ETV Bharat / state

ಬ್ಯಾಂಕ್​ ಋಣಮುಕ್ತ ಪತ್ರ ಕೋರಿ ಮಲ್ಯ ಒಡೆತನದ ಕಂಪನಿ ಸಲ್ಲಿಸಿದ್ದ ಅರ್ಜಿ ವಜಾ

ಐಡಿಬಿಐ ಬ್ಯಾಂಕ್​ನಿಂದ ಋಣಮುಕ್ತ ಪತ್ರ ನೀಡಲು ಕೋರಿ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ (ಯುಎಸ್​ಎಲ್​) ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.

ಸಂಗ್ರಹ ಚಿತ್ರ
author img

By

Published : Jun 27, 2019, 10:45 PM IST

ಬೆಂಗಳೂರು : ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್‌ ಫಿಷರ್ ಏರ್‌ಲೈನ್ಸ್​ ಕಂಪನಿ 625 ಕೋಟಿ ಸಾಲವನ್ನು ತೀರಿಸಿದೆ. ಹೀಗಾಗಿ ಐಡಿಬಿಐ ಬ್ಯಾಂಕ್​ನಿಂದ ಋಣಮುಕ್ತ ಪತ್ರ ನೀಡಲು ಕೋರಿ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ (ಯುಎಸ್​ಎಲ್​) ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಐಡಿಬಿಐ ಬ್ಯಾಂಕ್​ ವಿರುದ್ಧ ಯುಎಸ್​ಎಲ್ ಕಂಪೆನಿ ಸಲ್ಲಿಸಿದ್ದ ಅರ್ಜಿಯ ಮೇಲಿನ ತೀರ್ಪು ನೀಡಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ತಿರಸ್ಕರಿಸಿದೆ.

ಅರ್ಜಿದಾರ ಪರವಾಗಿ ವಾದ ಮಾಡಿದ್ದ ಪ್ರಸಿದ್ಧ ಹಿರಿಯ ವಕೀಲ ಪಿ. ಚಿದಂಬರಂ ಅವರು ಮಲ್ಯ, ತಮ್ಮದೇ ಒಡೆತನದ ಕಿಂಗ್ ಫಿಷರ್ ಏರ್‌ಲೈನ್ಸ್ ಕಂಪೆನಿಗೆ ಐಡಿಬಿಐ ಬ್ಯಾಂಕ್​​ನಿಂದ ಸಾಲ ಪಡೆದಿದ್ದಾರೆ. ಐಡಿಬಿಐ ಬ್ಯಾಂಕ್​ನಿಂದ ಪಡೆದಿದ್ದ 650 ಕೋಟಿ ರೂ. ಸಾಲವನ್ನು ಯುಎಸ್‌ಎಲ್ 2013ರಲ್ಲೇ ಬಡ್ಡಿ ಸಹಿತ ಹಿಂದಿರುಗಿಸಿದೆ. ಆದರೂ ಕಿಂಗ್‌ ಫಿಷರ್ ಸಂಸ್ಥೆ ಪಡೆದಿರುವ ಸಾಲ ಮರುಪಾವತಿಸಿದರೆ ಮಾತ್ರ ಯುಎಸ್‌ಎಲ್ ಒದಗಿಸಿದ್ದ ಭದ್ರತಾ ಖಾತ್ರಿ ಹಿಂದಿರುಗಿಸಲಾಗುವುದು ಎಂದು ಐಡಿಬಿಐ ಹೇಳುತ್ತಿದೆ. ಈ ಕ್ರಮ ಸರಿಯಲ್ಲ, ತಕ್ಷಣ ‌ಐಡಿಬಿಐ ಬ್ಯಾಂಕ್‌ನಿಂದ ಋಣಮುಕ್ತ ಪತ್ರ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಕಂಪೆನಿಗೆ ನೀಡಬೇಕೆಂದು ಮನವಿ ಮಾಡಿದ್ದರು.

ಐಡಿಬಿಐ ಪರ ವಾದಿಸಿದ ವಕೀಲರು:

ಸಾಲ ನೀಡುವಾಗ ಮಲ್ಯ ಯುಎಸ್‌ಎಲ್ ಕಂಪೆನಿಯ ಅಧ್ಯಕ್ಷರಾಗಿದ್ದರು ಎಂಬ ಕಾರಣಕ್ಕಾಗಿಯೇ ಸಾಲ ನೀಡಲಾಗಿತ್ತು. ಈಗ ಅವರು ಆ ಸ್ಥಾನದಲ್ಲಿ ಇಲ್ಲ ಎಂದಾಕ್ಷಣ ಅಂದಿನ ಪ್ರಕರಣದಿಂದ ಬಚಾವಾಗಲು ಸಾಧ್ಯವಿಲ್ಲ. ಷೇರು ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ವ್ಯಾಲ್ಯೂ ನೋಡಿಯೇ ಸಾಲ ನೀಡಲಾಗಿತ್ತೆಂದು ಹೇಳಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ (ಯುಎಸ್‌ಎಲ್) ಅರ್ಜಿಯಲ್ಲಿ ಮಾಡಿರುವ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಈ ಕುರಿತು ಸಿವಿಲ್ ಕೊರ್ಟ್ ಅಥವಾ ಇತರೆ ನ್ಯಾಯಾಲಯದಲ್ಲಿ ಪರಿಹಾರ ಪಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯಿಸಿ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.

