ಬೆಂಗಳೂರು: ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಪೀಣ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಿಶೋರ್ ಕುಮಾರ್ ಹಾಗೂ ಲೀಲಾವತಿ ಬಂಧಿತರು. ಆರೋಪಿಗಳಿಬ್ಬರು ಸೇರಿಕೊಂಡು ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ವೆಂಕಟಲಕ್ಷ್ಮಮ್ಮ ಎಂಬ ಮಹಿಳೆ ಒಂಟಿಯಾಗಿ ವಾಸಿಸುವುದನ್ನು ನೋಡಿ ಅವರ ಮನೆಗೆ ನುಗ್ಗಿದ್ದರು. ಆಗ ವೆಂಕಟಲಕ್ಷ್ಮಮ್ಮರ ಬಾಯಿಗೆ ಬಟ್ಟೆಗಳನ್ನು ತುರುಕಿ, ಕೈಗಳನ್ನು ಕಟ್ಟಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು.
ಹೀಗಾಗಿ ನೊಂದ ಮಹಿಳೆ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ಯಶವಂತಪುರ ವಿಭಾಗದ ಎಸಿಪಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಮುದ್ದುರಾಜ ಅವರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ಯ ಬಂಧಿತ ಆರೋಪಿಗಳಿಂದ ಪೊಲೀಸರು ನಗದು ಹಾಗೂ ದ್ವಿಚಕ್ರವಾಹನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.