ETV Bharat / state

ಸಿಎಂ ಕುಮಾರಸ್ವಾಮಿ, ಸಚಿವ ಜಮೀರ್​​​ ಮಧ್ಯೆ ಅಕ್ಕಿ ಜಟಾಪಟಿ! - ಅಕ್ಕಿ

ಮೈತ್ರಿ ಸರ್ಕಾರದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆ‌ ಜಟಾಪಟಿ ತಾರಕಕ್ಕೇರಿದ್ದು, ಅಕ್ಕಿ ವಿತರಣೆ ವಿಚಾರ ಸಿಎಂ ಹಾಗೂ ಆಹಾರ ಸಚಿವ ಜಮೀರ್ ಅಹಮದ್​ ಖಾನ್ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಸಿಎಂ ಕುಮಾಸ್ವಾಮಿ
author img

By

Published : Jun 26, 2019, 10:01 PM IST

Updated : Jun 26, 2019, 10:28 PM IST

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆ‌ ಜಟಾಪಟಿ ತಾರಕಕ್ಕೇರಿದ್ದು, ಅಕ್ಕಿ ವಿತರಣೆ ವಿಚಾರ ಸಿಎಂ ಹಾಗೂ ಆಹಾರ ಸಚಿವ ಜಮೀರ್ ಅಹಮದ್​ ಖಾನ್ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಸರ್ಕಾರದ ಕನಸಿನ ಯೋಜನೆ ಅನ್ನಭಾಗ್ಯ ಯೋಜನೆ. ಫಲಾನುಭವಿಗಳಿಗೆ 7 ಕೆಜಿ ಅಕ್ಕಿ ನೀಡುವ ಮೂಲಕ ಹಸಿವು ಮುಕ್ತ ಪರಿಕಲ್ಪನೆಯೊಂದಿಗೆ ಸಿದ್ದರಾಮಯ್ಯ ಯೋಜನೆಯನ್ನು ಜಾರಿಗೆ ತಂದಿದ್ದರು.‌ ಆದರೆ ಮೈತ್ರಿ ಸರ್ಕಾರ ಬಂದ ಬಳಿಕ ಈ ಅನ್ನಭಾಗ್ಯಕ್ಕೆ ಕತ್ತರಿ ಹಾಕಲು ಸಿಎಂ ಮುಂದಾಗಿದ್ದು, ಮೈತ್ರಿ ತಿಕ್ಕಾಟಕ್ಕೆ ಕಾರಣವಾಗಿತ್ತು. ಬಳಿಕ ಮೈತ್ರಿ ಪಕ್ಷದ ಒತ್ತಡಕ್ಕೆ ಮಣಿದು ಸಿಎಂ 7 ಕೆಜಿ ಅಕ್ಕಿ ವಿತರಣೆಯನ್ನು ಮುಂದುವರಿಸಿದ್ದರು. ಇದೀಗ ಮತ್ತೆ ಅನ್ನಭಾಗ್ಯ ಅಕ್ಕಿಗೆ ಕತ್ತರಿ ಹಾಕಲು ಸಿಎಂ ಗಂಭೀರ ಚಿಂತನೆ ನಡೆಸಿರುವುದು ಸಚಿವ ಜಮೀರ್ ಅಹಮದ್​ ಖಾನ್ ಕಣ್ಣು ಕೆಂಪಾಗಿಸಿದೆ.

ಸಿಎಂ ಕುಮಾರಸ್ವಾಮಿ ಅನ್ನಭಾಗ್ಯದಡಿ 7 ಕೆಜಿ ಅಕ್ಕಿ ಬದಲು 5 ಕೆಜಿ‌ ಅಕ್ಕಿ ನೀಡಲು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಸಚಿವ ಜಮೀರ್ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ವಿಧಾನಸೌಧದಲ್ಲಿ ನಡೆದ ಆಹಾರ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಿಎಂ ಹಾಗೂ ಸಚಿವ ಜಮೀರ್ ಮಧ್ಯೆ ತೀವ್ರ ಅಕ್ಕಿ ತಿಕ್ಕಾಟ ನಡೆದಿದೆ ಎನ್ನಲಾಗಿದೆ.

