ETV Bharat / state

ಕೋವಿಡ್ ವೈಫಲ್ಯ: ಬಿಜೆಪಿಯ 11 ಸುಳ್ಳು ಸಮರ್ಥನೆ ಎಂದು ಲೇವಡಿ ಮಾಡಿದ ಕಾಂಗ್ರೆಸ್

author img

By

Published : May 24, 2021, 7:20 PM IST

ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷ, ಕೋವಿಡ್ ನಿರ್ವಹಣೆಯಲ್ಲಿ ಅತ್ಯಂತ ಬೇಜವಾಬ್ದಾರಿಯಾಗಿ ನಡೆದುಕೊಂಡಿರುವ ಮೋದಿ ಸರ್ಕಾರ, ವಿಶ್ವ ಆರೋಗ್ಯ ಸಂಸ್ಥೆಯಿಂದ ಮೊದಲುಗೊಂಡು ಜಗತ್ತಿನ ಎಲ್ಲ ಸರ್ಕಾರಗಳು ಹಾಗೂ ಪತ್ರಿಕೆಗಳಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಆದರೇನಂತೆ..? ಟೀಕೆಯನ್ನು ಮತ್ತು ವಿಮರ್ಶೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ದೇಶದ್ರೋಹಿಗಳು ಮೋದಿ ಸರ್ಕಾರದ ವಿರುದ್ಧ ಮಾಡುವ ಅಪಪ್ರಚಾರ ಮಾತ್ರ ಎಂದು ಭಾವಿಸುವ ಬಿಜೆಪಿ ಸರ್ಕಾರ ತನ್ನ ತಪ್ಪುಗಳ ಬಗ್ಗೆ ಯಾವುದೇ ಆತ್ಮಾವಲೋಕನ ಮಾಡಿಕೊಳ್ಳದೇ ಇಂದು ಭಾರತವನ್ನು ಮೂರನೇ ಅಲೆಯ ಅಪಾಯಕ್ಕೆ ದೂಡುತ್ತಿದೆ ಎಂದು ದೂರಿದೆ.

 BJP's 11 false assertion
BJP's 11 false assertion

ಬೆಂಗಳೂರು: ಕೋವಿಡ್ ನಿಯಂತ್ರಣವನ್ನು ಸಮರ್ಥವಾಗಿ ನಿಭಾಯಿಸುತ್ತಿದೆಯೇ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ನಾಡನ್ನು ಮೂರನೇ ಅಲೆಗೆ ನೂಕುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಲೇವಡಿ ಮಾಡಿದೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷ, ಕೋವಿಡ್ ನಿರ್ವಹಣೆಯಲ್ಲಿ ಅತ್ಯಂತ ಬೇಜವಾಬ್ದಾರಿಯಾಗಿ ನಡೆದುಕೊಂಡಿರುವ ಮೋದಿ ಸರ್ಕಾರ, ವಿಶ್ವ ಆರೋಗ್ಯ ಸಂಸ್ಥೆಯಿಂದ ಮೊದಲುಗೊಂಡು ಜಗತ್ತಿನ ಎಲ್ಲ ಸರ್ಕಾರಗಳು ಹಾಗೂ ಪತ್ರಿಕೆಗಳಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಆದರೇನಂತೆ..? ಟೀಕೆಯನ್ನು ಮತ್ತು ವಿಮರ್ಶೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ದೇಶದ್ರೋಹಿಗಳು ಮೋದಿ ಸರ್ಕಾರದ ವಿರುದ್ಧ ಮಾಡುವ ಅಪಪ್ರಚಾರ ಮಾತ್ರ ಎಂದು ಭಾವಿಸುವ ಬಿಜೆಪಿ ಸರ್ಕಾರ ತನ್ನ ತಪ್ಪುಗಳ ಬಗ್ಗೆ ಯಾವುದೇ ಆತ್ಮಾವಲೋಕನ ಮಾಡಿಕೊಳ್ಳದೇ ಇಂದು ಭಾರತವನ್ನು ಮೂರನೇ ಅಲೆಯ ಅಪಾಯಕ್ಕೆ ದೂಡುತ್ತಿದೆ ಎಂದು ದೂರಿದೆ.

