

ಯಡಿಯೂರಪ್ಪ-ಈಶ್ವರಪ್ಪ ಬಗ್ಗೆ ನಾನೇನು ಮಾತನಾಡಲಿ.. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ

ಆದರೆ, ನಮ್ಮ ಪಕ್ಷದಲ್ಲಿ ಕೋರ್‌ ಕಮಿಟಿ, ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ. ನಮ್ಮ ಪಕ್ಷ ಎಲ್ಲರಿಗೂ ಯೋಗ್ಯತೆ, ಪರಿಶ್ರಮದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಅವಕಾಶ ಕೊಡುತ್ತದೆ. ಉತ್ತರಾಧಿಕಾರಿ ಸಂಸ್ಕೃತಿಗೆ ಅವಕಾಶ ಇಲ್ಲ. ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ‌ನಮ್ಮದು ಕೇಡರ್ ಬೇಸ್ಡ್ ಡಿಎನ್​ಎ ಎಂದರು.

ಓದಿ : ಸತೀಶ್ ಜಾರಕಿಹೊಳಿ‌ಗೆ ಬಿಗ್ ಶಾಕ್: ಬಿಜೆಪಿ ಬೆಂಬಲಿಸಲು ಮುಂದಾದ ಲಖನ್ ಜಾರಕಿಹೊಳಿ‌!

ನಾನು ಕರಪತ್ರ ಹಂಚಿದ್ದೇನೆ, ಈಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದೇನೆ. ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ. ಕೋರ್ ಕಮಿಟಿ ಪಕ್ಷದ ಸಮಿತಿಯೇ ಹೊರತು ಯಾವೊಬ್ಭ ನಾಯಕರ ಕುಟುಂಬದ ಸದಸ್ಯರ ಸಮಿತಿ ಅಲ್ಲ. ಸಂಸದೀಯ ಮಂಡಳಿಯೂ ಕೂಡ ಯಾವ ನಾಯಕರ ಕುಟುಂಬ ಸದಸ್ಯರ ಸಮಿತಿ ಅಲ್ಲ, ಅದು ಪಕ್ಷದ ಸಮಿತಿ. ನಮ್ಮ ಪಕ್ಷದ ಡಿಎನ್ಎ ಪ್ರಜಾಪ್ರಭುತ್ವ ಆಗಿದೆ ಎಂದರು.

ಯಡಿಯೂರಪ್ಪ ಈಶ್ವರಪ್ಪಗೆ ಏನೂ ಹೇಳಲು ಸಾಧ್ಯವಿಲ್ಲ : ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ಪತ್ರದ ಬಗ್ಗೆ ಇಲ್ಲಿ ಚರ್ಚೆ ಮಾಡಲ್ಲ. ನನ್ನ ಗಮನಕ್ಕೆ ತಂದಿದ್ದರು, ನಾನು ಸಿಎಂ, ‌ರಾಜ್ಯಾಧ್ಯಕ್ಷ, ಉಸ್ತುವಾರಿ ಅರುಣ್ ಸಿಂಗ್ ಜೊತೆ ಮಾತನಾಡಿ ಎಂದಿದ್ದೇನೆ. ಪತ್ರ ಇನ್ನೂ ನನ್ನ ಕೈ ಸೇರಿಲ್ಲ. ನಾನು ಊರಲ್ಲಿ ಇರಲಿಲ್ಲ, ಎಲ್ಲಿಗೆ ಪತ್ರ ಬಂದಿದೆಯೋ ಗೊತ್ತಿಲ್ಲ, ಇಲ್ಲಿಗಂತೂ ಬಂದಿಲ್ಲ.

ಈ ವಿಷಯ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ. ಯಡಿಯೂರಪ್ಪ, ಈಶ್ವರಪ್ಪ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ವೇಳೆ ನಾನು ಬೂತ್ ಅಧ್ಯಕ್ಷನಾಗಿದ್ದೆ. ಹಾಗಾಗಿ, ನಾನು ಅವರಿಬ್ಬರಿಗೂ ಏನೂ ಹೇಳಲು ಸಾಧ್ಯವಿಲ್ಲ. ಆದರೆ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.