ETV Bharat / state

ಪ್ರಾಣ ಹೋದ್ರೂ ನೀವು ಹೋಗ್ತೀನಿ ಅಂತಾ ವೈದ್ಯರಿಗೆ ಅಂದ್ರೀ ಹ್ಯಾಟ್ಸ್ ಅಪ್ ಟು ಯೂ ಸರ್.. - ಮಂಗಳೂರು ಗೋಲಿಬಾರ್ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ನಮ್ಮ ಸರ್ಕಾರ ಇದ್ದಾಗ ನಮಗೆ ಬಂದೂಕೇ ಜ್ಞಾಪಕವಾಗಿರಲಿಲ್ಲ. ಆದರೆ, ಮಂಗಳೂರಿನ ಹಿಂಸಾಚಾರಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

siddaramaiah
ಮಾಜಿ ಸಿಎಂ ಸಿದ್ದರಾಮಯ್ಯ
author img

By

Published : Dec 20, 2019, 4:31 PM IST

ಬೆಂಗಳೂರು: ನಮ್ಮ ಸರ್ಕಾರ ಇದ್ದಾಗ ನಮಗೆ ಬಂದೂಕೇ ಜ್ಞಾಪಕವಾಗಿರಲಿಲ್ಲ. ಆದರೆ, ಮಂಗಳೂರಿನ ಹಿಂಸಾಚಾರಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಪೊಲೀಸ್ ಗೋಲಿಬಾರ್ ಗೆ ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆ ತಮ್ಮ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ನೆನಪಿಗೆ ಬಂದಿದ್ದು ಬಡವರಿಗೆ ಅನ್ನ ಕೊಡುವುದು, ಮಕ್ಕಳಿಗೆ ಹಾಲು ನೀಡುವುದು. ಇಂತಹ ಸಮಾಜಮುಖಿ ಕಾರ್ಯಗಳೇ ನಮಗೆ ನೆನಪಿಗೆ ಬಂದಿದ್ದವು. ಹಿಂದೆಯೂ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದ್ದರು. ರೈತ ಸಿದ್ದಲಿಂಗಪ್ಪ ಚೂರಿ ಗುಂಡೇಟಿಗೆ ಬಲಿಯಾಗಿದ್ದರು. ಇದೀಗ ಮಂಗಳೂರಿನಲ್ಲೂ ಗೋಲಿಬಾರ್ ಆಗಿದೆ‌. ಇದು ಉದ್ದೇಶಪೂರ್ವಕ ವಾತಾವರಣ ಅನ್ನೋದು ಸ್ಪಷ್ಟ. ಈ ಹಿಂಸಾಚಾರಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳೇ ನೇರ ಕಾರಣ ಎಂದು ಆರೋಪಿಸಿದರು.

ಮಂಗಳೂರು ಗೋಲಿಬಾರ್ ಪ್ರಕರಣದ ಬಗ್ಗೆ ತನಿಖೆಯಾಗಬೇಕು. ಉನ್ನತ ಮಟ್ಟದ ತನಿಖೆಯೇ ನಡೆಯಬೇಕು. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲೇ ತನಿಖೆ ನಡೆಯಬೇಕು. ಅಮಾಯಕರನ್ನ ಕೊಂದ ಕೊಲೆಗಡುಕರಿಗೆ ಶಿಕ್ಷೆಯಾಗಬೇಕು‌ ಎಂದು ಇದೇ ವೇಳೆ ಒತ್ತಾಯಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ..
ಪೊಲೀಸರು ವಿನಾಕಾರಣ ಗುಂಡು ಹಾರಿಸಿ ಅಮಾಯಕರನ್ನ ಕೊಂದಿದ್ದಾರೆ. ಇಡೀ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸಿಡಿದೆದ್ದಿದ್ದಾರೆ. ಧರ್ಮಾತೀತ, ಜಾತ್ಯಾತೀತವಾಗಿ ಜನರು ವಿರೋಧಿಸಿದ್ದಾರೆ. ಸರ್ಕಾರದ ನೀತಿಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದರೆ, ಶಾಂತಿಯುತ ಪ್ರತಿಭಟನೆಗೆ ಅವಕಾಶ ಇದೆ. ಎಷ್ಟೇ ಬಹುಮತ ಇದ್ದರೂ ಜನರ ಮುಕ್ತ ಅಭಿಪ್ರಾಯ ಹತ್ತಿಕ್ಕುವಂತಿಲ್ಲ. ಇದು ಪ್ರಜಾಪ್ರಭುತ್ವಕ್ಕೆ‌ ವಿರುದ್ಧ. ಇದನ್ನು ನೋಡಿದಾಗ ಹಿಟ್ಲರ್‌ ಆಡಳಿತ ನೆನಪಾಗುತ್ತದೆ. ಸದ್ಯ ತುರ್ತುಪರಿಸ್ಥಿತಿ ಘೋಷಿಸಿದಂತಾಗಿದೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಿ, ಹಿಂಸಾಚಾರ ಆಗದಂತೆ ನೋಡಿಕೊಳ್ಳಬೇಕು. ಪೊಲೀಸ್ ನವರೇ ಕುಮ್ಮಕ್ಕಿನಿಂದಲೇ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಸಿಎಂ ಆದೇಶ ಇದ್ದರೂ ಪೋಲಿಸ್ ನವರು ಗೋಲಿಬಾರ್ ನಡೆಸಿ ಇಬ್ಬರನ್ನು ಸಾಯಿಸಿದ್ದಾರೆ. ಸಿಎಂ ಯಡಿಯೂರಪ್ಪ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿ ಒಂದೋ ಯಡಿಯೂರಪ್ಪ ಸುಳ್ಳು ಹೇಳಿರಬೇಕು. ನಾನು ಹೀಗೆ ಹೇಳುತ್ತೇನೆ, ನೀವು ಹಾಗೆ ಮಾಡಿ ಅಂತಾ ಹೇಳಿರಬೇಕು. ಇಲ್ಲದೇ ಇದ್ದರೆ ಯಡಿಯೂರಪ್ಪ ಆದೇಶಕ್ಕೆ ಬೆಲೆಯೇ ಕೊಟ್ಟಂತಿಲ್ಲ ಎಂಬುದಾಗಿದೆ ಎಂದು ಕಿಡಿಕಾರಿದರು.

