ETV Bharat / state

ನ್ಯಾಯಾಲಯಗಳ ಕಾರ್ಯನಿರ್ವಹಣೆ ವಿಚಾರ: ಸಲಹೆ ನೀಡಲು ವಕೀಲರಿಗೆ ಹೈಕೋರ್ಟ್ ಸೂಚನೆ​ - High Court heard

ರಾಜ್ಯದಲ್ಲಿ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳನ್ನು ನಡೆಸಲು ಹೈಕೋರ್ಟ್ ಈಗಾಗಲೇ ಹಲವು ಮಾರ್ಗಸೂಚಿಗಳನ್ನು ನೀಡಿದ್ದು, ಮತ್ತೇನಾದರೂ ಸಲಹೆಗಳಿದ್ದರೆ ಅವನ್ನು ತಿಳಿಸುವಂತೆ ಸೂಚಿಸಿದೆ.

The High Court instructed to inform the counsel
ಹೈಕೋರ್ಟ್
author img

By

Published : Jun 6, 2020, 10:34 PM IST

ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡದಂತೆ ರಾಜ್ಯದ ನ್ಯಾಯಾಲಯಗಳು ಹೇಗೆ ಕಾರ್ಯನಿವರ್ಹಿಸಹಬೇಕು ಎಂಬುದರ ಕುರಿತು ಈಗಾಗಲೇ ಎಸ್​ಒಪಿ ಮಾರ್ಗಸೂಚಿಗಳನ್ನು ನೀಡಿರುವ ಹೈಕೋರ್ಟ್ ಮತ್ತೇನಾದರೂ ಸಲಹೆಗಳಿದ್ದರೆ ಅವನ್ನು ತಿಳಿಸುವಂತೆ ವಕೀಲರಿಗೆ ಸೂಚಿಸಿದೆ.

ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ಸೂಚನೆ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ನೋಟಿಫಿಕೇಷನ್ ಹೊರಡಿಸಿದ್ಜಾರೆ. ರಾಜ್ಯದಲ್ಲಿ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳನ್ನು ನಡೆಸಲು ಹೈಕೋರ್ಟ್ ಈಗಾಗಲೇ ಹಲವು ಮಾರ್ಗಸೂಚಿಗಳನ್ನು ನೀಡಿದೆ. ಈ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್​​ಒಪಿ)ಗೆ ಯಾವುದಾದರೂ ಬದಲಾವಣೆ ತರುವ ಅಗತ್ಯವಿದೆ ಅನ್ನಿಸಿದಲ್ಲಿ ಅಂತಹ ಮಾಹಿತಿಯನ್ನು ನೀಡುವಂತೆ ವಕೀಲ ಸಮುದಾಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಎಸ್​ಒಪಿ ಮಾರ್ಗಸೂಚಿಗಳಿಗೆ ಬದಲಾವಣೆ ತರಬೇಕೆಂಬ ಮಾಹಿತಿಗಳಿದ್ದರೆ ಅವನ್ನು ಹೈಕೋರ್ಟ್​ನ ಇ-ಮೇಲ್ regadmin@hck.gov.in ಐಡಿಗೆ ಜೂ. 7ರ ಒಳಗೆ ಕಳುಹಿಸಿಕೊಡುವಂತೆ ತಿಳಿಸಲಾಗಿದೆ. ಹೈಕೋರ್ಟ್ ಮೇ 26ರಂದು ಕೊರೊನಾ ವೈರಸ್ ಸೋಂಕು ಹರಡದಂತೆ ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ಕೋರ್ಟ್​ಗಳು ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.