ETV Bharat / state

ಬಸ್ ತಂಗುದಾಣ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್​​: ಅಸಲಿ ಕಹಾನಿ‌ ಪತ್ತೆ ಹಚ್ಚಿದ ಪೊಲೀಸರು - ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿ

ಕನ್ನಿಂಗ್​ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಬಸ್ ತಂಗುದಾಣ ಕಳ್ಳತನ‌ವಾಗಿದೆ ಎಂಬ ಪ್ರಕರಣಕ್ಕೆ ಪೊಲೀಸರ ತನಿಖೆಯಲ್ಲಿ ಟ್ವಿಸ್ಟ್​ ಸಿಕ್ಕಿದೆ.

ಬಸ್ ತಂಗುದಾಣ ಕಳ್ಳತನ ಪ್ರಕರಣ
ಬಸ್ ತಂಗುದಾಣ ಕಳ್ಳತನ ಪ್ರಕರಣ
author img

By ETV Bharat Karnataka Team

Published : Oct 10, 2023, 1:59 PM IST

Updated : Oct 10, 2023, 7:34 PM IST

ಬಸ್ ತಂಗುದಾಣ ಕಳ್ಳತನ ಪ್ರಕರಣ

ಬೆಂಗಳೂರು: ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿಂಗ್​ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಬಸ್ ತಂಗುದಾಣವನ್ನು ಯಾರೋ ಖದೀಮರು ಕಳ್ಳತನ‌ ಮಾಡಿದ್ದಾರೆ ಎಂದು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಮೂಲಕ ಸತ್ಯಾಂಶವನ್ನು ಬಯಲಿಗೆ ಎಳೆದಿದ್ದಾರೆ.

ಬಿಬಿಎಂಪಿ ಅನುಮತಿ ಪಡೆದು ಕನ್ನಿಂಗ್ ಹ್ಯಾಮ್ ರಸ್ತೆಯ ಕಾಫಿ ಡೇ ಮುಂಭಾಗ 10 ಲಕ್ಷ ರೂ. ವೆಚ್ಚದಲ್ಲಿ ಆಗಷ್ಟ್​ 21ರಂದು ಸೈನ್ ಪೋಸ್ಟ್ ಕಂಪನಿಯಿಂದ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿತ್ತು. ಆಗಷ್ಟ್​ 27ರಂದು ಸೈನ್ ಪೋಸ್ಟ್ ಕಂಪನಿಯ ಸಿಬ್ಬಂದಿ ಎಲ್ಲ ಬಸ್ ನಿಲ್ದಾಣಗಳನ್ನು ಪರೀಕ್ಷಣೆಗೆ ಬಂದಿದ್ದರು. ಆ ತಂಡ ಇಲ್ಲಿಗೂ ಭೇಟಿ ನೀಡಿತ್ತು. ಈ ವೇಳೆ ಇಲ್ಲಿ ಬಂದು ನೋಡಿದಾಗ ಬಸ್ ನಿಲ್ದಾಣವೇ ನಾಪತ್ತೆಯಾಗಿತ್ತು. ಕೂಡಲೇ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ, ತಾವು ಬಸ್ ನಿಲ್ದಾಣ ತೆರವುಗೊಳಿಸಿಲ್ಲ ಎಂದು ಮಾಹಿತಿ ನೀಡಿದ್ದರು.‌ ಇದರಿಂದ ಯಾರೋ ಖದೀಮರು ತಂಗುದಾಣವನ್ನು ಕಳ್ಳತನ ಮಾಡಿದ್ದಾರೆಂದು ತಿಳಿದು ಎನ್.ರವಿ ರೆಡ್ಡಿ ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೊಂಡ ಹೈಗ್ರೌಂಡ್ಸ್ ಪೊಲೀಸರು, ಹಿಂದಿನ ಅಸಲಿ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ. ಖಾಸಗಿ ಕಂಪನಿಯಿಂದ ಬಸ್ ನಿಲ್ದಾಣ ಮಾಡಲು ಮುಂದಾಗಿತ್ತು. ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಕೂಡ ಪಡೆದಿದ್ದ ರವಿರೆಡ್ಡಿ ಅವರು ಆಗಸ್ಟ್ 21ರಂದು ಬಸ್ ಸ್ಟ್ಯಾಂಡ್ ಕೆಲಸವನ್ನು ಶುರು ಮಾಡಿಸಿದ್ದರು. ಆದರೆ, ಕಳಪೆ ಕಾಮಗಾರಿಯಿಂದ ಕೂಡಿದೆ ಎಂಬ ಮಾಹಿತಿ ಹಿನ್ನೆಲೆ ಶಿವಾಜಿನಗರದದ ಬಿಬಿಎಂಪಿಯ ಕಾರ್ಯಪಾಲಕ ಅಭಿಯಂತರಿಗೆ (ಎಇಇ) ಸ್ಥಳ ಪರಿಶೀಲಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು.

