ETV Bharat / state

ಅಧಿಕಾರಿಗಳು ಬರೀ ದುಡ್ಡಿನ ದಂಧೆ ಮಾಡ್ತಾರೆ: ಮೇಯರ್​​ಗೆ ದೂರುಗಳ ಸುರಿಮಳೆ - ಸ್ಥಳಿಯರಿಂದ ಮೇಯರ್ಗೆ ದೂರು

ಮಲ್ಲೇಶ್ವರಂ ದತ್ತಾತ್ರೇಯ ದೇವಸ್ಥಾನ ರಾಜಕಾಲುವೆ ದುರಸ್ತಿ ಕಾರ್ಯ ಆರಂಭವಾಗಿ ಎರಡು ವರ್ಷ ಮುಗಿದ್ರೂ, ಕೋಟಿ ಕೋಟಿ ರೂಪಾಯಿ ಸುರಿದ್ರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಕೇವಲ ಎರಡು ಕಿಲೋ ಮೀಟರ್ ರಾಜಕಾಲುವೆಗೆ ಎರಡೂ ಬದಿ ಕಾಂಕ್ರೀಟ್ ನಿರ್ಮಾಣ ಹಾಗೂ ಹೂಳು ತೆಗೆಯಲು ಬರೋಬ್ಬರಿ ಹತ್ತು ಕೋಟಿ ರುಪಾಯಿ ವೆಚ್ಚ ಮಾಡಲಾಗ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮೇಯರ್​​ಗೆ ಸ್ಥಳೀಯರ ದೂರು
author img

By

Published : Jun 18, 2019, 11:16 PM IST

ಬೆಂಗಳೂರು : ರಾಜ್ಯದಲ್ಲಿ ಜನ ಮಳೆ ಇಲ್ಲವೆಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದರೆ, ಇತ್ತ ಮಲ್ಲೇಶ್ವರಂ ಬಳಿಯ ದತ್ತಾತ್ರೇಯ ದೇವಸ್ಥಾನ ವಾರ್ಡ್​​ನ ವೃಷಭಾವತಿ ವ್ಯಾಲಿ ರಾಜಕಾಲುವೆಯ ಅಕ್ಕಪಕ್ಕದ ನಿವಾಸಿಗಳು ಮಳೆಯಿಂದ ಭಯಭೀತರಾಗಿದ್ದಾರೆ.

ರಾಜಕಾಲುವೆ ದುರಸ್ತಿ ಕಾರ್ಯ ಆರಂಭವಾಗಿ ಎರಡು ವರ್ಷ ಮುಗಿದ್ರೂ, ಕೋಟಿ ಕೋಟಿ ರೂಪಾಯಿ ಸುರಿದ್ರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಕೇವಲ ಎರಡು ಕಿಲೋ ಮೀಟರ್ ರಾಜಕಾಲುವೆಗೆ ಎರಡೂ ಬದಿ ಕಾಂಕ್ರೀಟ್ ನಿರ್ಮಾಣ ಹಾಗೂ ಹೂಳು ತೆಗೆಯಲು ಬರೋಬ್ಬರಿ ಹತ್ತು ಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಅಧಿಕಾರಿಗಳು ಬರೀ ದುಡ್ಡಿನ ದಂಧೆ ಮಾಡ್ತಾರೆ : ಮೇಯರ್​​ಗೆ ಸ್ಥಳೀಯರ ದೂರು

ಕಾಮಗಾರಿಗೆ ಆರು ಕೋಟಿ ರೂಪಾಯಿ ಖರ್ಚು ಮಾಡಿದ್ರು ಕಾಮಗಾರಿ ನಡೆದಿದೆ ಎಂದು ಊಹಿಸಲೂ ಅಸಾಧ್ಯವಾಗಿದೆ. ತಂತಿಬೇಲಿಯೂ ಕಿತ್ತುಹೋಗಿದೆ. ತಡೆಗೋಡೆ ನಿರ್ಮಾಣವೂ ವ್ಯವಸ್ಥಿತವಾಗಿ ಆಗದೆ ರಸ್ತೆ ಹಾಗೂ ಗೋಡೆ ಮಧ್ಯೆ ಜಾಗ ಬಿಡಲಾಗಿದೆ. ಹೀಗೆ ಕಳಪೆಯಾಗಿ ಕಾಮಗಾರಿ ನಡೆಸಿದ್ರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳಕ್ಕಾಗಮಿಸಿದ್ದ ಮೇಯರ್​​ ಗಂಗಾಂಬಿಕೆ ಅವರಿಗೆ ದೂರು ನೀಡಿದರು.