Intro:ಬ್ಯಾಂಕ್ ಋಣಮುಕ್ತ ಪತ್ರ ಕೋರಿ ಮಲ್ಯ ಒಡೆತನದ ಕಂಪನಿ ಸಲ್ಲಿಸಿದ್ದ ಅರ್ಜಿ ವಜಾ...

ಬೆಂಗಳೂರು :

ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಷರ್ ವಾಯುಯಾನ ಕಂಪನಿ 625 ಕೋಟಿ ಸಾಲವನ್ನು ತೀರಿಸಿದೆ. ಹೀಗಾಗಿ ಐಡಿಬಿಐ ಬ್ಯಾಂಕ್‌ನಿಂದ ಋಣಮುಕ್ತ ಪತ್ರ ನೀಡಲು ಕೋರಿ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್(ಯುಎಸ್‌ಎಲ್) ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಐಡಿಬಿಐ ಬ್ಯಾಂಕ್ ವಿರುದ್ಧ ಯುಎಸ್‌ಎಲ್ ಕಂಪೆನಿ ಸಲ್ಲಿಸಿದ್ದ ಅರ್ಜಿಯ ಮೇಲಿನ ತೀರ್ಪು ನೀಡಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ತಿರಸ್ಕರಿಸಿದೆ.

ಅರ್ಜಿದಾರ ಪರವಾಗಿ ವಾದ ಮಾಡಿದ್ದ ಪ್ರಸಿದ್ಧ ಹಿರಿಯ ವಕೀಲ ಪಿ. ಚಿದಂಬರಂ ಅವರು ಮಲ್ಯ ತಮ್ಮದೇ ಒಡೆತನದ ಕಿಂಗ್ ಫಿಷರ್ ಏರ್ ಲೈನ್ಸ್ ಕಂಪೆನಿಗೆ ಐಡಿಬಿಐ ಬ್ಯಾಂಕ್ ನಿಂದ ಸಾಲ ಪಡೆದಿದ್ದಾರೆ. ಐಡಿಬಿಐ ಬ್ಯಾಂಕ್‌ನಿಂದ ಪಡೆದಿದ್ದ ೬೫೦ ಕೋಟಿ ರು. ಸಾಲವನ್ನು ಯುಎಸ್‌ಎಲ್ ೨೦೧೩ರಲ್ಲೇ ಬಡ್ಡಿ ಸಹಿತ ಹಿಂದಿರುಗಿಸಿದೆ. ಆದರೂ ಕಿಂಗ್‌ಫಿಷರ್ ಸಂಸ್ಥೆ ಪಡೆದಿರುವ ಸಾಲ ಮರುಪಾವತಿಸಿದರೆ ಮಾತ್ರ ಯುಎಸ್‌ಎಲ್ ಒದಗಿಸಿದ್ದ ಭದ್ರತಾ ಖಾತ್ರಿ ಹಿಂದಿರುಗಿಸಲಾಗುವುದು ಎಂದು ಐಡಿಬಿಐ ಹೇಳುತ್ತಿದೆ.ಈ ಕ್ರಮ ಸರಿಯಲ್ಲ ತಕ್ಷಣ ‌ಐಡಿಬಿಐ ಬ್ಯಾಂಕ್‌ನಿಂದ ಋಣಮುಕ್ತ ಪತ್ರ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಕಂಪೆನಿಗೆ ನೀಡಬೇಕೆಂದು ಮನವಿ ಮಾಡಿದ್ದರು.

ಐಡಿಬಿಐ ಪರ ವಾದಿಸಿದ ವಕೀಲರು
ಸಾಲ ನೀಡುವಾಗ ಮಲ್ಯ ಯುಎಸ್‌ಎಲ್ ಕಂಪೆನಿಯ ಅಧ್ಯಕ್ಷರಾಗಿದ್ದರು ಎಂಬ ಕಾರಣಕ್ಕಾಗಿಯೇ ಸಾಲ ನೀಡಲಾಗಿತ್ತು. ಈಗ ಅವರು ಆ ಸ್ಥಾನದಲ್ಲಿ ಇಲ್ಲ ಎಂದಾಕ್ಷಣ ಅಂದಿನ ಪ್ರಕರಣದಿಂದ ಬಚಾವಾಗಲು ಸಾಧ್ಯವಿಲ್ಲ. ಷೇರು ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ವ್ಯಾಲ್ಯೂ ನೋಡಿಯೇ ಸಾಲ ನೀಡಲಾಗಿತ್ತೆಂದು ಹೇಳಿದ್ದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ (ಯುಎಸ್‌ಎಲ್)ಅರ್ಜಿಯಲ್ಲಿ ಮಾಡಿರುವ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಈ ಕುರಿತು ಸಿವಿಲ್ ಕೊರ್ಟ್ ಅಥವಾ ಇತರೆ ನ್ಯಾಯಾಲಯದಲ್ಲಿ ಪರಿಹಾರ ಪಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯಿಸಿ. ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.Body:KN_BNG_07_27_MALLYA_BHAVYA_7204498Conclusion:KN_BNG_07_27_MALLYA_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.