ಬೆಂಗಳೂರು: ಕುರುಬ ಸಮಾಜದ ಪಾದಯಾತ್ರೆ ಇದೀಗ ಶುರುವಾಗಿದೆ. ಕುರುಬ ಸಮಾಜವನ್ನು ಎಸ್.ಟಿ ಗೆ ಸೇರಿಸುವಂತೆ ಒತ್ತಾಯಿಸಿ ಬೆಂಗಳೂರು- ತುಮಕೂರು ಹೆದ್ದಾರಿಯಲ್ಲಿ ಪಾದಯಾತ್ರೆ ಆರಂಭಗೊಂಡಿದ್ದು, ಟ್ರಾಫಿಕ್ ಬಿಸಿ ತಟ್ಟಲಿರುವ ಸಾಧ್ಯತೆ ಇದೆ. ರಾಜಧಾನಿಯ ಪ್ರಯಾಣಿಕರು ಇಂದು ರಸ್ತೆಗಿಳಿಯುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ.
ನೆಲಮಂಗಲದ ಮಾದನಾಯಕನಹಳ್ಳಿಯಿಂದ ಫ್ರೀಡಂ ಪಾರ್ಕ್ವರೆಗೂ ನಡೆಯುವ ಪಾದಯಾತ್ರೆಯಲ್ಲಿ ಸಚಿವ ಈಶ್ವರಪ್ಪ ಹಾಗೂ ಕೆಲ ಕುರುಬ ಸಮಾಜದ ಶಾಸಕರು ಭಾಗಿಯಾಗುವ ಸಾಧ್ಯತೆ ಇದೆ. ಕಾಗಿನೆಲೆ ನಿರಂಜನಾನಂದಪುರಿ ಶ್ರೀ ನೇತೃತ್ವದಲ್ಲಿ ಪಾದಯಾತ್ರೆ ಶುರುವಾಗಿದ್ದು, 5 ಸಾವಿರಕ್ಕೂ ಹೆಚ್ಚು ಕುರುಬ ಸಮಾಜದ ಜನರು ಭಾಗಿಯಾಗಿದ್ದಾರೆ. ತುಮಕೂರು ರಸ್ತೆ, ಜಾಲಹಳ್ಳಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಮಾಜಿ ಸಚಿವ ಹೆಚ್.ಎಂ ರೇವಣ್ಣ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕುರುಬ ಸಮಾಜದ ಜನರು ಈಗಾಗಲೇ ಭಾಗಿಯಾಗಿದ್ದು, ರಸ್ತೆಯಲ್ಲಿ ಕಲಾ ತಂಡಗಳು ಸಹ ಸಾಗುತ್ತಿವೆ.