ಅನಂತರ ಬಸ್ ಸ್ಟ್ರಾಂಡ್ ಶೆಲ್ಟರ್​​ ಅನ್ನು ಬಿಬಿಎಂಪಿಯಿಂದ ಸೀಜ್ ಮಾಡಲಾಗಿತ್ತು. ನಂತರ ಅದನ್ನು ಗೋಡೌನ್​​ನಲ್ಲಿ ಸಂಗ್ರಹ ಮಾಡಿ ಇಡಲಾಗಿತ್ತು. ಇದನ್ನು ಅರಿಯದೆ ಮತ್ತು ಮೆಟಿರೀಯಲ್ ಕಾಣೆಯಾಗಿರೋದನ್ನು ಗಮನಿಸಿದ ರವಿರೆಡ್ಡಿ ಸೆಪ್ಟಂಬರ್​ 30 ರಂದು ಮತ್ತೆ ಹೈಗ್ರೌಂಡ್ಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ದೂರು ಪಡೆದು ತನಿಖೆ ಮಾಡಿದಾಗ ಅಸಲಿ ಸತ್ಯಾಂಶ ಬಯಲಾಗಿದ್ದು ಸದ್ಯ ರವಿ ರೆಡ್ಡಿ ವಿರುದ್ಧವೇ ದೂರು ನೀಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಬಗ್ಗೆ‌ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪ್ರತಿಕ್ರಿಯಿಸಿದ್ದು, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಬಸ್ ಶೆಲ್ಟರ್ ಕಾಣೆಯಾಗಿದೆ ಎಂದು ದೂರು ಬಂದ ಮೇರೆಗೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದಾಗ ಬಸ್ ಶೆಲ್ಟರ್ ಕಳ್ಳತನವಾಗಿರಲಿಲ್ಲ ಎಂಬುವುದು ಗೊತ್ತಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಕಳಪೆ ಕಾಮಗಾರಿ ಹಿನ್ನೆಲೆ ತೆರವುಗೊಳಿಸಿದ್ದರು.

ಸೈನ್ ಪೋಸ್ಟ್ ಕಂಪನಿಯವರು ವಿನಾ ಕಾರಣ ದೂರು ನೀಡಿದ್ದಾರೆ. ದೂರಿನನ್ವಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದೆವು. ತನಿಖೆ ವೇಳೆ ಅಸಲಿ ಸತ್ಯ ಬಯಲಾಗಿದೆ. ಕಳೆದ ತಿಂಗಳು ಶಿವಾಜಿನಗರ ಕಾರ್ಯಪಾಲಕ ಅಭಿಯಂತರರು ಇದನ್ನು ತೆರವುಗೊಳಿಸಿದ್ದರು. ಸದ್ಯ ತನಿಖೆ ಮೂಲಕ ಸತ್ಯಾಂಶ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಸ್ ತಂಗುದಾಣ ಕಳ್ಳತನ..!! ಹುಡುಕುವಂತೆ ಪೊಲೀಸರಿಗೆ ದೂರು

Last Updated : Oct 10, 2023, 7:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.