ಇದು ಆಳುವ ಪಕ್ಷವಾದ ಬಿಜೆಪಿಯು ಸಾಂಕ್ರಾಮಿಕದ ಸವಾಲನ್ನು ಹಾಗೂ ತನ್ನ ನಿರ್ವಹಣೆಯನ್ನು ಹಾಗೂ ಬರಲಿರುವ ಅಪಾಯಗಳನ್ನು ಎದುರಿಸಲು ಯಾವ ಬಗೆಯ ಧೋರಣೆ ಹೊಂದಿದೆ ಎಂದು ಸ್ಪಷ್ಟ ಪಡಿಸುವುದರಿಂದ ಆ 11 ಸಮರ್ಥನೆಗಳನ್ನು ಹಾಗೂ ಅದರ ಸತ್ಯಾಸತ್ಯತೆ ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದೆ.

ಕಾಂಗ್ರೆಸ್ ಪಕ್ಷದ ವಿಶ್ಲೇಷಣೆ :

  • ಸಮರ್ಥನೆ-1
    ಮೋದಿ ಸರ್ಕಾರಕ್ಕೆ ಎರಡನೇ ಅಲೆಯ ಬಗ್ಗೆ ಮಾಹಿತಿ ಮತ್ತು ತಯಾರಿ ಇರಲಿಲ್ಲ ಎಂಬುದು ಸುಳ್ಳು. ಮಾರ್ಚ್ 17ರಂದೇ ಪ್ರಧಾನಿಗಳು ಮುಖ್ಯಮಂತ್ರಿಗಳ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು.

ವಾಸ್ತವ: ಮಾರ್ಚ್ 17ರಂದು ಸಭೆ ಕರೆದಿದ್ದು ನಿಜ. ಆದರೆ ಕೇಳಬೇಕಿರುವ ಪ್ರಶ್ನೆ, ವಿಶ್ವ ಆರೋಗ್ಯ ಸಂಸ್ಥೆ 2020ರ ಅಕ್ಟೋಬರ್ ನಲ್ಲೇ ಭಾರತದಲ್ಲಿ 1.617 ಕೊರೊನಾ ಮ್ಯುಟೆಂಟ್ ವೈರಸ್​ ಪತ್ತೆಯಾಗಿರುವುದನ್ನು ಗಮನಕ್ಕೆ ತಂದಿದ್ದರೂ ಮಾರ್ಚ್ ಕೊನೆಯ ತನಕ ಸುಮ್ಮನಿದ್ದಿದ್ದೇಕೆ? ಮತ್ತು ಮಾರ್ಚ್ ನಂತರವಾದರೂ ಕೇಂದ್ರ ಸರ್ಕಾರ ಎಷ್ಟು ಗಂಭೀರವಾಗಿತ್ತು? ಏನು ಕ್ರಮಗಳನ್ನು ತೆಗೆದುಕೊಂಡಿತು?

  • ಸಮರ್ಥನೆ 2
    ಭಾರತದ ಜನಸಂಖ್ಯೆ ಜಾಸ್ತಿ ಇರುವುದರಿಂದ ಕೋವಿಡ್ ಸೋಂಕಿತರ ಸಂಖ್ಯೆಯು ಜಾಸ್ತಿ ಇರುತ್ತೆ. ಆದರೆ, ಪ್ರತಿ ಹತ್ತು ಲಕ್ಷ ಜನರಿಗೆ ಸೋಂಕಿತರ ಮತ್ತು ಸಾವಿನ ಸಂಖ್ಯೆಯಲ್ಲಿ ಭಾರತ ಉತ್ತಮ ಸ್ಥಾನದಲ್ಲಿದೆ.