ಸಭೆಯಲ್ಲಿ ಸಚಿವ ಜಮೀರ್ ಖಾನ್ ನಮ್ಮ ಸಿದ್ದರಾಮಯ್ಯ ಸಾಹೇಬರು ನೀಡುತ್ತಿದ್ದ ಏಳು ಕೆಜಿ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸಬಾರದು ಎಂದು ಸುಮಾರು ಬಾರಿ ವಾದ ಮಾಡಿದರು. ಇದರಿಂದ ಸಿಎಂ ಇರಿಸು ಮುರಿಸು ಅನುಭವಿಸಿದ್ದರು. ಇದಕ್ಕೆ ಕುಮಾರಸ್ವಾಮಿ 7 ಕೆಜಿ ಅಕ್ಕಿ ವಿತರಣೆಯಿಂದ‌ ಸಾಕಷ್ಟು ಆರ್ಥಿಕ ಹೊರೆಯಾಗುತ್ತಿದೆ. ಜತೆಗೆ ಅಕ್ಕಿ ಫಲಾನುಭವಿಗಳ ಕೈ ಸೇರದೆ ದುರ್ಬಳಕೆಯಾಗುತ್ತಿದ್ದು, ಅಕ್ಕಿ ಕಡಿತಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಚಿವ ಜಮೀರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಸಿಎಂ ಮತ್ತು ಜಮೀರ್ ಮಧ್ಯೆ ಬಿಸಿ ಬಿಸಿ ಚರ್ಚೆ ನಡೆದಿರುವುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವಾರ್ಷಿಕ ಬಜೆಟ್ 3600 ಕೋಟಿ ರೂಪಾಯಿ. ಅನ್ನಭಾಗ್ಯದಡಿ ಕೇಂದ್ರದ ಪಾಲಿನ 5 ಕೆಜಿ ಬಿಟ್ಟು 2 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ಫಲಾನುಭವಿಗಳಿಗೆ ನೀಡುತ್ತಿದೆ. ಈ 2 ಕೆಜಿ ಅಕ್ಕಿ ಖರೀದಿಗಾಗಿ ಸರ್ಕಾರದ ಮೇಲೆ 2400 ಕೋಟಿ ರೂಪಾಯಿ ಹೊರೆ ಬೀಳುತ್ತಿದೆ. ಹೀಗಾಗಿ 2 ಕೆಜಿ ಅಕ್ಕಿ ಕಡಿತಗೊಳಿಸಿದರೆ ಈ‌ ಹಣ ಉಳಿತಾಯವಾಗುತ್ತದೆ ಎಂಬುದು ಸಿಎಂ ಲೆಕ್ಕಾಚಾರ ಎನ್ನಲಾಗುತ್ತಿದೆ.

Intro:Cm jameerBody:KN_BNG_06_26_CMJAMEER_RICEINFIGHT_SCRIPT_7201951

ಸಿಎಂ ಕುಮಾರಸ್ವಾಮಿ- ಸಚಿವ ಜಮೀರ್ ಮಧ್ಯೆ ಜೋರಾಯ್ತು ಅಕ್ಕಿ ತಿಕ್ಕಾಟ!

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆ‌ ಜಟಾಪಟಿ ತಾರಕಕ್ಕೇರಿದೆ. ಈ ಅಕ್ಕಿ ವಿತರಣೆ ವಿಚಾರ ಸಿಎಂ ಹಾಗೂ ಆಹಾರ ಸಚಿವ ಜಮೀರ್ ಖಾನ್ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಸರ್ಕಾರದ ಕನಸಿನ ಯೋಜನೆ ಅನ್ನಭಾಗ್ಯ ಯೋಜನೆ. ಫಲಾನುಭವಿಗಳಿಗೆ ಏಳು ಕೆಜಿ ಅಕ್ಕಿ ನೀಡುವ ಮೂಲಕ ಹಸಿವು ಮುಕ್ತ ಪರಿಕಲ್ಪನೆಯೊಂದಿಗೆ ಸಿದ್ದರಾಮಯ್ಯ ಯೋಜನೆಯನ್ನು ಜಾರಿಗೆ ತಂದಿದ್ದರು.‌ ಆದರೆ, ಮೈತ್ರಿ ಸರ್ಕಾರ ಬಂದ ಬಳಿಕ ಈ ಅನ್ನಭಾಗ್ಯಕ್ಕೆ ಕತ್ತರಿ ಹಾಕಲು ಸಿಎಂ ಮುಂದಾಗಿದ್ದು, ಮೈತ್ರಿ ತಿಕ್ಕಾಟಕ್ಕೆ ಕಾರಣವಾಗಿತ್ತು. ಬಳಿಕ ಮೈತ್ರಿ ಪಕ್ಷದ ಒತ್ತಡಕ್ಕೆ ಮಣಿದು ಸಿಎಂ ಏಳು ಕೆಜಿ ಅಕ್ಕಿ ವಿತರಣೆಯನ್ನು ಮುಂದುವರಿಸಿದ್ದರು. ಇದೀಗ ಮತ್ತೆ ಅನ್ನಭಾಗ್ಯ ಅಕ್ಕಿ ಗೆ ಕತ್ತರಿ ಹಾಕಲು ಸಿಎಂ ಗಂಭೀರ ಚಿಂತನೆ ನಡೆಸಿರುವುದು ಸಚಿವ ಜಮೀರ್ ಖಾನ್ ಕಣ್ಣು ಕೆಂಪಾಗಿಸಿದೆ.

