ETV Bharat / state

ಕೆರೆ ಏರಿ ಮೇಲಿನ ಮರಗಳನ್ನು ಸರ್ಕಾರದ ಅನುಮತಿಯಿಲ್ಲದೆ ಕತ್ತರಿಸುವಂತಿಲ್ಲ : ಹೈಕೋರ್ಟ್ - ಕೆರೆ ಏರಿ ಮೇಲಿನ ಮರಗಳನ್ನು ಸರ್ಕಾರದ ಅನುಮತಿಯಿಲ್ಲದೆ ಕತ್ತರಿಸುವಂತಿಲ್ಲ ಹೈಕೋರ್ಟ್ ಮಹತ್ವದ ಆದೇಶ

ಜಿಲ್ಲಾಧಿಕಾರಿಗಳ ಈ ಆದೇಶ ಪ್ರಶ್ನಿಸಿ ಹಾಗೂ ಮರಗಳ ಸಂರಕ್ಷಣೆ ಕೋರಿ ಅರ್ಜಿದಾರರು 2013ರಲ್ಲಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಪೀಠ, ಮರಗಳನ್ನು ಕತ್ತರಿಸದಂತೆ 2015ರ ನವೆಂಬರ್‌ ತಡೆಯಾಜ್ಞೆ ನೀಡಿತ್ತು. ಇಂದು ಆದೇಶ ನೀಡಿದ ಪೀಠ, ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 67(1) ಪ್ರಕಾರ ರಾಜ್ಯದ ಎಲ್ಲ ಕೆರೆಗಳು ಮತ್ತು ಕೆರೆ ಏರಿ ಪ್ರದೇಶಗಳು ಸರ್ಕಾರದ ಸ್ವತ್ತು..

ಹೈಕೋರ್ಟ್ ಮಹತ್ವದ ಆದೇಶ
ಹೈಕೋರ್ಟ್ ಮಹತ್ವದ ಆದೇಶ
author img

By

Published : Jul 19, 2021, 10:05 PM IST

ಬೆಂಗಳೂರು : ಕೆರೆಗಳು ಸರ್ಕಾರದ ಆಸ್ತಿ. ಇಂತಹ ಕೆರೆಗಳ ನಿರ್ವಹಣೆಯನ್ನು ಗ್ರಾಮ ಪಂಚಾಯತ್‌ಗಳಿಗೆ ನೀಡಿದಾಗ ಅದು ಗ್ರಾಪಂ ಆಸ್ತಿಯಾಗುವುದಿಲ್ಲ. ಬದಲಿಗೆ ಕೆರೆಯ ಮಾಲೀಕತ್ವ ಸರ್ಕಾರದಲ್ಲಿಯೇ ಮುಂದುವರಿಯುತ್ತದೆ. ಹೀಗಾಗಿ, ಕೆರೆ ಏರಿ ಮೇಲಿನ ಮರಗಳನ್ನು ಸರ್ಕಾರದ ಅನುಮತಿಯಿಲ್ಲದೆ ಕತ್ತರಿಸುವಂತಿಲ್ಲ ಎಂದು ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಕೋಲಾರದ ಬಂಗಾರಪೇಟೆ ತಾಲೂಕಿನ ಮರಿಕುಪ್ಪಂ ಗ್ರಾಪಂ ತನ್ನ ವ್ಯಾಪ್ತಿಯ ಕೆರೆ ಏರಿ ಪ್ರದೇಶದಲ್ಲಿದ್ದ ಮರಗಳನ್ನು ಕತ್ತರಿಸಲು ಹರಾಜು ಕರೆದಿದ್ದ ಕ್ರಮ ಪ್ರಶ್ನಿಸಿ ಸ್ಥಳೀಯ ನಿವಾಸಿ ವೆಂಕಟರಾಮರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ ಅವರಿದ್ದ ಪೀಠ ಈ ಮಹತ್ವದ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ : ಮರಿಕುಪ್ಪಂ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆರೆ ಏರಿ ಪ್ರದೇಶದಲ್ಲಿನ ಮರಗಳನ್ನು ಕತ್ತರಿಸಲು 2012ರಲ್ಲಿ ಹರಾಜು ನಡೆಸಲಾಗಿತ್ತು. ಅದರಂತೆ ನಡೆದ ಹರಾಜಿನಲ್ಲಿ ಮರಗಳನ್ನು ಕತ್ತರಿಸಲು ವೆಂಕಟರತ್ನಯ್ಯ ಎಂಬುವರಿಗೆ ಅನುಮತಿ ಕೊಡಲಾಗಿತ್ತು.

ಇದಕ್ಕಾಗಿ ವೆಂಕಟರತ್ನಯ್ಯ ಗ್ರಾಪಂನಲ್ಲಿ 7.30 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರು. ಈ ಹರಾಜು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೋಲಾರ ಜಿಲ್ಲಾಧಿಕಾರಿ ವಜಾ ಮಾಡಿದ್ದರು. ಡಿಸಿ ತಮ್ಮ ಆದೇಶದಲ್ಲಿ 40 ಹೆಕ್ಟೇರ್ ಕೆರೆ ಏರಿ ಪ್ರದೇಶದ ನಿರ್ವಹಣೆಯನ್ನು ಗ್ರಾಪಂಗೆ ಕೊಟ್ಟಿರುವುದರಿಂದ, ಮರಗಳನ್ನು ಕತ್ತರಿಸಲು ಹರಾಜು ನಡೆಸಿರುವುದು ಸರಿಯಿದೆ ಎಂದು 2012ರ ಜೂನ್ 19ರಂದು ಆದೇಶಿಸಿದ್ದರು.

