ETV Bharat / state

ಹೊಗೆ ಬರುವಂತಹ ಪಟಾಕಿ ಬಳಸುವುದನ್ನು ಕಡಿಮೆ ಮಾಡಬೇಕು: ಡಾ.ಪವನ್ ಕುಮಾರ್.... - Bangalore

ಟಿಬಿ ಮತ್ತು ಶ್ವಾಸಕೋಶದ ಕಾಯಿಲೆಯಿಂದ ಬಹಳ ಜನ ಬಳಲುತ್ತಿದ್ದು, ಹೊಗೆ ಬರುವಂತಹ ಪಟಾಕಿ ಬಳಸುವುದನ್ನು ಕಡಿಮೆ ಮಾಡಬೇಕು ಎಂದು ಡಾ. ಪವನ್ ಕುಮಾರ್ ತಿಳಿಸಿದ್ದಾರೆ.

Dr. Pawan Kumar
ಡಾ.ಪವನ್ ಕುಮಾರ್
author img

By

Published : Nov 8, 2020, 8:05 PM IST

ಬೆಂಗಳೂರು: ಪಟಾಕಿಯಿಂದ ಬರುವ ಹೊಗೆಯಿಂದ ಸಾಕಷ್ಟು ಜನರ ಶ್ವಾಸಕೋಶಕ್ಕೆ ತೊಂದರೆ ಉಂಟಾಗುತ್ತದೆ. ಸಿಒಪಿಡಿ, ಅಸ್ತಮಾ, ಟಿಬಿ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆ ಇದ್ದವರಿಗೆ ಪಟಾಕಿ ಹೊಗೆಯಿಂದ ರೋಗ ಉಲ್ಬಣಗೊಳ್ಳೋದು ಸಮಾನ್ಯವಾಗಿದೆ ಎಂದು ಬೆಂಗಳೂರಿನ ಯಲಹಂಕಾದ ಪವನ್ ಆಸ್ಪತ್ರೆಯ ಡಾ. ಪವನ್ ಕುಮಾರ್ ತಿಳಿಸಿದ್ದಾರೆ.

ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಮುಖ್ಯವಾಗಿ ಟಿಬಿ ಮತ್ತು ಶ್ವಾಸಕೋಶದ ಕಾಯಿಲೆಯಿಂದ ಬಹಳ ಜನ ಬಳಲುತ್ತಿದ್ದು, ಹೊಗೆ ಬರುವಂತಹ ಪಟಾಕಿ ಬಳಸುವುದನ್ನು ಕಡಿಮೆ ಮಾಡಬೇಕು. ಬರಿ ದೀಪಾವಳಿ ಮಾತ್ರವಲ್ಲ ಹೊಸ ವರ್ಷಕ್ಕೂ ಸಾಕಷ್ಟು ಜನ ಪಟಾಕಿ ಬಳಸುತ್ತಿದ್ದು, ಆರೋಗ್ಯವಲ್ಲದೆ, ಪರಿಸರಕ್ಕೂ ಹಾನಿ ಉಂಟಾಗುತ್ತದೆ ಎಂದರು.

ಬೆಂಗಳೂರಿನ ಯಲಹಂಕಾದ ಪವನ್ ಆಸ್ಪತ್ರೆಯ ಡಾ. ಪವನ್ ಕುಮಾರ್

ಕೋವಿಡ್ ರೋಗವು ಶ್ವಾಸಕೋಶ ಸಂಬಂಧಿತ ಕಾಯಿಲೆ ಯಾಗಿದ್ದು ಪಟಾಕಿಗಳಿಂದ ಬರುವಂತಹ ಹೊಗೆಯಿಂದ ರೋಗವು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಇದರ ನಿಯಂತ್ರಣಕ್ಕೆ ಹೊಗೆ ಬರುವ ಪಟಾಕಿಗಳನ್ನು ಆದಷ್ಟು ಕಡಿಮೆ ಮಾಡಬೇಕು. ಹಬ್ಬಗಳು ನಮ್ಮ ಸಂಪ್ರದಾಯವಾಗಿದ್ದು, ಆದರೆ ಈ ಬಾರಿ ಸರಳವಾಗಿ ಆಚರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆಚರಿಸಬೇಕೆಂದು ತಿಳಿಸಿದ್ದಾರೆ.

ಪಟಾಕಿ ವ್ಯಾಪಾರಿಗಳ ಬಗ್ಗೆಯೂ ಕನಿಕರ ವ್ಯಕ್ತಪಡಿಸಿದ ಅವರು, ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳು ಪಟಾಕಿ ಉತ್ಪಾದನೆ ಮತ್ತು ಮರಾಟದಲ್ಲಿದ್ದು, ಅದರ ಮೇಲೆ ಅವರ ಜೀವನ ನೆಡೆಯುತ್ತಿದೆ. ಪರವಾನಿಗೆ ಇಲ್ಲದೆ ಮಾರುವ ಪಟಾಕಿಯಿಂದ ಹೊಗೆ ಜಾಸ್ತಿ ಉಂಟಾಗುತ್ತಿದ್ದು ಅದನ್ನು ಸರ್ಕಾರ ನಿಯಂತ್ರಿಸಬೇಕು ಹಾಗೂ ಹಸಿರು ಪಟಾಕಿಯ ನಿರ್ಧಾರವನ್ನು ಸರ್ಕಾರ ಸ್ವಲ್ಪ ಮುಂಚೆಯೇ ತೆಗೆದುಗೊಂಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಧ್ಯಾಪಕರೂ ಔಷಧ ತಜ್ಞರೂ ಆದ ಡಾ.ಪವನ್ ಕುಮಾರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.