ಸ್ಥಳೀಯರ ದೂರಿನ ಹಿನ್ನೆಲೆ ರಾಜಕಾಲುವೆ ಕಾಮಗಾರಿ ನೋಡಲು ಬಂದ ಮೇಯರ್ ಗಂಗಾಂಬಿಕೆ ಅವರ ಬಳಿ ಸ್ಥಳೀಯರು ಈ ವಿಷಯ ತಿಳಿಸಿದ್ರು. ಅಲ್ಲದೆ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ದುಡ್ಡು ಹೊಡೆಯೋ ದಂಧೆ ಮಾಡ್ತಿದ್ದಾರೆ, ಆದ್ರೆ ಕೆಲಸ ಮಾಡ್ತಿಲ್ಲ. ಎರಡು ಕಿಲೋಮೀಟರ್ ಉದ್ದದ ರಾಜಕಾಲುವೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ, ಹೂಳು ತೆಗೆಯುವುದಕ್ಕಾಗಿ ಹತ್ತು ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಲ್ಲಿ ಈಗಾಗಲೇ ಆರು ಕೋಟಿ ರೂ. ಬಿಲ್ ಪಾವತಿಯೂ ಆಗಿದೆ. ಆದ್ರೆ ಗುತ್ತಿಗೆದಾರ ಮಾತ್ರ ಕೆಲಸ ಮಾಡದೆ ನಾಪತ್ತೆಯಾಗಿದ್ದಾನೆ ಎಂದು ಆರೋಪಿದರು.

ಗುತ್ತಿಗೆದಾರನನ್ನ ಮೇಯರ್​ ಗಂಗಾಂಬಿಕೆ ಪ್ರಶ್ನಿಸಿದಾಗ, ಕೆಲಸ ಮಾಡ್ತೀವಿ, ಈ ತಿಂಗಳಲ್ಲಿ ಮುಗಿಸ್ತೀವಿ ಅಂತೆಲ್ಲಾ ತಡಬಡಾಯಿಸ್ಕೊಂಡು ಉತ್ತರ ಕೊಟ್ರು. ಆದ್ರೆ, ರಾಜಕಾಲುವೆ ಕೆಲಸದ ಕೌಶಲವೇ ಇಲ್ಲದ ವ್ಯಕ್ತಿಗೆ ಗುತ್ತಿಗೆ ನೀಡಲಾಗಿದೆ. ಕೇವಲ ದುಡ್ಡು ಹೊಡೆಯುವುದಕ್ಕಾಗಿ ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಅಧಿಕಾರಿಗಳೂ ಶಾಮೀಲಾಗಿರೋದರಿಂದ ಬರೀ ದುಡ್ಡಿನ ದಂಧೆ ನಡೆಯುತ್ತಿದೆ ಎಂದು ಸ್ಥಳೀಯರಾದ ರಂಗಸ್ವಾಮಿ ದೂರಿದರು.

Intro:ಗುತ್ತಿಗೆದಾರರು, ಅಧಿಕಾರಿಗಳು ಬರೀ ದುಡ್ಡಿನ ದಂಧೆ ಮಾಡ್ತಾರೆ- ಕಾಮಗಾರಿ ವೀಕ್ಷಿಸಲು ಬಂದ ಮೇಯರ್ ರನ್ನು ತರಾಟೆಗೆ ತಗೊಂಡ ಸ್ಥಳೀಯರು

