ETV Bharat / state

'ಮನೆಗೊಂದು ಬಚ್ಚಲುಗುಂಡಿ' ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆದ್ಯತೆ : ರಾಜ್ಯದಲ್ಲಿ ಯಶಸ್ವಿಯಾಗಿದೆಯೇ ಈ ಅಭಿಯಾನ? - soak pit construction news

ಸಮರ್ಪಕ ತ್ಯಾಜ್ಯ ನೀರಿನ ನಿರ್ವಹಣೆಯಿಂದಾಗಿ ಆರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ. ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಿಲ್ಲದೆ ಕಾಯಿಲೆಗಳು ಹರಡುವುದು ಕಡಿಮೆಯಾಗುತ್ತದೆ. ಕಾಯಿಲೆಗಳು ಕಡಿಮೆಯಾಗುವುದರಿಂದ ವೈದ್ಯಕೀಯ ವೆಚ್ಚ ಕಡಿಮೆಯಾಗುತ್ತದೆ. ಮನೆಯ ಸುತ್ತಮುತ್ತ ಸ್ವಚ್ಛವಾಗಿರುವ ಕಾರಣ ನೆರೆಹೊರೆಯವರೊಂದಿಗಿನ ಕಲಹಗಳು ಕಡಿಮೆಯಾಗುತ್ತವೆ. ಹೀಗಾಗಿ 'ಮನೆಗೊಂದು ಬಚ್ಚಲುಗುಂಡಿ' ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಇದು ಯಶ್ವಿಯಾಗಿದೆಯಾ? ಅಥವಾ ಇಲ್ಲವೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

soak-pit
ಬಚ್ಚಲುಗುಂಡಿ
author img

By

Published : Jun 10, 2021, 4:40 PM IST

ಬೆಂಗಳೂರು: ಗ್ರಾಮಗಳಲ್ಲಿ ತ್ಯಾಜ್ಯ ನೀರನ್ನು ರಸ್ತೆ ಮೇಲೆ ಹರಿಯುವುದನ್ನು ತಪ್ಪಿಸಿ ನೈರ್ಮಲ್ಯವನ್ನು ಕಾಪಾಡಲು ಹಾಗೂ ತ್ಯಾಜ್ಯ ನೀರು ಸಮರ್ಪಕ ನಿರ್ವಹಣೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ "ಮನೆಗೊಂದು ಬಚ್ಚಲುಗುಂಡಿ" ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ. ಕಳೆದ ಸೆಪ್ಟೆಂಬರ್ 2 ರಿಂದ ಬಚ್ಚಲುಗುಂಡಿ ನಿರ್ಮಾಣ ಅಭಿಯಾನವನ್ನು ಆರಂಭಿಸಿದ್ದು, ರಾಜ್ಯಾದ್ಯಂತ ಈಗಾಗಲೇ ಸುಮಾರು 2.63 ಲಕ್ಷ ಕುಟುಂಬಗಳು ಬಚ್ಚಲುಗುಂಡಿ ನಿರ್ಮಿಸಿಕೊಂಡಿವೆ. ಆದರೆ, ಕೋವಿಡ್ ಎರಡನೇ ಅಲೆ ಕಾರಣದಿಂದ ಬಚ್ಚಲುಗುಂಡಿ ಅಭಿಯಾನದ ವೇಗ ಕಡಿಮೆಯಾಗಿದೆ.

