ಬೆಂಗಳೂರು: ರಾತ್ರಿ ಮನೆಗೆ ಬಂದಾಗ ಬಾಗಿಲು ತೆರೆಯಲು ತಡ ಮಾಡಿದ್ದಕ್ಕೆ ಮತ್ತು ಊಟ ಬಡಿಸದ ಕಾರಣಕ್ಕಾಗಿ ಪತಿಯೋರ್ವ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಮಂಜುಳಾ ಮೃತ ಗೃಹಿಣಿ ಎಂದು ತಿಳಿದುಬಂದಿದೆ. ಕೊಲೆಗೈದ ಆರೋಪಿ ರಾಮುನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುಳಾ ತನ್ನ ಮೊದಲ ಪತಿಯನ್ನು ತೊರೆದು ತಮ್ಮ ಇಬ್ಬರು ಮಕ್ಕಳೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನೆಲೆಸಿದ್ದರು. ಬಳಿಕ ಮಂಜುಳಾ ತಾನು ಪೀಣ್ಯದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಆರೋಪಿ ರಾಮುನನ್ನು ಮೊದಲ ಬಾರಿ ಭೇಟಿಯಾಗಿದ್ದರು. ಬಳಿಕ ಇಬ್ಬರು ಮದುವೆಯಾಗಿದ್ದರು. ಈ ನಡುವೆ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು.
ಈ ಮಧ್ಯೆ ಆರೋಪಿ ರಾಮು ಮನೆಗೆ ಬಂದಾಗ ಬಾಗಿಲು ತೆರೆಯಲು ತಡ ಮಾಡಿದ್ದಕ್ಕೆ ಮತ್ತು ಊಟ ಬಡಿಸಲು ನಿರಾಕರಿಸಿದ್ದಕ್ಕೆ ತನ್ನ ಪತ್ನಿಯನ್ನು ಕೊಲೆಗೈದಿದ್ದಾನೆ. ಬಳಿಕ ಆರೋಪಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಶವವನ್ನು ಸೂಟ್ ಕೇಸ್ ಗೆ ತುಂಬಿದ್ದಾರೆ. ನಂತರ ಕಾಮಾಕ್ಷಿಪಾಳ್ಯದಲ್ಲಿನ ತನ್ನ ಮನೆಯಿಂದ ಮೃತ ಮಂಜುಳಾ ಶವವನ್ನು ದ್ವಿಚಕ್ರ ವಾಹನದಲ್ಲಿರಿಸಿಕೊಂಡು ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿನ ದಾಬಸ್ ಪೇಟೆ ಬಳಿ ಶವ ಎಸೆದಿದ್ದಾರೆ. ಬಳಿಕ ಆರೋಪಿ ಚೆನ್ನೈಗೆ ಪರಾರಿಯಾಗಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಎಸ್.ಪಿ ಲಕ್ಷ್ಮಿ ಗಣೇಶ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ನಗರಕ್ಕೆ ವಾಪಸಾದ ಆರೋಪಿ ಬಾರ್‌ಗೆ ತೆರಳಿ ಮೊಬೈಲ್ ಸ್ವಿಚ್ ಆನ್ ಮಾಡಿದ್ದ. ಆತನ ಟವರ್ ಸ್ಥಳವನ್ನು ಆಧರಿಸಿ ಮೇಲೆ ಆರೋಪಿ ರಾಮುನನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಓದಿ : ಪತಿಯನ್ನು ಕೋಳಿ ಸುಡುವ ಬರ್ನರ್ ನಲ್ಲಿ ಸುಟ್ಟು ಕೊಲೆ.. ಚಾಲಾಕಿ ಪತ್ನಿ, ಪ್ರಿಯಕರ ಅಂದರ್