ಬೆಂಗಳೂರು- ಮಲ್ಲೇಶ್ವರಂ ಬಳಿಯ ದತ್ತಾತ್ರೇಯ ದೇವಸ್ಥಾನ ವಾರ್ಡ್ ನ ವೃಷಭಾವತಿ ವ್ಯಾಲಿ ರಾಜಕಾಲುವೆಯ ಅಕ್ಕಪಕ್ಕದ ನಿವಾಸಿಗಳು ಮಳೆಗಾಲಕ್ಕೆ ಭಯಭೀತರಾಗಿದ್ದಾರೆ.
ರಾಜಕಾಲುವೆ ದುರಸ್ಥಿ ಕಾರ್ಯ ಆರಂಭವಾಗಿ ಎರಡು ವರ್ಷ ಮುಗಿದ್ರೂ, ಕೋಟಿ ಕೋಟಿ ರುಪಾಯಿ ಸುರಿದ್ರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಕೇವಲ ಎರಡು ಕಿಲೋ ಮೀಟರ್ ರಾಜಕಾಲುವೆಗೆ ಎರಡೂ ಬದಿ ಕಾಂಕ್ರೀಟ್ ನಿರ್ಮಾಣ ಹಾಗೂ ಹೂಳು ತೆಗೆಯಲು ಬರೋಬ್ಬರಿ ಹತ್ತು ಕೋಟಿ ರುಪಾಯಿ ವೆಚ್ಚ ಮಾಡಲಾಗ್ತಿದೆ. ಕಾಮಗಾರಿಗೆ ಈಗಾಗಲೇ ಆರು ಕೋಟಿ ರುಪಾಯಿ ಪಾವತಿಯಾಗಿದ್ರೂ ಕಾಮಗಾರಿ ನಡೆದಿದೆ ಎಂದು ಊಹಿಸಲೂ ಅಸಾಧ್ಯವಾಗಿದೆ. ತಂತಿಬೇಲಿಯೂ ಕಿತ್ತುಹೋಗಿದೆ. ತಡೆಗೋಡೆ ನಿರ್ಮಾಣವೂ ವ್ಯವಸ್ಥಿತವಾಗಿ ಆಗದೆ ರಸ್ತೆ ಹಾಗೂ ಗೋಡೆ ಮಧ್ಯ ಜಾಗ ಬಿಡಲಾಗಿದೆ. ಹೀಗೆ ಕಳಪೆಯಾಗಿ, ಅರ್ಧಂಬರ್ಧ ಕಾಮಗಾರಿ ನಡೆಸಿದ್ರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಸ್ಥಳೀಯರ ದೂರಿನ ಹಿನ್ನಲೆ ರಾಜಕಾಲುವೆ ಕಾಮಗಾರಿ ನೋಡಲು ಬಂದ ಮೇಯರ್ ಗಂಗಾಂಬಿಕೆ ಅವರ ಬಳಿ ಸ್ಥಳೀಯರು ದೂರಿನ ಸರಮಾಲೆ ಹೇಳಿದ್ರು.
ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ದುಡ್ಡು ಹೊಡೆಯೋ ದಂಧೆ ಮಾಡ್ತಿದ್ದಾರೆ, ಆದ್ರೆ ಕೆಲಸ ಮಾಡ್ತಿಲ್ಲ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ರು.
ಹೌದು ಎರಡು ಕಿಲೋಮೀಟರ್ ಉದ್ದದ ರಾಜಕಾಲುವೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ, ಹೂಳು ತೆಗೆಯುವುದಕ್ಕಾಗಿ ಹತ್ತು ಕೋಟಿ ರುಪಾಯಿ ಮೀಸಲಿಡಲಾಗಿದೆ. ಇದರಲ್ಲಿ ಈಗಾಗಲೇ ಆರು ಕೋಟಿ ರುಪಾಯಿ ಬಿಲ್ ಪಾವತಿಯೂ ಆಗಿದೆ. ಆದ್ರೆ ಗುತ್ತಿಗೆದಾರ ಮಾತ್ರ ಕೆಲಸ ಮಾಡದೆ ನಾಪತ್ತೆಯಾಗಿದ್ದಾನೆ. ಮೇಯರ್ ಗುತ್ತಿಗೆದಾರನನ್ನ ಪ್ರಶ್ನಿಸಿದಾಗ, ಕೆಲಸ ಮಾಡ್ತೀವಿ, ಈ ತಿಂಗಳಲ್ಲಿ ಮುಗಿಸ್ತೀವಿ ಅಂತೆಲ್ಲಾ ತಡಬಡಾಯಿಸ್ಕೊಂಡು ಉತ್ತರ ಕೊಟ್ರು.. ಆದ್ರೆ ಅಸಲಿಯಲ್ಲಿ ರಾಜಕಾಲುವೆ ಕೆಲಸದ ಕೌಶಲವೇ ಇಲ್ಲದ ವ್ಯಕ್ತಿಗೆ ಗುತ್ತಿಗೆ ನೀಡಲಾಗಿದೆ. ಕೇವಲ ದುಡ್ಡು ಹಪಡೆಯುವುದಕ್ಕಾಗಿ ಈ ಯೋಜನೆ ಕೈಗೆತ್ತಿಕೊಂಡಿದಾರೆ. ಅಧಿಕಾರಿಗಳೂ ಶಾಮೀಲಾಗಿರೋದ್ರಿಂದ ಬರೀ ದಂಧೆ ನಡೆಯುತ್ತಿದೆ ಎಂದು ಸ್ಥಳೀಯರಾದ ರಂಗಸ್ವಾಮಿ ಗಂಭೀರವಾಗಿ ಆರೋಪಿಸಿದ್ರು.
ಇನ್ನು ತಡೆಗೋಡೆ ನಿರ್ಮಾಣ ಮಾಡಿರೋದು ಕೂಡಾ ಕಳಪೆ ಕಾಮಗಾರಿಯಾಗಿದೆ. ಅಲ್ಲಲ್ಲಿ ಗೋಡೆ ಬೆಂಡಾದ ಸ್ಥಿತಿಯಲ್ಲಿದೆ. ಇನ್ನು ಮೂರಡಿ ಒಳಗೆ ಗೋಡೆ ನಿರ್ಮಿಸಿ, ಮತ್ತೆ ಉಳಿದ ಜಾಗ ತುಂಬಲು ಮತ್ತೊಂದು ಯೋಜನೆ ಮಾಡಿ ಕೊಳ್ಳೆ ಹೊಡೆಯಲಾಗ್ತದೆ ಎಂದು ಅವರು ಆರೋಪಿಸಿದರು.
ಗುತ್ತಿಗೆದಾರರನ್ನು ತಕ್ಷಣವೇ ಕಾಮಗಾರಿ ಮುಗಿಸುವಂತೆ ತಿಳಿಸಿ ಮೇಯರ್ ತರಾಟೆಗೆ ತೆಗೆದುಕೊಂಡ್ರು. ಬಳಿಕ ಮಾತ್ನಾಡಿದ ಅವರು, ಈ ಕಾಮಗಾರಿ ಈಗಾಗಲೇ ತಡವಾಗಿದೆ. ಐದು ತಿಂಗಳ ಹಿಂದೆಯೇ ಭೇಟಿ ನೀಡಿದಾಗ ಮುಗಿಸ್ತೇವೆ ಎಂದಿದ್ದರು. ಇನ್ನು ಎಂಟುನೂರ ಮೀಟರ್ ಬಾಕಿಯಿದ್ದು, ಈ ತಿಂಗಳ ಕೊನೆಯಲ್ಲಿ ಮುಗಿಸುತ್ತಾರೆ ಎಂದು ಭರವಸೆ ನೀಡಿದ್ದಾರೆ ಎಂದರು.
ಅಲ್ಲದೆ ಜಲಮಂಡಳಿಯಿಂದ ಪೈಪ್ ಲೈನ್ ಕೆಲಸ ಆಗ್ತಿದೆ. ತ್ವರಿತವಾಗಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ.
ಒಟ್ಟಿನಲ್ಲಿ ಸಣ್ಣ ಕೆಲಸಕ್ಕೆ ಕೋಟ್ಯಾಂತರ ರುಪಾಯಿ ವೆಚ್ಚ ಮಾಡುವ ಬಿಬಿಎಂಪಿ, ಕಾಮಗಾರಿಗಳ ಗುಣಮಟ್ಟ ಕಾಪಾಡುವಲ್ಲಿ ಮಾತ್ರ ವಿಫಲವಾಗಿದೆ. ಜನರ ತೆರಿಗೆ ಹಣವನ್ನ ಮನಬಂದಂತೆ ಪಾಲಿಕೆ ಅಧಿಕಾರಿಗಳು ಪೋಲು ಮಾಡ್ತಿದ್ದಾರೆ.

ಸೌಮ್ಯಶ್ರೀ
KN_BNG_01_18_mayor_visit_script_sowmya_7202707
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.