ETV Bharat / state

ಕಾರಲ್ಲೇ ಬಿಟ್ಟು ಹೋದ ಚಿನ್ನಾಭರಣ ವಾಪಸ್​... ಓಲಾ ಚಾಲಕನ ಪ್ರಾಮಾಣಿಕತೆ ಕೊಂಡಾಡಿದ ನೆಟ್ಟಿಗರು

author img

By

Published : Sep 23, 2019, 5:19 PM IST

ವ್ಯಕ್ತಿಯೋರ್ವ ರೈಲ್ವೇ ಸ್ಟೇಷನ್​ನಿಂದ ಮನೆಗೆ ಕಾರಲ್ಲಿ ತೆರಳುತ್ತಿರುವ ವೇಳೆ, ಕಾರಿನಲ್ಲೇ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್​ ಮರೆತಿದ್ದಾರೆ. ಕ್ಯಾಬ್​ ಚಾಲಕ ಬ್ಯಾಗ್​ನ್ನು ನೋಡಿದ ಕೂಡಲೇ ಮಾಲೀಕನಿಗೆ ಕರೆ ಮಾಡಿ ಬ್ಯಾಗ್​ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.

ಫೇಸ್​​ಬುಕ್​​ನಲ್ಲಿ ಸಂತಸ ಹಂಚಿಕೊಂಡ ರವಿಂದ್ರನ್

ಬೆಂಗಳೂರು: ಕ್ಯಾಬ್​​ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಗ್ರಾಹಕನಿಗೆ ಹಸ್ತಾಂತರಿಸುವ ಮೂಲಕ ಓಲಾ ಕ್ಯಾಬ್ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಕೆ.ಆರ್.ಪುರಂ ರೈಲ್ವೇ ಸ್ಟೇಷನ್ ನಿಂದ ಮನೆಗೆ ಹೋಗಲು ರವಿಂದ್ರನ್ ಎಂಬುವರು ಕ್ಯಾಬ್ ಬುಕ್ ಮಾಡಿದ್ದರು. ಓಲಾ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಕಾರಿನ ಟಯರ್​ ಪಂಚರ್ ಆಗಿದೆ. ಈ ವೇಳೆ ಚಾಲಕ ರೆಹಮಾನ್, ಕಾರ್ ಪಂಚರ್ ಆಗಿದೆ. ನೀವೂ ಮತ್ತೊಂದು ಕ್ಯಾಬ್ ಬುಕ್‌ ಮಾಡಿ ಹೊರಡಿ ಎಂದು ರವಿಂದ್ರನ್ ಗೆ ಚಾಲಕ ಮನವಿ ಮಾಡಿಕೊಂಡಿದ್ದರು.

Ola Driver Who Honestly Returns the Bag
ಫೇಸ್​​ಬುಕ್​​ನಲ್ಲಿ ಸಂತಸ ಹಂಚಿಕೊಂಡ ರವಿಂದ್ರನ್

ಬೇರೆ ಕ್ಯಾಬ್ ಬುಕ್ ಮಾಡಿಕೊಂಡು ಗಡಿಬಿಡಿಯಲ್ಲೇ ಜೊತೆಗಿದ್ದ ಬ್ಯಾಗ್​ನ್ನು ಕ್ಯಾಬ್​​ನಲ್ಲೇ ಬಿಟ್ಟು ಹೋಗಿದ್ದರು. ಕೆಲ ಗಂಟೆಗಳ ಬಳಿಕ ಹಿಂಬದಿ ಸೀಟಿನಲ್ಲಿ ಬ್ಯಾಗ್ ಇರುವುದನ್ನು ಚಾಲಕ ಗಮನಿಸಿದ್ದಾರೆ. ಬ್ಯಾಗ್ ತೆಗೆದು ನೋಡಿದಾಗ 2.5 ಲಕ್ಷ ರೂ.ಮೌಲ್ಯದ ಲ್ಯಾಪ್ ಟಾಪ್, ಹಾಗೂ ಚಿನ್ನಾಭರಣ ಇರುವುದನ್ನು ಕಂಡ ಕೂಡಲೇ ರವೀಂದ್ರನ್ ಗೆ ಕರೆ ಮಾಡಿದ್ದಾರೆ. ಮಾರತಹಳ್ಳಿಗೆ ರವೀಂದ್ರನ್ ಅವರನ್ನು ಕರೆಸಿಕೊಂಡು ಬ್ಯಾಗ್ ಪ್ರಾಮಾಣಿಕವಾಗಿ ಒಪ್ಪಿಸಿದ್ದಾರೆ.