ಈ ಬಾರಿ ಕೊರೊನಾ ಮಹಾಮಾರಿ ಸೋಂಕು ಗ್ರಾಮೀಣ ಭಾಗದಲ್ಲಿ ಹೆಚ್ಚು ಅಪ್ಪಳಿಸಿದ್ದರಿಂದ ಈ ಯೋಜನೆ ಸ್ವಲ್ಪ ಮಟ್ಟಿಗೆ ಕುಂಠಿತಗೊಂಡಿದೆ ಎಂದೇ ಹೇಳಬಹುದು. ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದು, ಬಚ್ಚಲುಗುಂಡಿ ಅಭಿಯಾನಕ್ಕೆ ಮತ್ತೆ ಚುರುಕಾಗಲಿದೆ. ಪ್ರತಿ ಗ್ರಾಮ ಪಂಚಾಯತ್​ ವ್ಯಾಪ್ತಿಗೂ 50 ಬಚ್ಚಲು ಗುಂಡಿ ನಿರ್ಮಾಣದ ಗುರಿ ನೀಡಲಾಗಿದೆ. ಬಚ್ಚಲುಗುಂಡಿ ನಿರ್ಮಿಸಿಕೊಳ್ಳಲು ಪ್ರತಿ ಫಲಾನುಭವಿಗೆ 14 ಸಾವಿರ ರೂ. ಆರ್ಥಿಕ ನೆರವು ನೀಡುತ್ತಿದ್ದು, ಈ ನೆರವಿನಲ್ಲಿ ರಾಜ್ಯದ 3 ಲಕ್ಷ ಕುಟುಂಬಗಳು ಬಚ್ಚಲುಗುಂಡಿ ನಿರ್ಮಿಸಿಕೊಳ್ಳಲು ಉತ್ತೇಜಿಸಲಾಗುತ್ತಿದೆ.

