ETV Bharat / state

ಸ್ವಿಗ್ಗಿ, ಜೊಮೊಟೊ ಒಳಗೊಂಡಂತೆ ಇ - ಕಾರ್ಮಸ್​ನ ಅಸಂಘಟಿತ ನೌಕರರಿಗೆ ಬಜೆಟ್​ನಲ್ಲಿ‌ ಗುಡ್​ನ್ಯೂಸ್ ನೀಡಿದ ಸರ್ಕಾರ

author img

By

Published : Jul 7, 2023, 5:17 PM IST

ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಮಿಕರಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ಹಾಗೆಯೇ ಅವರ ಜೀವವಿಮೆ ಹಾಗೂ ಅಪಘಾತ ವಿಮೆ ಸೌಲಭ್ಯಗಳಿಗೆ ಸರ್ಕಾರವೇ ವಿಮಾ ಕಂತು ಭರಿಸಲಿದೆ.

ಸ್ವಿಗ್ಗಿ
ಸ್ವಿಗ್ಗಿ

ಬೆಂಗಳೂರು : ಸ್ವಿಗ್ಗಿ, ಜೊಮಾಟೊ, ಅಮೆಜಾನ್ ಸೇರಿ ಇ-ಕಾರ್ಮಸ್ ಸಂಸ್ಥೆಗಳಲ್ಲಿ ಪೂರ್ಣ ಹಾಗೂ ಅರೆಕಾಲಿಕ ನೌಕರರಾಗಿ ಕೆಲಸ ಮಾಡುತ್ತಿರುವವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು 2 ಲಕ್ಷ ಜೀವವಿಮೆ ಹಾಗೂ 2 ಲಕ್ಷ ಅಪಘಾತ ವಿಮಾ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಮೂಲಕ ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ Gig workers ನ ಸಾವಿರಾರು ಕಾರ್ಮಿಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅಲ್ಲದೇ ಜೀವವಿಮೆ ಹಾಗು ಅಪಘಾತ ವಿಮೆ ಸೌಲಭ್ಯಗಳಿಗೆ ಸರ್ಕಾರವೇ ವಿಮಾ ಕಂತು ಭರಿಸಲಿದೆ. ಕಾರ್ಖಾನೆ, ಬಾಯ್ಲರುಗಳು ಹಾಗೂ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿ ವ್ಯವಹಾರ ಸರಳೀಕರಣಗೊಳಿಸಲು ಎಲ್ಲ ಸೇವೆಗಳು ಆನ್​ಲೈನ್​ ಮೂಲಕ ಒದಗಿಸಲು ಮುಂದಾಗಿದೆ‌.

ಆರು ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ ಒಟ್ಟು 35 ಬೆಡ್​ಗಳ ಸಾಮರ್ಥ್ಯದ ಐಸಿಯು ‌ನಿರ್ಮಾಣಕ್ಕೆ 13 ಕೋಟಿ ವೆಚ್ಚದಲ್ಲಿ, ಆರು ಆಸ್ಪತ್ರೆಗಳಲ್ಲಿ 25 ಡಯಾಲಿಸಿಸ್ ಘಟಕ ನಿರ್ಮಾಣಕ್ಕೆ ಐದು ಕೋಟಿ ಮೀಸಲಿರಿಸಿದೆ. ಎರಡು ಆಸ್ಪತ್ರೆಗಳಲ್ಲಿ ಹೊಸ‌ ಲೆವೆಲ್ ನ ಟ್ರಾಮಾ ಕೇರ್ ಸೆಂಟರ್ ಗಳನ್ನ 24 ಕೋಟಿ ರೂ ವೆಚ್ಚದಲ್ಲಿ, ನಾಲ್ಕು ಆಸ್ಪತ್ರೆಗಳಲ್ಲಿ ಮಾಡ್ಯುಲಾರ್ ಆಪರೇಷನ್ ಥಿಯೇಟರ್ ಗಳ ನಿರ್ಮಾಣಕ್ಕೆ 8 ಕೋಟಿ, ರೋಗ ಪತ್ತೆ ಹಚ್ಚುವ ಕೇಂದ್ರಗಳ ಉನ್ನತೀಕರಣಕ್ಕಾಗಿ 35 ಕೋಟಿ ಸೇರಿ ಒಟ್ಟು 85 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ದಿಪಡಿಸುವುದಾಗಿ ಸರ್ಕಾರ ತಿಳಿಸಿದೆ. ಎಲ್ಲ ಕಾರ್ಮಿಕ ವಿಮಾ ಆಸ್ಪತ್ರೆಗಳಲ್ಲಿ ಆರ್ಯುವೇದ, ಹೋಮಿಯೋಪಥಿ ಮತ್ತು ಯೋಗ ಕೇಂದ್ರಗಳು ಒಳಗೊಂಡ ಆಯುಷ್ ವಿಭಾಗವನ್ನ 3 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ.

ಇದನ್ನೂ ಓದಿ: Karnataka Budget: ಪುನೀತ್​ ಸ್ಮರಣಾರ್ಥ ಹಠಾತ್ ಹೃದಯ ಸಂಬಂಧಿ ಸಾವು ತಡೆಗಟ್ಟಲು ₹6 ಕೋಟಿ ಅನುದಾನ

ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ: ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಅಗತ್ಯ ಮೂಲ ಸೌಲಭ್ಯವನ್ನು ಕಲ್ಪಿಸಲು ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ದೃಷ್ಟಿಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.

ಇದನ್ನೂ ಓದಿ: Karnataka Budget: ಯಾವ ಇಲಾಖೆಗೆ ಎಷ್ಟು ಅನುದಾನ ಹಂಚಿಕೆ; ಇವುಗಳಿಗೆ ಆದಾಯ ಸಂಗ್ರಹ ಹೇಗೆ?

ರಾಜ್ಯದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಹೊರ ರಾಜ್ಯದ ಶಿಲ್ಪಿಗಳ ಮೇಲೆ ಅವಲಂಬಿತರಾಗಿದ್ದು, ನಮ್ಮ ರಾಜ್ಯದಲ್ಲಿಯೂ ದೇವಾಲಯಗಳ ನಿರ್ಮಾಣಕ್ಕಾಗಿ ನುರಿತ ಶಿಲ್ಪಿಗಳನ್ನು ತಯಾರಿಸಲು ಕೋಲಾರ ಜಿಲ್ಲೆಯಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ ಪ್ರಾರಂಭಿಸಲು ನಿರ್ಧರಿಸಿದೆ. ಆದಾಯವಿಲ್ಲದ ಸಿ ವರ್ಗದ ಒಟ್ಟು 121 ಮುಜರಾಯಿ ದೇವಸ್ಥಾನಗಳಿಗೆ ಕನಿಷ್ಠ 35 ರೂಪಾಯಿಗಳಿಂದ 15 ಸಾವಿರದವರೆಗೂ ನಗದು ಸಹಯಾನುದಾನ ನೀಡಲಾಗುತ್ತಿದ್ದು, ಎಲ್ಲಾ ದೇವಸ್ಥಾನಗಳಿಗೆ ಸಮಾನವಾಗಿ 15 ಸಾವಿರ ನೀಡಲಾಗುವುದು ಎಂದು ಬಜೆಟ್​ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಲೆಕ್ಕ: ಆದಾಯ ಸಂಗ್ರಹಕ್ಕೆ ಹೆಚ್ಚು ಒತ್ತು,ಆದಾಯ ಕೊರತೆಯ ಬಜೆಟ್​...₹85,818 ಕೋಟಿ ಸಾಲದ ಮೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.