ಈ ಬಗ್ಗೆ ಬೆಂಗಳೂರು ಸಿಟಿ ಫೇಸ್ಬುಕ್ ಪೇಜಿನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.‌ ಅಲ್ಲದೆ ಪ್ರಾಮಾಣಿಕತೆ‌ ಮರೆದಿರುವ ಚಾಲಕನಿಗೆ ಬೆಂಗಳೂರು ಪೊಲೀಸರು ಗೌರವಿಸಬೇಕೆಂದು ಮನವಿ‌ ಸಹ ಮಾಡಿಕೊಂಡಿದ್ದಾರೆ. ಇದೀಗ ಚಾಲಕನ ಪ್ರಾಮಾಣಿಕತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಸುರಿಮಳೆ ವ್ಯಕ್ತವಾಗುತ್ತಿದೆ.

Intro:Body:ಬೆಂಗಳೂರು: ಕ್ಯಾಬ್ ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಗ್ರಾಹಕನಿಗೆ ಹಸ್ತಾಂತರಿಸುವ ಮೂಲಕ ಓಲಾ ಕ್ಯಾಬ್ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೆ.ಆರ್.ಪುರಂ ರೇಲ್ವೇ ಸ್ಟೇಷನ್ ನಿಂದ ಮನೆಗೆ ಹೋಗಲು ರವಿಂದ್ರನ್ ಎಂಬುವರು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಓಲಾ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಕಾರ್ ಟೈರ್ ಪಂಚರ್ ಆಗಿದೆ. ಈ ವೇಳೆ ಚಾಲಕ ರೆಹಮಾನ್, ಕಾರ್ ಪಂಚರ್ ಆಗಿದೆ.. ನೀವೂ ಮತ್ತೊಂದು ಕ್ಯಾಬ್ ಬುಕ್‌ ಮಾಡಿ ಹೊರಡಿ ಎಂದು ರವಿಂದ್ರನ್ ಗೆ ಚಾಲಕ ಮನವಿ ಮಾಡಿಕೊಂಡಿದ್ದಾರೆ.
ಬೇರೆ ಕ್ಯಾಬ್ ಬುಕ್ ಮಾಡಿಕೊಂಡು ಗಡಿಬಿಡಿಯಲ್ಲೇ ಜೊತೆಗಿದ್ದ ಬ್ಯಾಗ್ ಕ್ಯಾಬ್ ನಲ್ಲೇ ಬಿಟ್ಟು ಹೋಗಿದ್ದರು. ಕೆಲ ಗಂಟೆಗಳ ಬಳಿಕ ಹಿಂಬದಿ ಸೀಟಿನಲ್ಲಿ ಬ್ಯಾಗ್ ಇರುವುದನ್ನು ಚಾಲಕ ಗಮನಿಸಿದ್ದಾರೆ. ಬ್ಯಾಗ್ ತೆಗೆದು ನೋಡಿದಾಗ 2.5 ಲಕ್ಷ ರೂ.ಮೌಲ್ಯದ ಲ್ಯಾಪ್ ಟಾಪ್, ಹಾಗೂ ಚಿನ್ನಾಭರಣ ಇರುವುದನ್ನು ಕಂಡ ಕೂಡಲೇ ರವೀಂದ್ರನ್ ಗೆ ಕರೆ ಮಾಡಿದ್ದಾರೆ. ಮಾರತ್ ಹಳ್ಳಿಗೆ ರವೀಂದ್ರನ್ ನನ್ನು ಕರೆಸಿಕೊಂಡು ಬ್ಯಾಗ್ ಪ್ರಾಮಾಣಿಕವಾಗಿ ಒಪ್ಪಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಸಿಟಿ ಫೇಸ್ಬುಕ್ ಪೇಜಿನಲ್ಲಿ ತಮ್ಮ‌ ಅನುಭವ ಹಂಚಿಕೊಂಡಿದ್ದಾರೆ.‌ ಅಲ್ಲದೆ ಪ್ರಾಮಾಣಿಕತೆ‌ ಮರೆದಿರುವ ಚಾಲಕನಿಗೆ ಬೆಂಗಳೂರು ಪೊಲೀಸರು ಗೌರವಿಸಬೇಕೆಂದು ಮನವಿ‌ ಸಹ ಮಾಡಿಕೊಂಡಿದ್ದಾರೆ. ಇದೀಗ ಚಾಲಕನ ಪ್ರಾಮಾಣಿಕತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ಸುರಿಮಳೆ ವ್ಯಕ್ತವಾಗುತ್ತಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.