ಬೆಂಗಳೂರು: ರಾಜ್ಯಪಾಲರ ಮೂಲಕ ಸರ್ಕಾರ ಭಾಷಣ ಮಾಡಿಸಿದೆ. ಸರ್ಕಾರ ಬರೆದುಕೊಟ್ಟದ್ದನ್ನೇ ಅವರು ಓದುತ್ತಾರೆ. ಭಾಷಣದಲ್ಲಿ ಸ್ಪಷ್ಟತೆ ಇರಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ನಿಲುವು, ಧ್ಯೇಯ, ಧೋರಣೆ ಬಗ್ಗೆ ಸ್ಪಷ್ಟತೆ ಇರಬೇಕು. ಸರ್ಕಾರಕ್ಕೆ ಮುಂದಿನ ಮುನ್ನೋಟ ಇರಬೇಕು. ಈ ಭಾಷಣ ನೋಡಿದಾಗ ಇದ್ಯಾವುದೂ ಕಾಣಿಸಲಿಲ್ಲ. ಇವರದ್ದು ಸುಳ್ಳಿನ ಕಂತೆ. ರಾಜ್ಯಪಾಲರ ಬಾಯಿಂದ ಸುಳ್ಳು ಹೇಳಿಸಿದ್ದಾರೆ. ನಮ್ಮ ಸರ್ಕಾರದ ಸಾಧನೆಯನ್ನೇ ವಿವರಿಸಿದ್ದಾರೆ. ಇವರ ಸರ್ಕಾರದ ಯಾವ ಸಾಧನೆಯೂ ಇಲ್ಲ. ಗೊತ್ತು ಗುರಿ, ದೂರದೃಷ್ಟಿಯಿಲ್ಲದ ಭಾಷಣ ಎಂದು ದೂರಿದರು.
ಹಣಕಾಸು ಪರಿಸ್ಥಿತಿ ಬಗ್ಗೆ ಪ್ರಸ್ತಾಪವಿಲ್ಲ. ರಾಜ್ಯ 10 ವರ್ಷ ಹಿಂದಕ್ಕೆ ಹೋಗಿದೆ. ಎಲ್ಲದಕ್ಕೂ ಕೊರೊನಾ ನೆಪ ಹೇಳ್ತಿದ್ದಾರೆ. ಶಾಸಕರ ಅನುದಾನಕ್ಕೂ ಕೊರೊನಾ, ಅನುದಾನ ಬಿಡುಗಡೆ ಮಾಡದಿರುವುದಕ್ಕೂ ಕೊರೊನಾ, ನೀರಾವರಿ ಯೋಜನೆ ಪ್ರಸ್ತಾಪವಿಲ್ಲ, ಅಧಿಕಾರಕ್ಕೆ ಬಂದು 1 ವರ್ಷ 7 ತಿಂಗಳಾಯ್ತು. ಈ ಅವಧಿಯಲ್ಲಿ ಇವರ ಕಾರ್ಯಕ್ರಮವೇನು? ಮುಂದಿನ ದೂರದೃಷ್ಟಿಯೇನು? ಈ ಸರ್ಕಾರದ ಸಾಧನೆಯೇ ಶೂನ್ಯ. ರಾಜ್ಯದ ಪ್ರಗತಿಯ ದೂರದೃಷ್ಟಿಯಿಲ್ಲದ ಭಾಷಣ. ಇಂತಹ ಕಳಪೆ ಭಾಷಣವನ್ನು ನಾನು ನೋಡಿಯೇ ಇಲ್ಲ ಎಂದರು.
ಸದನದೊಳಗೆ ಬಿತ್ತಿಪತ್ರ ಪ್ರದರ್ಶನ ವಿಚಾರದ ಬಗ್ಗೆ ಮಾತನಾಡಿ, ಕತ್ತಿ ಪ್ರತ್ಯೇಕ ಉತ್ತರ ಕರ್ನಾಟಕ ಕೇಳ್ತಿದ್ರು. ಈಗ ಬೆಳಗಾವಿಯಲ್ಲಿ ಅಧಿವೇಶನ ನಡೆಸ್ತಾನೇ ಇಲ್ಲ. ಸಂಪೂರ್ಣವಾಗಿ ಅದನ್ನು ಮರೆತೇ ಬಿಟ್ಟಿದ್ದಾರೆ. ಕೋಟಿ ಕೋಟಿ ಖರ್ಚು ಮಾಡಿ ಸುವರ್ಣಸೌಧ ಕಟ್ಟಿದ್ದೇಕೆ? ಉತ್ತರ ಕರ್ನಾಟಕಕ್ಕೆ ಹೇಗೆ ಮುಖ ತೋರಿಸ್ತಾರೆ. ನಾವು ಐದು ವರ್ಷವೂ ಅಲ್ಲಿ ಸದನ ಮಾಡಿದ್ದೇವೆ. ಇವರು ಎರಡು ವರ್ಷವಾದ್ರೂ ಬೆಳಗಾವಿಯಲ್ಲಿ ಮಾಡಿಲ್ಲ. ಸುವರ್ಣ ಸೌಧ ಕಟ್ಟಿಸಿದ್ದು ಯಾವ ಉದ್ದೇಶಕ್ಕೆ? ಉತ್ತರ ಕರ್ನಾಟಕಕ್ಕೆ ಆಡಳಿತ ಅಂದ್ರು. ಕಚೇರಿ ಅಲ್ಲಿಗೆ ಕೊಂಡೊಯ್ತೇವೆ ಅಂದ್ರು. ಯಾವ ಇಲಾಖೆಯನ್ನೂ ಅವರು ಶಿಫ್ಟ್ ಮಾಡಲಿಲ್ಲ. ನಾನು ಇಲಾಖೆ ಶಿಫ್ಟ್ಗೆ ಅದೇಶ ಮಾಡಿದ್ದೆ. ಸಂಪೂರ್ಣ ಉತ್ತರ ಕರ್ನಾಟಕವನ್ನೇ ಮರೆತಿದ್ದಾರೆ. ಅದಕ್ಕೆ ಇಂದು ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ ಎಂದು ಹೇಳಿದರು.
