ಬೆಂಗಳೂರು: ಜುಲೈ 5ರ ಬದಲು ಜುಲೈ 12 ರಂದು ಟಿಇಟಿ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದ ಶಿಕ್ಷಣ ಇಲಾಖೆ ನಡೆಸುವ ಟಿಇಟಿ ಪರೀಕ್ಷೆಯ ದಿನಾಂಕವನ್ನ ಜುಲೈ 5 ರಂದು ಘೋಷಣೆ ಮಾಡಲಾಗಿತ್ತು. ಆದರೆ, CTET ಪರೀಕ್ಷೆಯೂ ಅದೇ ದಿನ ನಡೆಯುವ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಟಿಇಟಿ ಪರೀಕ್ಷೆಯನ್ನ ಜುಲೈ 12ಕ್ಕೆ ನಡೆಸಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಸಚಿವರು, ಅದೇ ದಿನ ನಡೆಯುವ ಸಿಟಿಇಟಿ ಪರೀಕ್ಷೆಯೂ ನಮ್ಮ ಗಮನಕ್ಕೆ ಬಂದಿದ್ದು, ದಿನಾಂಕ ಬದಲಾವಣೆ ಮಾಡಲಾಗಿದೆ ಅಂತ ತಿಳಿಸಿದ್ದಾರೆ.