ಸಿಎಂ-ಜಮೀರ್ ಮಧ್ಯೆ ಅಕ್ಕಿ ತಿಕ್ಕಾಟ!:

ಹೌದು ಅನ್ನಭಾಗ್ಯದಡಿ ಕೊಡುವ ಅಕ್ಕಿ ಗೆ ಕತ್ತರಿ ಹಾಕಲು ಸಿಎಂ ಮುಂದಾಗಿರುವುದು ತಿಕ್ಕಾಟಕ್ಕೆ ಕಾರಣವಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಖಾನ್ ಮಧ್ಯೆ ತಿಕ್ಕಾಟಕ್ಕೆ ಎಡೆಮಾಡಿಕೊಟ್ಟಿದೆ.

ಸಿಎಂ ಕುಮಾರಸ್ವಾಮಿ ಅನ್ನಭಾಗ್ಯದಡಿ ಏಳು ಕೆಜಿ ಅಕ್ಕಿ ಬದಲು ಐದು ಕೆ.ಜಿ‌ ಅಕ್ಕಿ ಕೊಡಲು ಗಂಭೀರ ಚಿಂತನೆ ನಡೆಸಿದ್ದಾರೆ. ಆದರೆ, ಸಚಿವ ಜಮೀರ್ ಖಾನ್ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ವಿಧಾನಸೌಧದಲ್ಲಿ ನಡೆದ ಆಹಾರ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಿಎಂ ಹಾಗೂ ಸಚಿವ ಜಮೀರ್ ಮಧ್ಯೆ ತೀವ್ರ ಅಕ್ಕಿ ತಿಕ್ಕಾಟ ನಡೆದಿದೆ.

ಸಭೆಯಲ್ಲಿ ಸಚಿವ ಜಮೀರ್ ಖಾನ್ ನಮ್ಮ ಸಿದ್ದರಾಮಯ್ಯ ಸಾಹೇಬರು ನೀಡುತ್ತಿದ್ದ ಏಳು ಕೆಜಿ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸಬಾರದು ಎಂದು ಮೂರು ನಾಲ್ಕು ಬಾರಿ ವಾದ ಮಾಡಿದರು. ಇದರಿಂದ ಸಿಎಂ ಇರುಸು ಮುರಿಸು ಗೊಂಡಿದ್ದಾರೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಅವರು ಏಳು ಕೆಜಿ ಅಕ್ಕಿ ವಿತರಣೆಯಿಂದ‌ ಸಾಕಷ್ಟು ಆರ್ಥಿಕ ಹೊರೆಯಾಗುತ್ತಿದೆ. ಜತೆಗೆ ಈ ಅಕ್ಕಿ ಫಲಾನುಭವಿಗಳ ಕೈ ಸೇರದೆ ದುರ್ಬಳಕೆನೇ ಹೆಚ್ಚು. ಹೀಗಾಗಿ ಐದು ಕೆಜಿಗೆ ಕಡಿತಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಚಿವ ಜಮೀರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಸಿಎಂ ಮತ್ತು ಜಮೀರ್ ಮಧ್ಯೆ ಬಿಸಿ ಬಿಸಿ ಚರ್ಚೆ ನಡೆದಿರುವುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭ ಮಧ್ಯ ಪ್ರವೇಶಿಸಿದ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್, ಈ ಬಾರಿ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ತಾನು ರಿಯಾಯಿತಿ ದರದಲ್ಲಿ ನೀಡುವ ಐದು ಕೆಜಿ ಅಕ್ಕಿಯನ್ನು ಏಳು ಕೆಜಿಗೆ ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಯಾವುದೇ ಸಮಸ್ಯೆ ಆಗಲ್ಲ ಎಂಬ ಸಮಜಾಯಿಷಿ ನೀಡಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ಲೆಕ್ಕಾಚಾರ ಏನು?:

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವಾರ್ಷಿಕ ಬಜೆಟ್ ಇರುವುದು 3600 ಕೋಟಿ ರೂ. ಅನ್ನ ಭಾಗ್ಯದಡಿ ಕೇಂದ್ರದ ಪಾಲಿನ ಐದು ಕೆಜಿ ಬಿಟ್ಟು ಎರಡು ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ಫಲಾನುಭವಿಗಳಿಗೆ ನೀಡುತ್ತಿದೆ. ಈ ಎರಡು ಕೆಜಿ ಅಕ್ಕಿ ಖರೀದಿಗಾಗಿ ಸರ್ಕಾರದ ಮೇಲೆ 2400 ಕೋಟಿ ರೂ. ಹೊರೆ ಬೀಳುತ್ತಿದೆ. ಹೀಗಾಗಿ ಎರಡು ಕೆಜಿ ಅಕ್ಕಿ ಕಡಿತಗೊಳಿಸಿದರೆ ಈ‌ ಹಣ ಉಳಿತಾಯ ಆಗುತ್ತದೆ ಎಂಬುದು ಸಿಎಂ ಲೆಕ್ಕಾಚಾರ.

ಆಹಾರ ಇಲಾಖೆಯ ಬಹುಪಾಲು ಅಕ್ಕಿ ಖರೀದಿಗೆ ಹೋಗುತ್ತಿದ್ದು, ಅದನ್ನು ಉಳಿತಾಯ ಮಾಡಿ, ಅದನ್ನು ಸಾಲಮನ್ನಾ ಯೋಜನೆಗೆ ಬಳಸಬಹುದು ಎಂಬುದು ಸಿಎಂ ದೂರಾಲೋಚನೆ ಎನ್ನಲಾಗಿದೆ. ಇನ್ನು ರಿಯಾಯಿತಿ ದರದಲ್ಲಿ ನೀಡುವ ಒಂದು ಕೆಜಿ ತೊಗರಿ ಬೇಳೆಯೂ ಇಲಾಖೆ ಮೇಲೆ ಸುಮಾರು 540 ಕೋಟಿ ರೂ.‌ ಹೊರೆ ಬೀಳಿಸುತ್ತಿದೆ.

ಒಂದು ವೇಳೆ‌ ಏಳು ಕೆಜಿ ಅಕ್ಕಿ ವಿತರಣೆ ಮುಂದುವರಿಸುವುದಾದರೆ ಅದರ ಬದಲಿಗೆ ತೊಗರಿ ಬೇಳೆ ವಿತರಣೆಯನ್ನು ಸ್ಥಗಿತಗೊಳಿಸಲು ಸಿಎಂ ಚಿಂತನೆ ನಡೆಸಿದ್ದಾರೆ. ಆಗ ಕನಿಷ್ಠ 540 ರೂ.‌ ಆದರು ಉಳಿತಾಯ ಆಗಲಿದೆ ಎಂಬ ಯೋಚನೆಯೂ ಸಿಎಂರಲ್ಲಿದೆ ಎನ್ನಲಾಗಿದೆ. ಏಳು ಕೆಜಿ ಅಕ್ಕಿ ಕೇಂದ್ರ ಸರ್ಕಾರವೇ ನೀಡಿದರೆ, ರಾಜ್ಯದ ಪಾಲಿನ ಎರಡು ಕೆಜಿ ಅಕ್ಕಿ ಹಾಗೂ ತೊಗರಿ ಬೇಳೆ ವಿತರಣೆ‌ ನಿಲ್ಲಿಸುವ ಬಗ್ಗೆನೂ ಇಲಾಖೆ ಅಧಿಕಾರಿಗಳಲ್ಲೇ ಲೆಕ್ಕಾಚಾರ ನಡೆಯುತ್ತಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಸಿಎಂ ಹಾಗೂ ಸಚಿವ ಜಮೀರ್ ಖಾನ್ ಮಧ್ಯೆ ಅಕ್ಕಿ ತಿಕ್ಕಾಟ ತಾರಕಕ್ಕೇರಿದೆ.Conclusion:Venkat
Last Updated : Jun 26, 2019, 10:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.