soak-pit
ಬಚ್ಚಲುಗುಂಡಿ

ಬಚ್ಚಲುಗುಂಡಿ ನಿರ್ಮಿಸಿಕೊಳ್ಳುವುದರಿಂದ ಮಾರಣಾಂತಿಕ ಡೆಂಗ್ಯೂ, ಮಲೇರಿಯಾ ಮುಂತಾದ ರೋಗಗಳಿಂದ ಮುಕ್ತವಾಗುವುದಲ್ಲದೆ ನೈರ್ಮಲ್ಯದಿಂದ ಕಂಗೊಳಿಸಲಿವೆ. ಬಚ್ಚಲುಗುಂಡಿ ಸುತ್ತ ಪೋಷಕಾಂಶ ಸಸಿಗಳನ್ನು ನೆಡುವ ಮೂಲಕ ಅಗತ್ಯ ಪೋಷಕಾಂಶಗಳನ್ನು ಪಡೆಯಲು ಅವಕಾಶ ನೀಡಲಾಗಿದೆ.
ಗ್ರಾಮೀಣ ಭಾಗದ ಪ್ರತಿ ಮನೆಗೆ ವೈಯಕ್ತಿಕವಾಗಿ ಬಚ್ಚಲು ಗುಂಡಿ ನಿರ್ಮಿಸಲು ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಕುರಿತು ಎಲ್ಲ ಜಿಲ್ಲೆಗಳಿಂದಲೂ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಗ್ರಾಮೀಣ ಕರ್ನಾಟಕದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯ ಕೊರತೆ ಮತ್ತು ತ್ಯಾಜ್ಯ ನೀರಿನ ವಿಲೇವಾರಿಯ ಕುರಿತಾದ ನಿರ್ಲಕ್ಷ್ಯ ಮನೆಯಲ್ಲಿ ಬಳಕೆಯಾದ ತ್ಯಾಜ್ಯ ನೀರನ್ನು ಸರಿಯಾಗಿ ವಿಲೇವಾರಿ ಮಾಡದಿರಲು ಕಾರಣವಾಗಿದೆ. ಇದರಿಂದಾಗಿ ರಸ್ತೆಗಳ ಮೇಲೆ ಮತ್ತು ಮನೆಗಳ ಸುತ್ತಮುತ್ತ ಕೊಳಚೆ ನೀರು ಹರಿದು ಮಾಲಿನ್ಯ ಉಂಟಾಗುವುದು ಸಾಮಾನ್ಯ. ಬಚ್ಚಲು ನೀರಿನ ಸಮರ್ಪಕ ವಿಲೇವಾರಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉದ್ಯೋಗ ಖಾತರಿ ಯೋಜನೆಯಡಿ ಬಚ್ಚಲುಗುಂಡಿ ನಿರ್ಮಾಣ ಕಾಮಗಾರಿಯನ್ನು ಪ್ರೋತ್ಸಾಹಿಸಿ ಗ್ರಾಮಗಳಲ್ಲಿ ತ್ಯಾಜ್ಯ ನೀರಿನ ನಿರ್ವಹಣೆಯ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಪ್ರತಿ ಮನೆಯಲ್ಲಿಯೂ ಬಚ್ಚಲುಗುಂಡಿ ನಿರ್ಮಾಣದಿಂದ ತ್ಯಾಜ್ಯ ನೀರು ನಿರ್ವಹಣೆ ಸುಲಭ ಮತ್ತು ಸರಳವಾಗುವುದರ ಜೊತೆಗೆ ನೈರ್ಮಲ್ಯ, ಆರೋಗ್ಯದ ಜೊತೆಗೆ ಉದ್ಯೋಗ ಕೂಡ ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ತ್ಯಾಜ್ಯ ನೀರನ್ನು ನಿರ್ವಹಿಸದಿದ್ದರೆ ಆಗುವ ತೊಂದರೆಗಳೇನು?: ಮನೆಯ ಸುತ್ತಮುತ್ತ ಮಲಿನವಾದ ನೀರು ನಿಲ್ಲುವುದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಳ್ಳುತ್ತದೆ. ನಿಂತ ಕೊಳಚೆ ನೀರಿನ ಮೇಲೆ ವಾಹನಗಳು ಸಂಚರಿಸುವುದರಿಂದ ಮಾಲಿನ್ಯ ಎಲ್ಲೆಡೆ ಹರಡುತ್ತದೆ. ನೊಣ, ಸೊಳ್ಳೆ ಮುಂತಾದ ಕ್ರಿಮಿಗಳಿಗೆ ವಾಸಸ್ಥಾನವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ವಯಸ್ಸಾದವರು, ಗರ್ಭಿಣಿಯರು ಅಥವಾ ಮಕ್ಕಳು ಜಾರಿಬಿದ್ದು ಗಾಯಗೊಳ್ಳುವ ಸಾಧ್ಯತೆ ಇರುತ್ತದೆ. ಮನೆಯ ಸುತ್ತಮುತ್ತ ಬಚ್ಚಲು ನೀರು ನಿಲ್ಲುವುದರಿಂದ ದುರ್ವಾಸನೆ ಬರುತ್ತದೆ. ಅಕ್ಕ ಪಕ್ಕದ ಮನೆಗಳಿಗೆ ನೀರು ಹರಿಯುವುದರಿಂದ ನೆರೆಹೊರೆಯವರೊಂದಿಗೆ ಜಗಳ ಉಂಟಾಗುತ್ತದೆ. ಕೊಳಚೆ ನೀರು ಮನೆಯ ಸುತ್ತಮುತ್ತ ನಿಲ್ಲುವುದರಿಂದ ಸ್ವಚ್ಛತೆಗೆ ದಕ್ಕೆಯಾಗಲಿದೆ.

ಗ್ರಾಮೀಣ ಭಾಗವನ್ನು ಸಂಪೂರ್ಣ ಕೊಳಚೆ ಮುಕ್ತ ಮಾಡಲು ಹಾಗೂ ಬಚ್ಚಲು ಮನೆ ನೀರು ಚರಂಡಿ ಅಥವಾ ರಸ್ತೆಗೆ ಹರಿಯಬಿಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಪ್ರತಿ ಮನೆಗೆ ವೈಯಕ್ತಿಕವಾಗಿ ಬಚ್ಚಲು ಗುಂಡಿ ನಿರ್ಮಿಸಲು ಯೋಜನೆ ಜಾರಿಗೊಳಿಸಿದೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲ ಪುನಶ್ಚೇತನಗೊಳಿಸಿ ಅಭಿವೃದ್ಧಿಗೊಳಿಸುವುದು, ಕೊಳಚೆ ನೀರು ಸದ್ಬಳಕೆ ಮಾಡಿಕೊಳ್ಳುವುದು, ಬಚ್ಚಲು ಮನೆ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಗಟ್ಟುವುದು ಯೋಜನೆಯ ಉದ್ದೇಶವಾಗಿದೆ.