ಭಾವೋದ್ವೇಗಕ್ಕೊಳಗಾದ ಜಮೀರ್: ಸಿದ್ದರಾಮಯ್ಯ ಅವರ ಸುದ್ದಿಗೋಷ್ಠಿ ವೇಳೆ ಮಾಜಿ ಸಚಿವ ಜಮೀರ್ ಅಹಮ್ಮದ್ ಭಾವೋದ್ವೇಗಕ್ಕೆ ಒಳಗಾಗಿದ್ದರು. ವೈದ್ಯರ ಸಲಹೆ ಪಡೆದು ಮಂಗಳೂರಿಗೆ ಹೋಗುತ್ತಿದ್ದೇನೆ ಎಂದಾಗ ಮಧ್ಯಪ್ರವೇಶಿಸಿದ ಜಮೀರ್, ನಿಮಗೆ ಇತ್ತೀಚೆಗಷ್ಟೇ ಸ್ಟಂಟ್ ಹಾಕಲಾಗಿದೆ. ಪ್ರಾಣಕ್ಕೆ ಅಪಾಯವಿದೆ ಅಂತಾ ವೈದ್ಯರು ಹೇಳಿದ್ದಾರೆ.

ಮಂಗಳೂರಿಗೆ ಹೋಗುವುದು ಬೇಡವೆಂದು ವೈದ್ಯರು ಹೇಳಿದ್ದರು. ಆದರೆ, ನೀವು ಸಾವಿಗೆ ಹೆದರದೇ ಹೋಗಿಯೇ ಹೋಗುತ್ತೇನೆ ಅಂತಾ ಹೇಳಿದ್ದೀರಿ. ನನ್ನ ಪ್ರಾಣ ಹೋದರು ಚಿಂತೆ ಇಲ್ಲ. ಮಂಗಳೂರಿನ ಜನರನ್ನು ಭೇಟಿ ಮಾಡುತ್ತೇನೆ ಎಂದು ವೈದ್ಯರಿಗೆ ಹೇಳಿರುವ ಬಗ್ಗೆ ನೀವು ತಿಳಿಸಿ ಎಂದು ಭಾವೋದ್ವೇಗಕ್ಕೆ ಒಳಗಾಗಿ ಗಟ್ಟಿ ದನಿಯಲ್ಲಿ ವಿವರಿಸಿದರು. ದೇಶದಲ್ಲಿ ನಿಮ್ಮಂತಹವರು ಯಾರು ಸಿಗುತ್ತಾರೆ ಹೇಳಿ ಸರ್.. ನಿಮಗೆ ನನ್ನ ಹ್ಯಾಟ್ಸ್ಪ್ಅಪ್, ನಡೀರಿ ಸರ್ ಎಂದು ಹೇಳಿ ಮಾಜಿ ಸಚಿವ ಜಮೀರ್ ಎದ್ದು ನಿಂತರು.

Intro:hhh

Body:hhh

Conclusion:hhhg

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.