ETV Bharat / state

ಉಪರಾಷ್ಟ್ರಪತಿ ಭೇಟಿಯಾದ ಸ್ಪೀಕರ್ : ಕಲಾಪಗಳಿಗೆ ಅಡ್ಡಿಯಾಗದಂತೆ ನಿಯಮ ತಿದ್ದುಪಡಿಗೆ ಮನವಿ - ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು

ಒಂದು ರಾಷ್ಟ್ರ, ಒಂದು ಚುನಾವಣೆ, ಭಾರತೀಯ ಸಂವಿಧಾನದ ಕುರಿತಂತೆ ಕರ್ನಾಟಕ ವಿಧಾನಸಭೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿದ್ದನ್ನು ಉಪರಾಷ್ಟ್ರಪತಿಯವರಿಗೆ ತಿಳಿಸಿದ ಸ್ಪೀಕರ್, ಪಕ್ಷಾಂತರದ ಪಿಡುಗಿನ ನಿರ್ಮೂಲನೆಗೆ ಸಂವಿಧಾನದ 10ನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಅಗತ್ಯ ಪ್ರತಿಪಾದಿಸಿದರು..

ಉಪರಾಷ್ಟ್ರಪತಿ ಭೇಟಿಯಾದ ಸ್ಪೀಕರ್
ಉಪರಾಷ್ಟ್ರಪತಿ ಭೇಟಿಯಾದ ಸ್ಪೀಕರ್
author img

By

Published : Aug 24, 2021, 8:44 PM IST

ಬೆಂಗಳೂರು : ನಿಯಮಗಳಿಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಇನ್ಮುಂದೆ ಸದನದ ಕಾರ್ಯ ಕಲಾಪಗಳಿಗೆ ಅಡ್ಡಿಪಡಿಸದಂತೆ ತಡೆಯುವ ಅಗತ್ಯವಿದೆ ಎಂದು ಸ್ಪೀಕರ್ ಅವರು ಉಪಾರಾಷ್ಟ್ರಪತಿಯವರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ರಾಜಭವನದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿಯಾದರು. ಭೇಟಿಯ ವೇಳೆ ಸ್ಪೀಕರ್, ಕೆಲವೇ ಕೆಲವು ಸದಸ್ಯರ ಅನುಚಿತ ವರ್ತನೆ, ಗದ್ದಲದಿಂದಾಗಿ ವಿಧಾನ ಮಂಡಲದ ಕಾರ್ಯ ಕಲಾಪಕ್ಕೆ ಪದೇಪದೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆ ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಲವೇ ಕೆಲವು ಸದಸ್ಯರ ವರ್ತನೆಯಿಂದಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಬಯಸುವ ಇತರ ಸದಸ್ಯರ ಹಕ್ಕಿಗೆ ಚ್ಯುತಿಯಾಗುತ್ತಿದೆ ಮತ್ತು ಈ ಅನುಚಿತ ವರ್ತನೆ ಪ್ರಜಾಪ್ರಭುತ್ವದ ದೇಗುಲಗಳಾದ ಸಂಸತ್ತು ಮತ್ತು ವಿಧಾನ ಮಂಡಲದ ಘನತೆಗೆ ಕುಂದುಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಂಸದರು ಸದನದಲ್ಲಿ ಹೇಗಿರಬೇಕು ಎಂದು ಪಕ್ಷಗಳು ನೀತಿ ಸಂಹಿತೆ ಪ್ರಕಟಿಸಬೇಕು: ವೆಂಕಯ್ಯ ನಾಯ್ಡು

ಒಂದು ರಾಷ್ಟ್ರ, ಒಂದು ಚುನಾವಣೆ, ಭಾರತೀಯ ಸಂವಿಧಾನದ ಕುರಿತಂತೆ ಕರ್ನಾಟಕ ವಿಧಾನಸಭೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿದ್ದನ್ನು ಉಪರಾಷ್ಟ್ರಪತಿಯವರಿಗೆ ತಿಳಿಸಿದ ಸ್ಪೀಕರ್, ಪಕ್ಷಾಂತರದ ಪಿಡುಗಿನ ನಿರ್ಮೂಲನೆಗೆ ಸಂವಿಧಾನದ 10ನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಅಗತ್ಯ ಪ್ರತಿಪಾದಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.