ವಾಸ್ತವ:
ಭಾರತಕ್ಕಿಂತ ಚೀನಾದ ಜನಸಂಖ್ಯೆ ಜಾಸ್ತಿ. ಆದರೆ, ಮೊದಲನೇ ಅಲೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಚೀನಾ ಈಗ ಎರಡನೇ ಅಲೆಯಲ್ಲಿ ಬಾಧಿತರ ಪಟ್ಟಿಯಲ್ಲಿ 97 ಸ್ಥಾನದಲ್ಲಿದೆ. ಆದರೆ ಭಾರತ ಎರಡನೇ ಅಲೆಯಲ್ಲಿ ಅನುದಿನದ ಸೋಂಕಿತರ ಹಾಗೂ ಮರಣದ ಸಂಖ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿದೆ.

  • ಸಮರ್ಥನೆ 3
    ಎರಡನೇ ಅಲೆಯಲ್ಲಿ ಕೋವಿಡ್ ಹೆಚ್ಚಿರುವುದು ಪಂಜಾಬ್, ಕೇರಳ, ಮಹಾರಾಷ್ಟ್ರದಲ್ಲಿ. ಅಲ್ಲಿ ಕುಂಭವು ಇರಲಿಲ್ಲ. ಚುನಾವಣೆಯೂ ಇರಲಿಲ್ಲ.

ವಾಸ್ತವ:
ಮೊನ್ನೆ ಪ್ರಧಾನಿಯವರೇ ಹೇಳಿರುವಂತೆ ಎರಡನೇ ಅಲೆಯು ಗ್ರಾಮೀಣ ಪ್ರದೇಶದಲ್ಲಿ, (ಅದರಲ್ಲೂ ಉತ್ತರ ಭಾರತದ ಗ್ರಾಮೀಣ ಪ್ರದೇಶದಲ್ಲಿ) ವಿಶೇಷವಾಗಿ ಹೆಚ್ಚುತ್ತಿದೆ. ಕುಂಭಮೇಳ ನಡೆದ ಉತ್ತರಖಂಡದಲ್ಲಿ ಮಾರ್ಚ್‌ಗೆ ಮುಂಚೆ ಕೇವಲ 95,000 ಪ್ರಕರಣಗಳು ದಾಖಲಾಗಿದ್ದರೂ, ಮೇ ಮೊದಲ ವಾರದಲ್ಲಿ ಅದು ಮೂರು ಲಕ್ಷವನ್ನು ಮುಟ್ಟಿದೆ. ಚುನಾವಣೆ ನಡೆದ ಎಲ್ಲಾ ರಾಜ್ಯಗಳಲ್ಲೂ ಕೋವಿಡ್ ಸೋಂಕಿತರ ಪ್ರಮಾಣ ಎರಡರಿಂದ ಮೂರುಪಟ್ಟು ಹೆಚ್ಚಾಗಿದೆ. ಮೊನ್ನೆ ಕುಂಭ ಮೇಳದಿಂದ ಬೆಂಗಳೂರಿಗೆ ಹಿಂತಿರುಗಿದ 67 ವಯಸ್ಸಿನ ಮಹಿಳೆಯಿಂದ 33 ಜನರಿಗೆ ಕೋವಿಡ್ ಸೋಂಕು ಹರಡಿದೆ ಎಂದು ಎಲ್ಲ ಪತ್ರಿಕೆಗಳು ವರದಿ ಮಾಡಿದವು. ಕುಂಭಮೇಳಕ್ಕೆ ಪಂಜಾಬ್, ಹರ್ಯಾಣ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಉತ್ತರ ಪ್ರದೇಶ ರಾಜ್ಯಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳಿಂದ ಒಟ್ಟು 90 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಕುಂಭದಲ್ಲಿ ಭಾಗವಹಿಸಿದ ಒಬ್ಬ ಮಹಿಳೆಯಿಂದ ದೂರದ ಬೆಂಗಳೂರಿನಲ್ಲಿ 33 ಜನರಿಗೆ ಕೋವಿಡ್ ಸೋಂಕು ತಗುಲಿದರೆ ಒಟ್ಟಾರೆ ಚುನಾವಣೆ ಹಾಗೂ ಕುಂಭಮೇಳದ ಪರಿಣಾಮಗಳು ಏನಾಗಿರಬಹುದು? ಇದೇ ತಬ್ಲಿಘಿಗಳಿಂದ ನಡೆದಿದ್ದರೆ ಬಿಜೆಪಿ ಪಕ್ಷ ಮತ್ತು ಸರ್ಕಾರ ಇಷ್ಟೇ ಉದಾರವಾಗಿರುತ್ತಿತ್ತೇ?