ಬಚ್ಚಲುಗುಂಡಿ ನಿರ್ಮಾಣ ಹೇಗೆ?: ಮನೆಯ ಬಳಿ ಕುಡಿಯುವ ನೀರಿನ ಮೂಲಗಳಿದ್ದಲ್ಲಿ 30 ಮೀಟರ್ ದೂರದಲ್ಲಿ ಅಥವಾ ಮನೆಯ ಹಿತ್ತಲಿನಲ್ಲಿ 1.5 ಮೀ. ಉದ್ದ, 1.5 ಮೀ. ಅಗಲ ಹಾಗೂ 2 ಮೀ. ಆಳದ ಗುಂಡಿಯನ್ನು ತೆಗೆಯುವುದು. ಗುಂಡಿಯ ತಳಭಾಗಕ್ಕೆ ಸ್ಥಳೀಯವಾಗಿ ಲಭ್ಯವಾಗುವ ಕಲ್ಲುಗುಂಡುಗಳಿಂದ 0.8 ಎತ್ತರದವರೆಗೂ ತುಂಬಬೇಕು. ಹೀಗೆ ತುಂಬಿದ ನಂತರ ಅದರ ಮೇಲೆ ಒಂದರ ಮೇಲೊಂದರಂತೆ ಆರ್.ಸಿ.ಸಿ ರಿಂಗ್ ಗಳನ್ನು ಕೂರಿಸುವುದು. ರಿಂಗ್ ನ ಹೊರಭಾಗವನ್ನು 40 ಎಂಎಂ ಹಾಗೂ 20 ಎಂಎಂ ಜಲ್ಲಿ ಮರಳಿನಿಂದ ತುಂಬಬೇಕು. ತ್ಯಾಜ್ಯ ನೀರನ್ನು ಪೈಪ್ ಮೂಲಕ ಹರಿಯುವಂತೆ ಪೈಪ್ ಅಳವಡಿಸಿ ಮೇಲ್ಭಾಗವನ್ನು ಕಾಂಕ್ರೀಟ್ ಸ್ಟ್ಯಾಬ್ ಹಾಕಿ ಮುಚ್ಚಬೇಕಾಗುತ್ತದೆ. ಇದರಿಂದ ಸುರಕ್ಷಿತವಾಗಿ ತ್ಯಾಜ್ಯ ನೀರು ಬಚ್ಚಲುಗುಂಡಿಯಲ್ಲಿ ಇಂಗುತ್ತದೆ.

ಬಚ್ಚಲುಗುಂಡಿಯ ಉಪಯೋಗಗಳೇನು? : ಸಮರ್ಪಕ ತ್ಯಾಜ್ಯ ನೀರಿನ ನಿರ್ವಹಣೆಯಿಂದಾಗಿ ಆರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ. ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಿಲ್ಲದೆ ಕಾಯಿಲೆಗಳು ಹರಡುವುದು ಕಡಿಮೆಯಾಗುತ್ತದೆ. ಕಾಯಿಲೆಗಳು ಕಡಿಮೆಯಾಗುವುದರಿಂದ ವೈದ್ಯಕೀಯ ವೆಚ್ಚ ಕಡಿಮೆಯಾಗುತ್ತದೆ. ಮನೆಯ ಸುತ್ತಮುತ್ತ ಸ್ವಚ್ಛವಾಗಿರುವ ಕಾರಣ ನೆರೆಹೊರೆಯವರೊಂದಿಗಿನ ಕಲಹಗಳು ಕಡಿಮೆಯಾಗುತ್ತವೆ. ಹಿರಿಯರಿಗೆ, ಮಕ್ಕಳಿಗೆ ಮನೆಯ ಸುತ್ತಮುತ್ತ ಓಡಾಡಲು, ಆಟವಾಡಲು ಸ್ವಚ್ಛ ಪರಿಸರ ನಿರ್ಮಾಣವಾಗುತ್ತದೆ. ಮಣ್ಣಿನ ತೇವಾಂಶ ವೃದ್ಧಿಯಾಗುವುದರಿಂದ ಪೌಷ್ಠಿಕಾಂಶ ಸಸಿಗಳ ನಾಟಿಗೆ ಅನುಕೂಲವಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ.