ಓದಿ: ಆಕಸ್ಮಿಕ ಬೆಂಕಿ ಅವಘಡ: 50ಕ್ಕೂ ಹೆಚ್ಚು ಬೌನ್ಸ್ ಸ್ಕೂಟರ್ಗಳು ಭಸ್ಮ
ವರ್ಷಕ್ಕೊಮ್ಮೆ ಅಲ್ಲಿ ಸದನ ನಡೆಸಲೇಬೇಕು. ಚಳಿಗಾಲ, ಜಂಟಿ, ಬಜೆಟ್ ಅಧಿವೇಶನ ಯಾವುದಾದರು ಒಂದು ಮಾಡಬೇಕು. ಉತ್ತರ ಕರ್ನಾಟಕದ ಬಗ್ಗೆ ಮಾತನಾಡೋಕೆ ನೈತಿಕತೆಯಿಲ್ಲ ಎಂದರು.
ಉಪಸಭಾಪತಿ ಕ್ಯಾಂಡಿಡೇಟ್ ಹಾಕುವ ವಿಚಾರ ಮಾತನಾಡಿ, ಸಂಖ್ಯಾಬಲ ಅಂದರೆ ಆತ್ಮಸಾಕ್ಷಿ ಮತಗಳು. ನಮಗೆ ಗೆಲ್ಲುವ ವಿಶ್ವಾಸವಿದೆ. ಜೆಡಿಎಸ್ನವರು ಸೆಕ್ಯುಲರ್ ಪಾರ್ಟಿ ಅಂತಾರೆ. ಎಲ್ಲಾ ಕಡೆ ಜಾತ್ಯಾತೀತ ಅಂತ ತಮಟೆ ಹೊಡೆಯುತ್ತಾರೆ. ಈಗ ಅವರು ಮಾಡಿದ್ದೇನು?. ಈಗ ಯಾರು ಎಲ್ಲಿ ನಿಲ್ತಾರೆ ಗೊತ್ತಾಗಬೇಕಲ್ಲ. ಎಲ್ಲರ ಬಣ್ಣ ಬಯಲಾಗಬೇಕಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು. ವಿಶ್ವನಾಥ್ ಬಗ್ಗೆ ಸುಪ್ರೀಂ ತೀರ್ಪು ವಿಚಾರ ಮಾತನಾಡಿ, ಕಾನೂನನ್ನು ಎತ್ತಿಹಿಡಿದಿದ್ದಾರೆ. ಸಂವಿಧಾನದ ವಿಧಿ ವಿಧಾನ ಎತ್ತಿಹಿಡಿದಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ ಎಂದರು.
ಮರೆತು ಬಿಟ್ಟಿದ್ದಾರೆ: ಎರಡು ಬಾರಿ ಕನಿಷ್ಠ ಬೆಳಗಾವಿಯಲ್ಲಿ ಅಧಿವೇಶನ ಆಗಬೇಕಿತ್ತು. ಉಮೇಶ್ ಕತ್ತಿ ಬಹಳ ಹೋರಾಟ ಮಾಡ್ತಾರೆ. ಬೆಳಗಾವಿಯಲ್ಲಿ ಅಧಿವೇಶನ ಮಾಡುವುದಕ್ಕೆ ಮರೆತೇಬಿಟ್ಟಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ಬಹಳ ಮಾತಾಡುತ್ತಾರೆ. ನನ್ನ ಪ್ರಕಾರ ಜಂಟಿ ಅಧಿವೇಶನ ಬೆಳಗಾವಿಯಲ್ಲಿ ಮಾಡಬೇಕಿತ್ತು. ಎರಡು ವರ್ಷ ಆಯ್ತು ಅಧಿವೇಶನ ಮಾಡಲಿಲ್ಲ. ನಾವು 5 ವರ್ಷ ಸಂಪೂರ್ಣ ಮಾಡಿದ್ವಿ. ಸುವರ್ಣ ಸೌಧ ಏನಕ್ಕೆ ಕಟ್ಟಿದ್ದು? ಆಡಳಿತ ಕಚೇರಿ ಅಲ್ಲಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ರು. ಅವರು ಹೇಳಿದ ಹಾಗೆ ಯಾವ ಇಲಾಖೆ ಶಿಫ್ಟ್ ಮಾಡಲಿಲ್ಲ. ಇದು ಉತ್ತರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ. ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ರಾಜ್ಯಪಾಲರ ಭಾಷಣದ ವೇಳೆ ಮಾಡಿದ್ವಿ. ವರ್ಷಕ್ಕೆ ಒಂದು ಬಾರಿಯಾದ್ರು ಮಾಡಬೇಕು ಎಂದು ಹೇಳಿದರು.