  • ಸಮರ್ಥನೆ 4:
    ಕೊರೊನಾ ವ್ಯಾಕ್ಸಿನ್ ರಫ್ತಾಗುವುದು ಕೇವಲ ಮೂರನೇ ಒಂದು ಭಾಗ. ಉಳಿದದ್ದನ್ನು ಭಾರತೀಯರಿಗೇ ಕೊಡಲಾಗಿದೆ.

ವಾಸ್ತವ:
ಭಾರತ ಸರ್ಕಾರದ ಈ ಅಧಿಕೃತ ಟ್ವೀಟಿನಲ್ಲಿರುವ ವಿಡಿಯೋವರ ಗಮನಿಸಿ. https://twitter.com/IndiaUNNewYork/status/1375562896642605059 ಇದು 2021ರ ಮಾರ್ಚ್ 27ರಂದು ವಿಶ್ವ ಸಂಸ್ಥೆಯಲ್ಲಿ ಭಾರತ ಸರ್ಕಾರದ ಪ್ರತಿನಿಧಿ ನಾಗರಾಜ್ ನಾಯ್ಡು ಅವರು ಮಾಡಿರುವ ಭಾಷಣ. ಅದರಲ್ಲಿ ಅವರು ಭಾರತವು ಮಾರ್ಚ್ 27 ರ ವೇಳೆಗೆ ತನ್ನ ಜನರಿಗೆ ಕೊಟ್ಟ ವ್ಯಾಕ್ಸಿನ್ ಗಿಂತಲೂ ಹೆಚ್ಚಿನ ವ್ಯಾಕ್ಸಿನ್ ಅನ್ನು ಜಗತ್ತಿನ 70 ದೇಶಗಳಿಗೆ ರಫ್ತು ಮಾಡಿದೆ ಎಂದು ಸ್ಪಷ್ಟವಾಗಿ ಹಾಗೂ ಅಧಿಕೃತವಾಗಿ ಹೇಳಿದೆ.

  • ಸಮರ್ಥನೆ 5:
    ಬಡವರಿಗೆ ವ್ಯಾಕ್ಸಿನ್ ಉಚಿತವಾಗಿ ಕೊಡುವುದಿಲ್ಲ ಅನ್ನೋದು ಸುಳ್ಳು . ಕೇಂದ್ರ ಶೇ. 50 ಕೊಡುತ್ತೆ. ಬಿಜೆಪಿ ಆಳ್ವಿಕೆಯಲ್ಲಿರುವ ರಾಜ್ಜಗಳು ಉಚಿತವಾಗಿ ಕೊಡುತ್ತವೆ.

ವಾಸ್ತವ:
ಭಾರತದಲ್ಲಿ ವ್ಯಾಕ್ಸಿನೀಕರಣ ಪ್ರಾರಂಭಿಸುವಾಗಲೇ ಮೋದಿ ಸರ್ಕಾರದ ಟಾಸ್ಕ್ ಫೋರ್ಸ್ ಅಧ್ಯಕ್ಷ ಡಾ. ವಿ.ಕೆ. ಪಾಲ್ ಅವರು ಸರ್ಕಾರ 30 ಕೋಟಿ ಜನರಿಗೆ ಮಾತ್ರ ಉಚಿತವಾಗಿ ವ್ಯಾಕ್ಸಿನ್ ಕೊಡಲಿದೆಯೇ ಹೊರತು ಎಲ್ಲಾ ಜನರಿಗೂ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

  • ಸಮರ್ಥನೆ 6
    ವ್ಯಾಕ್ಸಿನ್ ದರ ಕೇಂದ್ರಕ್ಕೊಂದು- ರಾಜ್ಯಕ್ಕೊಂದು ಆಗಲು ಕಾರಣ ದರ ನಿಗದಿ ಮಾಡುವುದು ಖಾಸಗಿ ಕಂಪನಿಗಳು. ಕೇಂದ್ರ ಸರ್ಕಾರವಲ್ಲ.

