ETV Bharat / state

ಬಜೆಟ್​​ ವಿರುದ್ಧ ಆಕ್ಷೇಪಾರ್ಹ ಪೋಸ್ಟ್​​ ಪ್ರಕರಣ: ಶಶಿಧರ್ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ಬ್ರೇಕ್​

ಬಜೆಟ್​ನಲ್ಲಿ ರಾಘವೇಂದ್ರ ಔರಾದ್ಕರ್ ಸಮಿತಿಯ ವರದಿ ಮಂಡನೆಯಾಗಿಲ್ಲ ಎಂದು ಸಿಎಂ ವಿರುದ್ಧ ಫೇಸ್​​ಬುಕ್​ನಲ್ಲಿ ಅಕ್ಷೇಪಾರ್ಹ ಪೋಸ್ಟ್​​ ಹಾಕಿದ್ದ ಆರೋಪದ ಮೇಲೆ ಪೊಲೀಸ್ ಸಂಘದ ಅಧ್ಯಕ್ಷ ವಿ.ಶಶಿಧರ್ ವಿದುದ್ಧ ದಾಖಲಿಲಾಗಿದ್ದ ಎಫ್​ಐಆರ್​ಗೆ ಹೈಕೋರ್ಟ್ ತಡೆ ನೀಡಿದೆ.

ಪೊಲೀಸ್ ಸಂಘದ ಅಧ್ಯಕ್ಷ ವಿ.ಶಶಿಧರ್
author img

By

Published : Mar 15, 2019, 8:15 AM IST

ಬೆಂಗಳೂರು:ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ ಬಗ್ಗೆ ಪೊಲೀಸ್ ಸಂಘದ ಅಧ್ಯಕ್ಷ ವಿ.ಶಶಿಧರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು. ಈ ಎಫ್​ಐಆರ್​ಗೆ ಹೈಕೋರ್ಟ್ ತಡೆ ನೀಡಿದೆ.

ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್​ನಲ್ಲಿ2016ರಲ್ಲಿ ಸಿದ್ಧಪಡಿಸಿದ ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ಯಾವುದು ಕೂಡ ಸರಿಯಾದ ರೀತಿ ಮಂಡನೆಯಾಗಿಲ್ಲ ಎಂದು ಕಿಡಿಕಾರಿದ್ದರು. ಅಲ್ಲದೆ, ಎಫ್​ಬಿಯಲ್ಲಿ ಈ ಕುರಿತು ಪೋಸ್ಟ್​ ಮಾಡಿದ್ದರು.

'ಕೊಳ್ಳಿ ಇಟ್ಟ ಕುಮಾರ ಮಹಾತ್ಮ ನೊಂದ ಪೊಲೀಸ್, ಶಿವನ ಸನ್ನಿಧಿಯಲ್ಲಿ ಕೊಟ್ಟ ಮಾತಿಗೆ ಬೆಲೆನೇ ಇಲ್ವಾ ನೊಂದ ಪೊಲೀಸ್. ಮೈತ್ರಿ ಸರ್ಕಾರದ ಪೊಲೀಸ್ ದ್ರೋಹಿ ನೀತಿ ವಿರುದ್ದ ಪೊಲೀಸ್ ಕುಟುಂಬಗಳು ಬೀದಿಗಿಳಿಯಲು ಸಕಾಲ ಇದಾಗಿದೆ. ಅದೇನೂ ನಾಲಗೆಯೋ ಗೊತ್ತಿಲ್ಲಾ. ಚಿಂತಿಸಬೇಡಿ ನೊಂದ ಪೊಲೀಸ್​, ಕುಮಾರಸ್ವಾಮಿ ನಂಬಿಕೆ ದ್ರೋಹವನ್ನ ಸಮಾನವಾಗಿ ಸ್ವೀಕರಿಸಿ' ಎಂದು ಫೇಸ್​ಬುಕ್​ನಲ್ಲಿ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ಪೋಸ್ಟ್​​ ಹಾಕಿದ್ರು. ಈ ಹಿನ್ನೆಲೆ ಶಶಿಧರ್​ ಅವರನ್ನ ಬಂಧಿಸಲಾಗಿತ್ತು.

Intro:Body:

1 bng shashidhar case.jpg   

close

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.