ಸಾಧನೆ ಮಾಡಿದ ಜಿಲ್ಲೆಗಳು: ಬಚ್ಚಲುಗುಂಡಿ ನಿರ್ಮಾಣದಿಂದ ಸಮುದಾಯದಲ್ಲಿ ಆರೋಗ್ಯ, ಸ್ವಚ್ಛತೆ ಮತ್ತು ಸಾಮರಸ್ಯ ಹೆಚ್ಚುವುದಲ್ಲದೇ ಪರಿಸರ ನೈರ್ಮಲ್ಯವೂ ವೃದ್ಧಿಯಾಗುತ್ತದೆ. ಅತಿ ಹೆಚ್ಚು ಬಚ್ಚಲುಗುಂಡಿ ನಿರ್ಮಿಸಿಕೊಳ್ಳುವ ಮೂಲಕ ಪರಿಸರದ ಕುರಿತಾಗಿ ತಮಗಿರುವ ಕಾಳಜಿ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಸಾರಿದ ಜಿಲ್ಲೆಗಳು ಹೀಗಿವೆ. ಬೆಳಗಾವಿ ಜಿಲ್ಲೆಯಲ್ಲಿ 50,635 ಬಚ್ಚಲುಗುಂಡಿ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಬಳ್ಳಾರಿ ಜಿಲ್ಲೆಯಲ್ಲಿ 18,680, ಚಿಕ್ಕಮಗಳೂರು ಜಿಲ್ಲೆಯಲ್ಲಿ 13,681, ಕಲಬುರಗಿ ಜಿಲ್ಲೆಯಲ್ಲಿ 12,433, ಬಾಗಲಕೋಟೆ ಜಿಲ್ಲೆಯಲ್ಲಿ 11,944 ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 10,713 ಬಚ್ಚಲುಗುಂಡಿ ನಿರ್ಮಾಣವಾಗಿವೆ. ಇತರ ಜಿಲ್ಲೆಗಳಲ್ಲೂ ಈ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಇನ್ನು ಮುಂದೆ ಕೆಲಸ ಚುರುಕುಗೊಳ್ಳಲಿದೆ.

"ರಾಜ್ಯದಲ್ಲಿ 3 ಲಕ್ಷ ಸೋಕ್ ಪಿಟ್ (ಬಚ್ಚಲುಗುಂಡಿ) ನಿರ್ಮಿಸುವ ಗುರಿ ಹೊಂದಲಾಗಿದೆ. ವೈಯಕ್ತಿಕ ಮತ್ತು ಸಮುದಾಯ ಸೋಕ್ ಪಿಟ್ ಗಳನ್ನು ನಿರ್ಮಿಸಿಕೊಳ್ಳಲು ಉತ್ತೇಜನ ನೀಡಲಾಗುತ್ತದೆ. ಈ ಸೋಕ್ ಪಿಟ್​ಗಳು ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿ, ಗ್ರಾಮಗಳನ್ನು ಶುಚಿಯಾಗಿ ಇಟ್ಟುಕೊಳ್ಳುವ ಮೂಲಕ ಸುಸ್ಥಿರ ನೈರ್ಮಲ್ಯವನ್ನು ಖಾತ್ರಿಪಡಿಸುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಕಡಿಮೆ ಮಾಡಿ ಜನರ ಆರೋಗ್ಯ ರಕ್ಷಣೆಗೆ ನೆರವಾಗಲಿದೆ " ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಹೇಳಿದ್ದಾರೆ.

ಓದಿ: ಯಾವುದೇ ಒತ್ತಡದಿಂದ ಸಿಂಧೂರಿ ವರ್ಗಾವಣೆಯಾಗಿಲ್ಲ: ಸಚಿವ ಸೋಮಶೇಖರ್ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.