ವಾಸ್ತವ
ಏಪ್ರಿಲ್ 2021 ಕ್ಕೆ ಮುಂಚೆ ವ್ಯಾಕ್ಸಿನ್ ಕಂಪನಿಗಳು ಎರಡು ದರಗಳನ್ನು ವಿಧಿಸುವ ಅವಕಾಶವಿರಲಿಲ್ಲ. ಆದರೆ, ಏಪ್ರಿಲ್ 19ರಂದು ಮೋದಿ ಸರ್ಕಾರವು ಕಂಪನಿಗಳ ಲಾಭವನ್ನು ಹೆಚ್ಚಿಸುವ ಸಲುವಾಗಿ ಹೊಸ ವ್ಯಾಕ್ಸಿನ್ ನೀತಿ ಘೋಷಿಸಿತು.

  • ಸಮರ್ಥನೆ 7:
    ಸರ್ಕಾರ ಅಸಮರ್ಥ ಎನ್ನುವ ಕೆಲವು ಮಾಧ್ಯಮಗಳೇ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸುವ ದಂಧೆ ನಡೆಸುವಲ್ಲಿ ಸರ್ಕಾರ ಸಮರ್ಥವಾಗಿದೆ ಎನ್ನುವುದು ಹಾಸ್ಯಾಸ್ಪದ

ವಾಸ್ತವ:
ಕೋವಿಡ್ ಕಾರಣಗಳಿಂದಾಗಿ ಸತ್ತವರ ಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸುತ್ತಿರುವುದು ವಿಶೇಷವಾಗಿ ಬಿಜೆಪಿ ಆಳ್ವಿಕೆಯಲ್ಲಿರುವ ರಾಜ್ಯಗಳೇ ಆಗಿವೆ. ಕಳೆದ ಕೆಲವು ವಾರಗಳಲ್ಲಿ ಗುಜರಾತ್, ಉತ್ತರ ಪ್ರದೇಶ, ಗಳಲ್ಲಿ ಕೋವಿಡ್ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಸಿದ ಹೆಣಗಳ ಸಂಕ್ಯೆ ಹಾಗೂ ಅಧಿಕೃತವಾಗಿ ಆಯಾ ಬಿಜೆಪಿ ಸರ್ಕಾರಗಳು ಪ್ರಕಟಿಸಿರುವ ಕೋವಿಡ್ ಸಾವುಗಳ ಸಂಖ್ಯೆಗಳ ವರದಿಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ಸಂಶೋಧನಾ ವರದಿಗಳು ಪ್ರಕಟವಾಗುತ್ತಿವೆ.

  • ಸಮರ್ಥನೆ 8:
    ಸೆಂಟ್ರಲ್ ವಿಸ್ತಾ ಯೋಜನೆಗೂ ವ್ಯಾಕ್ಸಿನೇಷನ್ನಿಗೂ ಸಂಭಂಧವಿಲ್ಲ. ಭಾರತದ ಆರೋಗ್ಯ ಬಜೆಟ್ಟು ವಿಸ್ಟಾ ಯೋಜನೆಯ ಹತ್ತುಪಟ್ಟು ಇದೆ.

