ETV Bharat / state

ಮಾರ್ಷಲ್​ಗಳ ಮೇಲೆ ಸಾರ್ವಜನಿಕರ ದರ್ಪ: ಮಾಸ್ಕ್​ ಹಾಕಿ ಅನ್ನೋದೇ ತಪ್ಪಾ?

ಬೆಂಗಳೂರಿನಲ್ಲಿ ಮಾಸ್ಕ್​​ ಹಾಕದವರಿಗೆ ದಂಡ ವಿಧಿಸಲು ಬಿಬಿಎಂಪಿ ಮಾರ್ಷಲ್​​ಗಳನ್ನ ನೇಮಕ ಮಾಡಿದೆ. ಆದ್ರೆ ಮಾರ್ಷಲ್​ಗಳು ಮಾಸ್ಕ್​ ಹಾಕಿ ಎಂದು ಸಾರ್ವಜನಿಕರಿಗೆ ಹೇಳಿದ್ರೆ, ಅವರಿಗೇ ನಿಂದಿಸಿ, ಹಲ್ಲೆ ಮಾಡುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿವೆ.

ಮಾರ್ಷಲ್​ಗೆ ಅವಾಜ್​ ಹಾಕಿದ ಮಹಿಳೆ
ಮಾರ್ಷಲ್​ಗೆ ಅವಾಜ್​ ಹಾಕಿದ ಮಹಿಳೆ
author img

By

Published : Nov 29, 2020, 1:59 PM IST

ಬೆಂಗಳೂರು: ಮಾಸ್ಕ್​​ ಯಾಕೆ ಹಾಕಿಲ್ಲ ಎಂದು ಮಾರ್ಷಲ್​​ ಒಬ್ಬರು ಮಹಿಳೆಯನ್ನು ಪ್ರಶ್ನಿಸಿದ್ದಕ್ಕೆ, ಆಕೆ ಅವರಿಗೇ ಆವಾಜ್​ ಹಾಕಿರುವ ಘಟನೆ ನಗರದ ವಾರ್ಡ್​ ನಂ.170 ಜಯನಗರದಲ್ಲಿ ನಡೆದಿದೆ.

ಮಾರ್ಷಲ್​ಗಳ ಮೇಲೆ ಸಾರ್ವಜನಿಕರ ದರ್ಪ

ಕೊರೊನಾವನ್ನು ನಿಯಂತ್ರಿಸುವ ಸಲುವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಜನರ ಬೇಜವಾಬ್ದಾರಿತನಕ್ಕೆ ಬ್ರೇಕ್ ಹಾಕಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಾಸ್ಕ್ ಹಾಕದವರಿಗೆ ದಂಡ ಹಾಕಲು ಮಾರ್ಷಲ್​​ಗಳನ್ನ ನೇಮಕ ಮಾಡಿದೆ. ಆದರೆ ಸಾರ್ವಜನಿಕರ ದರ್ಪಕ್ಕೆ ಇದೀಗ ಮಾರ್ಷಲ್​​ಗಳು ಹೈರಾಣಾಗಿದ್ದಾರೆ.

ಇದನ್ನು ಓದಿ: ಸಂತೋಷ್ ಡಿಸ್ಚಾರ್ಜ್ ಕುರಿತು ಡಾ. ಸಂಜಯ್ ಕುಲಕರ್ಣಿ ಹೇಳಿದ್ದೇನು?

ನಿನ್ನೆ ವಾರ್ಡ್ ನಂ 170 ಜಯನಗರದಲ್ಲಿ ಮಾರ್ಷಲ್​​ಗೆ ಮಹಿಳೆಯೊಬ್ಬರು ನಿಂದನೆ ಮಾಡಿದ್ದಾರೆ. ಮಾಸ್ಕ್ ಹಾಕಿದವರಿಗೇನು ಕೊರೊನಾ ಬರೋದಿಲ್ವಾ ಎಂದು ಜೋರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾಸ್ಕ್​​ ಹಾಕಿಲ್ಲ ದಂಡ ಕಟ್ಟಿ ಎಂದು ಮಾರ್ಷಲ್​ಗಳು ಸಾರ್ವಜನಿಕರಿಗೆ ಹೇಳಿದ್ರೆ, ಕಟ್ಟದೇ ಬೈದು ಹಲ್ಲೆ ಕೂಡ ಮಾಡುತ್ತಿದ್ದಾರಂತೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದ್ರೆ, ಅವರು ಕೂಡ ದೂರು ಸ್ವೀಕಾರ ಮಾಡ್ತಿಲ್ಲ ಎಂಬುದು ಮಾರ್ಷಲ್​ಗಳ ಆರೋಪವಾಗಿದೆ.‌ ಪ್ರಸ್ತುತ ಇರೋ ಮಾರ್ಷಲ್​​ಗಳ ಪೈಕಿ ಬಹುತೇಕರು ಎಕ್ಸ್ ಆರ್ಮಿ ಹಾಗೂ ಎನ್​ಸಿಸಿ ವಿದ್ಯಾರ್ಥಿಗಳೇ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.