ಬೆಂಗಳೂರು: ನಕಲಿ ಕೀ ಮಾಡಿಕೊಂಡು ಸಂಬಂಧಿಕರ ಮನೆಯಲ್ಲಿ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಮನೆ ಮಾಲೀಕ ಸಲೀಂಪಾಷ ನೀಡಿದ ದೂರಿನ ಮೇರೆಗೆ ಇಮ್ರಾನ್ ಅಹ್ಮದ್, ಸಯ್ಯದ್ ಜಮೀದ್ ಹಾಗೂ ಅತ್ರಿಕ್ ಪಾಷಾ ಎಂಬುವರನ್ನು ಬಂಧಿಸಲಾಗಿದೆ. ₹4.50 ಲಕ್ಷ ಬೆಲೆ ಬಾಳುವ 100 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಓದಿ: ಕಾಣೆಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಕಾಡಿನಲ್ಲಿ ಶವವಾಗಿ ಪತ್ತೆ
ಡಿ.14ರಂದು ಸುದ್ದುಗುಂಟೆಪಾಳ್ಯದ ಬಿಸ್ಮಿಲಾನಗರ ನಿವಾಸಿ ಸಲೀಂಪಾಷ ಮನೆಗೆ ನುಗ್ಗಿ ಖದೀಮರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ದೋಚಿದ್ದರು.
ಈ ಸಂಬಂಧ ದೂರು ದಾಖಲಾಗಿತ್ತು. ಸಂಬಂಧಿಕ ಸಲೀಂಪಾಷ ಮನೆಯಲ್ಲಿ ಚಿನ್ನಾಭರಣ ಇರುವುದನ್ನು ಅರಿತು ಮನೆಯ ಕೀಯನ್ನು ನಕಲಿ ಮಾಡಿಸಿಕೊಂಡಿದ್ದ. ಸಲೀಂಪಾಷನ ಕುಟುಂಬ ಊರಿಗೆ ಹೋಗುತ್ತಿದ್ದಂತೆ ಆಲರ್ಟ್ ಆದ ಆರೋಪಿಗಳು ಮನೆಗೆ ಹೋಗಿ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.