ವಾಸ್ತವ
ಅಸಲಿ ಪ್ರಶ್ನೆ ಕೋವಿಡ್ ನಿಭಾಯಿಸಲು ಸಂಪನ್ಮೂಲಗಳಿಲ್ಲ ಎಂದು ಸರ್ಕಾರಗಳು ಹೇಳುತ್ತಿರುವಾಗ ಸೆಂಟ್ರಲ್ ವಿಸ್ತಾ, ಬುಲೆಟ್ ಟ್ರೈನ್ ನಂತ ತುರ್ತಿಲ್ಲದ ಮತ್ತು ಅನಗತ್ಯವಾದ ವೆಚ್ಚಗಳು ಬೇಕೆ ಎಂಬುದು. ಇಂದು ದೇಶಾದ್ಯಂತ ಜನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್‌ಗಳಿಲ್ಲದೆ, ವೆಂಟಿಲೇಟರ್‌ಗಳಿಲ್ಲದೆ, ಕನಿಷ್ಠ ವೈದ್ಯಕೀಯ ಸೌಕರ್ಯಗಳಿಲ್ಲದೆ, ದುಬಾರಿ ವ್ಯಾಕ್ಸಿನ್​​​​​ಗಳನ್ನು ಹಾಕಿಸಿಕೊಳ್ಳಲಾಗದೇ ಸಾಯುತ್ತಿರುವಾಗ ಅನಗತ್ಯವಾದ ಅಥವಾ ತುರ್ತಿಲ್ಲದ ಎಲ್ಲಾ ವೆಚ್ಚಗಳನ್ನು ನಿಲ್ಲಿಸಿ ಅಥವಾ ಮುಂದೂಡಿ ಅದನ್ನು ಕೋವಿಡ್ ನಿಗ್ರಹಕ್ಕೆ ಬೇಕಿರುವ ಸೌಲಭ್ಯಗಳಿಗಾಗಿ ವಿನಿಯೋಗಿಸುವುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಕರ್ತವ್ಯ.

  • ಸಮರ್ಥನೆ 9
    ಭಾರತದ ಎಲ್ಲರಿಗೂ ವ್ಯಾಕ್ಸಿನ್ ಹಾಕಲು ವರ್ಷಗಳಾಗುತ್ತವೆ ಅನ್ನೋದು ತಪ್ಪು. ಮೇ 1ರಿಂದ ಎಲ್ಲರಿಗು ಕೊಡಲಾಗುತ್ತಿದೆ.

ವಾಸ್ತವ
ಮೊದಲನೆಯದಾಗಿ ವ್ಯಾಕ್ಸಿನ್ ಕೊರತೆಯಿಂದಾಗಿ ಕರ್ನಾಟಕವನ್ನೂ ಒಳಗೊಂಡಂತೆ ಬಹುಪಾಲು ರಾಜ್ಯಗಳಲ್ಲಿ 18 ವಯಸ್ಸಿನ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನಿಲ್ಲಿಸಲಾಗಿದೆ.

  • ಸಮರ್ಥನೆ 10
    ಕೋವಿಡ್ ವ್ಯಾಕ್ಸಿನ್ ಬಗ್ಗೆ ವಿರೋಧ ಪಕ್ಷಗಳು ಪ್ರಾರಂಭದಲ್ಲಿ ಅನಗತ್ಯ ಸಂದೇಹಗಳನ್ನು ಹುಟ್ಟಿಹಾಕಿದರು.

