ಬೆಂಗಳೂರು: ನಗರದ ಮಾಲ್ ವೊಂದರಲ್ಲಿ ಟೆರರಿಸ್ಟ್ ಅಟ್ಯಾಕ್ ದೃಶ್ಯ ಸೃಷ್ಟಿಯಾಗಿತ್ತು. ಇದರಿಂದ ಭಯಭೀತರಾದ ಸಾರ್ವಜನಿಕರು ನಮ್ಮ100ಗೆ ಕರೆ ಮಾಡಲು ಮುಂದಾಗಿದ್ದರು. ಇಷ್ಟಕ್ಕೂ ಆ ಮಾಲ್ ನಲ್ಲಿದ್ದ ಜನರು ಭಯಭೀತರಾಗಿದ್ದಕ್ಕೆ ಅಲ್ಲಿ ನಡೆದಿದ್ದೇನು ಎಂಬುದರ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಮಲ್ಲೇಶ್ವರದ ಮಾಲ್ ವೊಂದರಲ್ಲಿ ಹಿರಿಯ ರಕ್ಷಣಾ ಅಧಿಕಾರಿಗಳಿಂದ ತರಬೇತಿ ಪಡೆದು, ಕಪ್ಪು ಬಟ್ಟೆ ತೊಟ್ಟು ಕೈಯಲ್ಲಿ ಗನ್ ಇಟ್ಟಿಕೊಂಡು ಉಗ್ರರನ್ನು ಸದೆಬಡಿಯುವ ಕೆಲಸದಲ್ಲಿ ರಾಜ್ಯ ಗರುಡ ಪಡೆ ನಿರತರಾಗಿತ್ತು. ಅರೆರೆ ಆತಂಕಕ್ಕೆ ಒಳಗಾಗಬೇಡಿ. ಇದು ನಿಜವಾಗಿ ನಡೆದಿದ್ದಲ್ಲ. ಜನಸಂದಣಿ ಪ್ರದೇಶಗಳಲ್ಲಿ ಟೆರರಿಸ್ಟ್ ಅಟ್ಯಾಕ್ ಆದರೆ ಹೇಗೆ ಕಾರ್ಯಚರಣೆ ಮಾಡುತ್ತಾರೆ ಎಂಬ ಅಣಕು ಪ್ರದರ್ಶನ ನಡೆಸಲಾಯಿತು.
ಹಂತ ಹಂತವಾಗಿ ಅಂದರೆ ರೋಪ್ ನಿಂದ ಇಳಿದು ಗನ್ ಜೊತೆಗೆ ಒಬ್ಬರಿಂದ ಒಬ್ಬರಿಗೆ ಕಮ್ಯುನಿಕೇಷನ್ ಮಾಡಿಕೊಂಡು ಯಾವ ರೀತಿ ಟೆರೆರಿಸ್ಟ್ಗಳನ್ನು ವಶಕ್ಕೆ ಪಡೆಯುತ್ತಾರೆ ಎಂದು ತೋರಿಸಿದರು ಜೊತೆಗೆ ಶ್ವಾನಗಳನ್ನು ಹೇಗೆ ಬಳಸಲಾಗುತ್ತೆ ಎಂಬುದನ್ನು ತೋರಿಸಲಾಯಿತು.
ಈ ಬಗ್ಗೆ ರಾಜ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಮಾತನಾಡಿ, ಒಂದು ವೇಳೆ ಜನದಟ್ಟಣೆ ಪ್ರದೇಶಗಳಲ್ಲಿ ಉಗ್ರರು ಅಟ್ಯಾಕ್ ಮಾಡಿದರೆ ಹೇಗೆ ರಕ್ಷಣೆ ಮಾಡಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ಉಗ್ರರನ್ನು ಮಟ್ಟಹಾಕಬೇಕು ಎಂಬುದರ ಬಗ್ಗೆ ಗರುಡ ಪಡೆಯಿಂದ ಅಣಕು ಪ್ರದರ್ಶನ ನಡೆಸಿದ್ದೇವೆ. ಅಲ್ಲದೆ ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಯಾವ ರೀತಿ ಇರಬೇಕು ಎಂಬುದರ ಅರಿವು ಮೂಡಿಸುವ ಕೆಲಸ ಮಾಡಿದರು.