ಬೆಂಗಳೂರು: ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಠಾಣೆಗೆ ಭೇಟಿ ನೀಡುವ ಸಾರ್ವಜನಿಕರು ಕೂಡಾ ಕೊರೊನಾ ವೈರಸ್ ಬಗ್ಗೆ ಜಾಗೃತಿ ವಹಿಸಲು ನಗರ ಆಯುಕ್ತ ಭಾಸ್ಕರ್ ರಾವ್ ಸುತ್ತೋಲೆ ಹೊರಡಿಸಿದ್ದಾರೆ.
ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಸಮಾಜದ ಸೇವೆಗೆ ನಿಯೋಜನೆಯಾಗಿರುವ ಪೊಲೀಸರು ಕೂಡಾ ಮಾರಕ ರೋಗ ಹರಡುವ ಕಾರಣ ಸಾಕಷ್ಟು ಮುನ್ನೆಚ್ಚರಿಕೆಯಿಂದ ಇರಬೇಕೆಂದು ನಗರ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮಗಳು ಹೀಗಿವೆ:
* ಕೊರೊನಾ ವೈರಸ್ ಟೋಲ್ ಫ್ರೀ ನಂಬರ್:104
* ಚೀತಾ, ಹೊಯ್ಸಳ ವಾಹನಗಳಲ್ಲಿ ಹ್ಯಾಂಡ್ ಕ್ಲೀನರ್
* ಠಾಣೆಯ ಎಲ್ಲಾ ಸಿಬ್ಬಂದಿಗಳು ಆಗಾಗ ಕೈ ತೊಳೆಯುವುದು
* ಪೊಲೀಸ್ ಸಿಬ್ಬಂದಿಗಳಲ್ಲಿ ವೈರಸ್ ಕಂಡ ಕೂಡಲೇ ರಜೆ ತೆಗೆದುಕೊಳ್ಳುವುದು
* ಠಾಣೆಗೆ ಯಾವುದೇ ವ್ಯಕ್ತಿ ಭೇಟಿ ನೀಡಿದಾಗ ಮೂರು ಅಡಿ ದೂರದಲ್ಲಿ ನಿಂತು ಮಾತಾಡುವುದು
* ಎಲ್ಲಾ ಚೀತಾ, ಹೊಯ್ಸಳ ವಾಹನದಲ್ಲಿ ಮಾಸ್ಕ್ ಇಟ್ಟುಕೊಳ್ಳುವುದು
* ಹೊಯ್ಸಳ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಬಗ್ಗೆ ದೂರು ಬಂದರೆ 104ಗೆ ಕರೆ ಮಾಡಲು ತಿಳಿಸಿ ನಂತರ ಆಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗಬೇಕೆಂದು ಸುತ್ತೋಲೆ ಹೊರಡಿಸಿದ್ದಾರೆ.