ವಾಸ್ತವ
ವ್ಯಾಕ್ಸಿನ್​ಗಳನ್ನು ಸಾರ್ವಜನಿಕರಿಗೆ ಕೊಡುವ ಮುನ್ನ ಅವನ್ನು ಪ್ರಾಣಿಗಳ ಮೇಲೆ ಮತ್ತು ಆ ನಂತರ ಮೂರು ಹಂತದಲ್ಲಿ ಮನುಷ್ಯರ ಮೇಲೆ ಪ್ರಯೋಗ ಮಾಡಬೇಕು. ಅವುಗಳ ರೋಗ ನಿರೋಧಕ ಸಾಮರ್ಥ್ಯ, ಪರಿಣಾಮಕತೆ, ಇನ್ನಿತ್ಯಾದಿಗಳ ವರದಿಗಳನ್ನು ಸಾರ್ವಜನಿಕಗೊಳಿಸಬೇಕು. ಪರಿಣಿತರಿಗೆ ಒದಗಿಸಿ ಒಪ್ಪಿಗೆ ಪಡೆಯಬೇಕು. ಆ ನಂತರವೇ ಅದನ್ನು ಸಾರ್ವಜನಿಕ ಬಳಕೆಗೆ ಬಿಡಬೇಕು. ಆದರೆ ಕೋವ್ಯಾಕ್ಸಿನ್ ಮೂರನೇ ಟ್ರಯಲ್ ಅನ್ನು ಪ್ರಾರಂಭಿಸಿದ್ದೇ ಜನವರಿಯಲ್ಲಿ. ಆದರೂ ಬಿಜೆಪಿ ಸರ್ಕಾರ ದೇಶೀ ವ್ಯಾಕ್ಸಿನ್ ಎಂಬ ಹುಸಿ ಹೆಮ್ಮೆಯನ್ನು ಕೊಚ್ಚಿಕೊಳ್ಳಲು ಜನವರಿಯಲ್ಲೇ ಅದಕ್ಕೆ ಅನುಮತಿ ಕೊಡುವ ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಂಡಿತು. ಅದನ್ನು ವಿರೋಧಿಸಿ ವಿರೋಧ ಪಕ್ಷಗಳು ಮಾತ್ರವಲ್ಲ, ಇಂದು ಕರ್ನಾಟಕದ ಬಿಜೆಪಿ ಸರ್ಕಾರ ರಚಿಸಿರುವ ಕೋವಿಡ್ ಮೂರನೇ ಅಲೆ ನಿಗ್ರಹ ಸಮಿತಿಯ ಸದಸ್ಯರಾದ ಭಾರತದ ಪ್ರಖ್ಯಾತ ವೈರಾಣು ತಜ್ನೆ ಗಗನ್ ದೀಪ್ ಕಾಂಗ್ ಅವರೂ ಕೂಡ ಎಲ್ಲಿಯತನಕ ಕೋವ್ಯಾಕ್ಸಿನ್ ಮೂರನೇ ಟ್ರಯಲ್ಲಿನ ಫಲಿತಾಂಶ ಹೊರಬರುವುದಿಲ್ಲವೋ ಅಲ್ಲಿಯವರೆಗೆ ಅದನ್ನು ಬಳಸಬಾರದು ಎಂದು ಸೂಚಿಸಿದ್ದರು.

  • ಸಮರ್ಥನೆ 11
    ನ್ಯೂಜಿಲೆಂಡ್ ಪ್ರಧಾನಿಯೇ ಭಾರತದ ಪ್ರಧಾನಿಯಾಗಿದ್ದರೆ ಭಾರತ ಬಚಾವಾಗುತ್ತಿತ್ತು ಎಂಬುದು ಹಾಸ್ಯಾಸ್ಪದ . ಏಕೆಂದರೆ ಅಲ್ಲಿನ ಜನಸಂಖ್ಯೆ ಕಡಿಮೆ.

ವಾಸ್ತವ
ನ್ಯೂಜಿಲ್ಯಾಂಡ್​ ಪ್ರಧಾನಿಯವರು ಹಾಗೂ ಅವರಂತೆ ಜಗತ್ತಿನ ಇನ್ನೂ ಕೆಲವು ಪ್ರಜಾತಾಂತ್ರಿಕ ದೇಶಗಳ ಪ್ರಧಾನಿಗಳು - ಅಧ್ಯಕ್ಷರು ತಮ್ಮ ದೇಶವನ್ನು ಕೋವಿಡ್ ದಾಳಿಯಿಂದ ಬಚಾವು ಮಾಡಲು ವೈಜ್ನಾನಿಕ ದೃಷ್ಟಿಕೋನವನ್ನೂ, ದೂರಗಾಮಿ ಮುನ್ನೆಚ್ಚರಿಕೆಯನ್ನೂ, ವ್ಯಾಕ್ಸಿನ್ ಇನ್ನಿತ್ಯಾದಿ ಸೌಲಭ್ಯಗಳಿಗೆ ಮುಚಿತವಾಗಿ ತಯಾರಿಯನ್ನು, ಕೋವಿಡ್ ವಿರುದ್ಧ ವರ್ಣ - ಧರ್ಮ ಬೇಧಗಳಿಲ್ಲದ ರಾಷ್ಟ್ರೀಯ ಒಗ್ಗಟ್ಟನ್ನೂ ರೂಪಿಸಿ ಇಂದು ಎರಡನೇ ಅಲೆಯಿಂದ ತಮ್ಮ ದೇಶವನ್ನು ಪಾರು ಮಾಡಿದ್ದಾರೆ.

