ETV Bharat / state

ಗರ್ಭಿಣಿಯು ಕೇಸರಿ ಸೇವಿಸಿದರೆ ಮಗು ಶ್ವೇತ ವರ್ಣದ ಚರ್ಮ ಹೊಂದುವುದಿಲ್ಲ: ಪದ್ಮಶ್ರೀ ಪುರಸ್ಕೃತೆ ಡಾ.ಕಾಮಿನಿ ಎ.ರಾವ್

ಗರ್ಭಧಾರಣೆ ಸಂಬಂಧ ಮಹಿಳೆಯರು ಹೊಂದಿರುವ ನೂರಾರು ಪ್ರಶ್ನೆಗಳಿಗೆ ಡಾ. ಸುನಿಲ್ ಕುಮಾರ್ ಜಿ.ಎಸ್ ಬರೆದಿರುವ ‘ಡ್ಯೂ ಡೇಟ್’ ಪುಸ್ತಕ ಉತ್ತರ ನೀಡಲಿದೆ. ಪುಸ್ತಕವನ್ನ ಖ್ಯಾತ ವೈದ್ಯೆ ಕಾಮಿನಿ ಬಿಡುಗಡೆ ಮಾಡಿದ್ದಾರೆ.

The baby may not have white skin if pregnant consumes Saffron says Dr. Kamini
ಗರ್ಭಿಣಿ ಕೇಸರಿ ಸೇವಿಸಿದರೆ ಮಗು ಶ್ವೇತ ವರ್ಣದ ಚರ್ಮ ಹೊಂದುವುದಿಲ್ಲ: ಪದ್ಮಶ್ರೀ ಪುರಸ್ಕೃತೆ ಡಾ.ಕಾಮಿನಿ ಎ.ರಾವ್
author img

By

Published : Nov 4, 2021, 7:13 AM IST

Updated : Aug 9, 2022, 3:37 PM IST

ಬೆಂಗಳೂರು: ಕೇವಲ ಕೇಸರಿ ಸೇವನೆಯಿಂದ ಮಗು ಶ್ವೇತ ವರ್ಣದ ಚರ್ಮ ಹೊಂದುವುದಿಲ್ಲ, ಗಂಡು-ಹೆಣ್ಣಿನ ವಂಶವಾಹಿಯೇ ಹುಟ್ಟುವ ಮಗುವಿನ ಚರ್ಮದ ವರ್ಣಕ್ಕೆ ಕಾರಣ, ಕೇಸರಿ ಸೇವನೆಯಿಂದ ಈ ವಂಶವಾಹಿಗಳ ಬದಲಾವಣೆ ಸಾಧ್ಯವಿಲ್ಲ ಎಂದು ಪದ್ಮಶ್ರೀ ಪುರಸ್ಕೃತೆ ಡಾ.ಕಾಮಿನಿ ಎ. ರಾವ್ ಹೇಳಿದ್ದಾರೆ.

Dr. Sunil kumar's Book
ಡಾ. ಸುನಿಲ್ ಕುಮಾರ್ ಜಿ.ಎಸ್ ಬರೆದಿರುವ ‘ಡ್ಯೂ ಡೇಟ್’ ಪುಸ್ತಕ

ಬೆಂಗಳೂರಿನ ಕೋರಮಂಗಲ ರಾಷ್ಟ್ರೀಯ ಕ್ರೀಡಾ ಗ್ರಾಮ ಕ್ಲಬ್‌ನಲ್ಲಿ ಮಾನವ ಭ್ರೂಣ ವಿಕಿರಣ ಶಾಸ್ತ್ರಜ್ಞ "ಆಡ್ ಅನ್ ಸ್ಕಾನ್ಸ್ ಅಂಡ್ ಲ್ಯಾಬ್" ಸಂಸ್ಥಾಪಕ ಡಾ. ಸುನಿಲ್ ಕುಮಾರ್ ಜಿ.ಎಸ್ ಬರೆದ ‘ಡ್ಯೂ ಡೇಟ್’, ಗರ್ಭಿಣಿಯರಿಗೆ ಸಮಗ್ರ ಮಾಹಿತಿಯ ವೈದ್ಯಕೀಯ ಪುಸ್ತಕವನ್ನು ಮಿಲನ್ ಗ್ರೂಪ್ ಆಫ್ ಹಾಸ್ಪಿಟಲ್‌ಗಳ ಸಂಸ್ಥಾಪಕಿ ಡಾ.ಕಾಮಿನಿ ಎ.ರಾವ್ ಬಿಡುಗಡೆ ಮಾಡಿ ಮಾತನಾಡಿದ್ದಾರೆ.

ಗರ್ಭಧಾರಣೆಯ ಕುರಿತ ತಪ್ಪು ತಿಳುವಳಿಕೆಗಳನ್ನು ನಿವಾರಿಸುವಲ್ಲಿ ಈ ಪುಸ್ತಕದ ಓದು ಸಹಕಾರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹಲವು ತಜ್ಞರ ಮಾಹಿತಿ ಪಡೆದು ಹೊರತಂದ ಪುಸ್ತಕ:

ಹಲವು ಪ್ರಸೂತಿ ತಜ್ಞರು, ಪೌಷ್ಟಿಕತಜ್ಞರು, ಅವರ ರೋಗಿಗಳ ಮತ್ತು ವೈಯಕ್ತಿಕ ಫಿಟ್‌ನೆಸ್ ತಜ್ಞರು, ಮನೋವೈದ್ಯರಿಂದ ಮಾಹಿತಿ ಪಡೆದು ಬೆಂಗಳೂರಿನ ರೇಡಿಯಾಲಜಿಸ್ಟ್ ಡಾ. ಸುನೀಲ್ ಕುಮಾರ್ ಜಿ.ಎಸ್ ಸುನಿಲ್ ಕುಮಾರ್​​ ಈ ಪುಸ್ತಕ ಹೊರತಂದಿದ್ದಾರೆ.

ಕಾರ್ಯಕ್ರಮದಲ್ಲಿ ಚಿತ್ರನಟಿ ಶ್ವೇತಾ ಶ್ರೀವಾತ್ಸವ್, ರಿಯಾನ್ ಫರ್ನಾಂಡೋ, ರಾಮ್ ಆನಂದ್ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ: ಬೆಳಕಿನ ಹಬ್ಬ ದೀಪಾವಳಿಯ ಮಹತ್ವವೇನು, ಆಚರಣೆಯ ವಿಧಾನಗಳು ಯಾವುವು? ‌

Last Updated : Aug 9, 2022, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.