ಬೆಂಗಳೂರು: ಕೊರೊನಾ ವೈರಸ್ ಭೀತಿಯನ್ನೇ ದುರುಪಯೋಗ ಮಾಡಿಕೊಂಡ ಕಿಡಿಗೇಡಿಗಳು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಇನ್ಪಾರೆಡ್ ಫೋರ್ ಹೆಡ್ ಥರ್ಮಲ್ ಸ್ಕ್ರೀನರ್ ಮಾರಟ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ದೇಹದ ಉಷ್ಣತೆ ಚೆಕ್ ಮಾಡಲು ಬಳಸುವ ಸ್ಕ್ರೀನಿಂಗ್ ಮಷಿನ್ಅನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದ ಸಿಸಿಬಿ ಅಧಿಕಾರಿಳು, ರಾಜಾಜಿನಗರ ಬಳಿ ಇರುವ ಪ್ರಜ್ವಲ್ ಸರ್ಜಿಕಲ್ ಸೈಂಟಿಫಿಕ್ಸ್ ಅಂಗಡಿ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಇನ್ಪಾರೆಡ್ ಫೋರ್ ಹೆಡ್ ಥರ್ಮಲ್ ಸ್ಕ್ರೀನರ್ಗಳನ್ನು ಚೈನೈನಿಂದ ಕಡಿಮೆ ಬೆಲೆಗೆ ತರಿಸಿಕೊಂಡು ಅದನ್ನ ಇಲ್ಲಿ ಹೆಚ್ಚಿನ ಬೆಲೆಗೆ ಮಾರಟ ಮಾಡಿ ಸಾರ್ವಜನಿಕರಿಂದ ಹಣ ಲೂಟಿಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಆರೋಪಿಗಳನ್ನು ಬಂಧಿಸಿದ್ದಾರೆ.
ಅಂಗಡಿಯ ಮ್ಯಾನೇಜರ್ ಕೇಶವನ್ ಎಂಬಾತನನ್ನ ಬಂಧಿಸಿ ಅಂಗಡಿಯಲ್ಲಿದ್ದ ಸುಮಾರು 8 ಲಕ್ಷ, ಬೆಲೆ ಬಾಳುವ ಸ್ಕ್ರೀನಿಂಗ್ ಮಷಿನ್ಗಳು ಮತ್ತು 60 ಬ್ಯಾಟರಿಗಳನ್ನು ಜಪ್ತಿ ಮಾಡಿ ಸುಬ್ರಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಾಗೆ ಅಂಗಡಿ ಮಾಲೀಕನಿಗಾಗಿ ಶೊಧ ಮುಂದುವರೆಸಿದ್ದಾರೆ