ರಾಜಕೀಯ ನಾಯಕತ್ವ ಬಲ
ಆ ದೇಶಗಳು ಬಚಾವಾಗಿದ್ದು, ಅದರ ಜನಸಂಖ್ಯೆ ಕಡಿಮೆ ಇದ್ದದ್ದರಿಂದಲ್ಲ. ಆ ದೇಶಗಳ ರಾಜಕೀಯ ನಾಯಕತ್ವ ಕೋವಿಡ್ ಯುದ್ಧದಲ್ಲಿ ಅನುಸರಿಸಿದ ವೈಜ್ನಾನಿಕ - ಪ್ರಜಾತಾಂತ್ರಿಕ ಧೋರಣೆಗಳಿಂದಾಗಿ ಅವು ಬಚಾವಾದವು. ಆದರೆ, ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೋವಿಡ್ ಯುದ್ಧದಲ್ಲಿ ಗೆದ್ದೆವೆಂಬ ಹುಸಿ ಅತ್ಮರತಿಯಲ್ಲಿ ತೊಡಗಿ ಯಾವ ಮುನ್ನೆಚ್ಚರಿಕೆ ಹಾಗೂ ತಯಾರಿಗಳನ್ನು ಮಾಡಿಕೊಳ್ಳಲಿಲ್ಲ. ವೈಜಾನಿಕ ಧೋರಣೆಗೆ ಬದಲಾಗಿ ಜಾಗಟೆ ವೈದ್ಯ, ದೀಪ ಬೆಳಗುವ, ಗೋ ಕರೋನ ಗೋ ಮಂತ್ರ ಪಠಿಸುವ, ಗಂಜಲ-ಸಗಣಿ ಬಳಸುವ ಅದರ ಮೂಲಕ ಕೋವಿಡ್ ಗೆಲ್ಲುತ್ತೇವೆಂಬ, ಕೊರೊನಾ ವೈರಸ್ಸಿಗೂ ಬದುಕುವ ಹಕ್ಕಿದೆ ಎಂದು ವಾದಿಸುವ ಮೌಢ್ಯಕ್ಕೆ ದೇಶವನ್ನು ತಳ್ಳಿತು ಎಂದಿದೆ.

ಮತ್ತೊಂದೆಡೆ ಕೊರೊನಾವನ್ನೂ ಕೋಮುವಾದೀಕರಿಸುವ ಹಾಗೂ ಕೋವಿಡ್ ನಿರ್ಬಂಧದ ನೆಪದಲ್ಲಿ ವಿರೋಧಿಗಳನ್ನು ಬಗ್ಗು ಬಡೆಯುವ ಅಪ್ರಜಾತಾಂತ್ರಿಕ ಫ್ಯಾಸಿಸ್ಟ್ ಕ್ರಮವನ್ನು ಅನುಸರಿಸುತ್ತಾ ಭಾರತವನ್ನು ಕೋವಿಡ್ ನ ಎರಡನೆ, ಮೂರನೆ, ನಾಲ್ಕನೇ ಅಲೆಗಳಿಗೆ ಬಲಿಮಾಡಲು ಸೂಕ್ತವಾದ ವಾತಾವರಣವನ್ನು ನಿರ್ಮಿಸಿದೆ. ಈ ರಾಜಕೀಯ ಬದಲಾಗದೆ ಭಾರತ ಮೂರನೇ ಅಲೆಯಿಂದ ಪಾರಾಗುವುದಿಲ್ಲ. ಏಕೆಂದರೆ ಭಾರತದಲ್ಲಿ ಕೋವಿಡ್ ವೈದ್ಯಕೀಯ ಸಮಸ್ಯೆಗಿಂತ ಹೆಚ್ಚಾಗಿ ರಾಜಕೀಯ ಸಮಸ್ಯೆಯೇ ಆಗಿದೆ ಎಂದಿದೆ ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.