ಕೆರೆ ಸರ್ಕಾರದ ಆಸ್ತಿ : ಜಿಲ್ಲಾಧಿಕಾರಿಗಳ ಈ ಆದೇಶ ಪ್ರಶ್ನಿಸಿ ಹಾಗೂ ಮರಗಳ ಸಂರಕ್ಷಣೆ ಕೋರಿ ಅರ್ಜಿದಾರರು 2013ರಲ್ಲಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಪೀಠ, ಮರಗಳನ್ನು ಕತ್ತರಿಸದಂತೆ 2015ರ ನವೆಂಬರ್‌ ತಡೆಯಾಜ್ಞೆ ನೀಡಿತ್ತು. ಇಂದು ಆದೇಶ ನೀಡಿದ ಪೀಠ, ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 67(1) ಪ್ರಕಾರ ರಾಜ್ಯದ ಎಲ್ಲ ಕೆರೆಗಳು ಮತ್ತು ಕೆರೆ ಏರಿ ಪ್ರದೇಶಗಳು ಸರ್ಕಾರದ ಸ್ವತ್ತು.

ಅದರಂತೆ, ಕೆರೆ ಏರಿ ಪ್ರದೇಶದಲ್ಲಿ ಬೆಳೆದ ಮರಗಳು ಸರ್ಕಾರದ ಸ್ವತ್ತಾಗುತ್ತವೆ. ಕೆರೆ-ಏರಿ ನಿರ್ವಹಣೆ ಸರ್ಕಾರದ ಕರ್ತವ್ಯ. ಹಾಗಿದ್ದೂ, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993ರ ಸೆಕ್ಷನ್ 59(1)(ಬಿ) ಪ್ರಕಾರ ಕೆರೆ-ಏರಿ ನಿರ್ವಹಣೆಯನ್ನು ಗ್ರಾಪಂಗೆ ವಹಿಸಬಹುದು. ಹಾಗೆಂದ ಮಾತ್ರಕ್ಕೆ ಕೆರೆ-ಏರಿಗಳ ಮಾಲೀಕತ್ವ ಗ್ರಾಪಂಗೆ ವರ್ಗಾವಣೆಯಾಗಿದೆ ಎಂದರ್ಥವಲ್ಲ. ಬದಲಿಗೆ ಕೆರೆ-ಏರಿ ಪ್ರದೇಶವು ಸರ್ಕಾರದ ಸ್ವತ್ತೇ ಆಗಿರುತ್ತದೆ.

ಜಿಲ್ಲಾಧಿಕಾರಿ ಆದೇಶ ರದ್ದು : ಸರ್ಕಾರದ ಸುಪರ್ದಿಯಲ್ಲಿರುವ ಕೆರೆ-ಏರಿ ಪ್ರದೇಶಗಳಲ್ಲಿನ ಮರಗಳನ್ನು ಕತ್ತರಿಸಲು ಗ್ರಾಪಂಗೆ ಅಧಿಕಾರವಿಲ್ಲ. ಅದೇ ರೀತಿ ಸರ್ಕಾರದ ಪೂರ್ವಾನುಮತಿ ಇಲ್ಲದೆ ಕೆರೆ ಏರಿ ಮರಗಳನ್ನು ಕತ್ತರಿಸುವುದಕ್ಕೆ ಹರಾಜು ಕರೆಯಲು ಗ್ರಾಪಂಗೆ ಅವಕಾಶವಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಆದೇಶವು ಕಾನೂನು ಬಾಹಿರವಾಗಿದೆ ಎಂದು ತಿಳಿಸಿ ರದ್ದುಪಡಿಸಿತು.

ಅಲ್ಲದೆ, ಪ್ರಕರಣವನ್ನು ಪರಿಶೀಲಿಸಲು ಸರ್ಕಾರ ಹಿರಿಯ ಕಂದಾಯ ಅಧಿಕಾರಿಯನ್ನು ನೇಮಿಸಬೇಕು. ಅವರು ಗ್ರಾಪಂ ಹಾಗೂ ಟೆಂಡರ್ ಪಡೆದ ವೆಂಕಟರತ್ನಯ್ಯ ಅವರ ವಿವರಣೆ ಆಲಿಸಿ ಎರಡು ತಿಂಗಳಲ್ಲಿ ವರದಿ ಸಲ್ಲಿಸಬೇಕು. ಇನ್ನು, ಗ್ರಾಪಂ ಅಧಿಕಾರಿಗಳು ವೆಂಕಟರತ್ನಯ್ಯ ಪಾವತಿಸಿರುವ 7.30ಲಕ್ಷ ರೂಪಾಯಿ ಠೇವಣಿ ಹಣದಲ್ಲಿ ಕತ್ತರಿಸಿರುವ ಮರಗಳ ಮೌಲ್ಯವನ್ನು ಕಡಿತ ಮಾಡಿ ಉಳಿದ ಹಣವನ್ನು ಅವರಿಗೆ ಹಿಂಪಾವತಿಸಬೇಕು ಎಂದು ಪೀಠ ಆದೇಶಿಸಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.