ETV Bharat / state

ಏ.1 ರಿಂದ ರಾಜ್ಯದಲ್ಲಿ ಗುಜರಿ ನೀತಿ ಜಾರಿ: 15 ವರ್ಷ ಮೀರಿದ ವಾಹನ ಮಾಲೀಕರಿಗೆ ತಾತ್ಕಾಲಿಕ ರಿಲೀಫ್!

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಗುಜರಿ ನೀತಿಯಲ್ಲಿ 15 ವರ್ಷವಾಗಿರುವ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ವಾಹನ ಮಾಲೀಕರಿಗೆ ಆಯ್ಕೆಯ ಅವಕಾಶ ನೀಡಲಾಗಿದೆ.

Etv BharatTemporary relief for vehicle owners
ಏ.1 ರಿಂದ ರಾಜ್ಯದಲ್ಲಿ ಗುಜರಿ ನೀತಿ ಜಾರಿ: 15 ವರ್ಷ ಮೀರಿದ ವಾಹನ ಮಾಲೀಕರಿಗೆ ತಾತ್ಕಾಲಿಕ ರಿಲೀಫ್!
author img

By

Published : Feb 8, 2023, 6:41 PM IST

ಬೆಂಗಳೂರು: ರಾಜ್ಯದಲ್ಲಿ 2023-24ರ ನೂತನ ಆರ್ಥಿಕ ವರ್ಷಾರಂಭದಿಂದ ಅನ್ವಯವಾಗುವಂತೆ ಗುಜರಿ ನೀತಿ ಜಾರಿಗೆ ತರಲಾಗುತ್ತಿದೆ. ಈ ನೀತಿಯಲ್ಲಿ ಕಡ್ಡಾಯ ಅಂಶವನ್ನು ಸೇರಿಸದೇ ವಾಹನಗಳ ಮಾಲೀಕರ ಆಯ್ಕೆಗೆ ಬಿಟ್ಟು ಮೊದಲ ಹಂತವಾಗಿ ಸ್ಕ್ರ್ಯಾಪಿಂಗ್ ಪಾಲಿಸಿಯನ್ನು ಜಾರಿಗೆ ತರಲಾಗುತ್ತಿದೆ. ಹಾಗಾಗಿ 15 ವರ್ಷ ತುಂಬಿದ ವಾಹನ ಮಾಲೀಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಕೇಂದ್ರದ ನೀತಿ..: ಗುಣಮಟ್ಟ ಹೊಂದಿರುವ ವಾಹನಗಳ ಎಫ್.ಸಿಗೆ ಅವಕಾಶ ಕಲ್ಪಿಸಿದ್ದು, ಹಳೆ ವಾಹನಗಳನ್ನು ಹೊಂದಿರುವ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಸರ್ಕಾರಿ ವಾಹನಗಳಿಗೆ ಈ ರಿಯಾಯಿತಿ ಅನುಮಾನವಾಗಿದ್ದು, ಬಹುತೇಕ 15 ವರ್ಷ ತುಂಬಿದ ವಾಹನಗಳು ಸ್ಕ್ರ್ಯಾಪಿಂಗ್ ಕೇಂದ್ರ ತಲುಪಲಿವೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಗುಜರಿ ನೀತಿಯಂತೆ ರಾಜ್ಯದಲ್ಲಿ 15 ವರ್ಷಕ್ಕಿಂತ ಹೆಚ್ಚು ಸವೆಸಿರುವ ವಾಹನಗಳನ್ನು ಗುಜರಿಗೆ ಸೇರಿಸುವ ಕೇಂದ್ರ ಸರ್ಕಾರದ ಗುಜರಿ ನೀತಿ ಯೋಜನೆಯನ್ನು ಕರ್ನಾಟಕದಲ್ಲಿಯೂ ಜಾರಿಗೆ ತರುವ ಬಗ್ಗೆ ಪ್ರಸ್ತಾವನೆ ಪರಿಶೀಲನೆಯಲ್ಲಿದೆ.

ರಿಯಾಯಿತಿ ಘೋಷಣೆ?: ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಗುಜರಿ ನೀತಿ ಜಾರಿಗೆ ಸರ್ಕಾರ ನಿರ್ಧರಿಸಿದ್ದು, ಕೇಂದ್ರ ಸರ್ಕಾರ ರೂಪಿಸಿರುವ 1989ರ ಕೇಂದ್ರ ಮೋಟಾರು ವಾಹನಗಳ ನಿಯಮ 51ಎ ರಲ್ಲಿನ ಅವಕಾಶದಂತೆ ಈ ಯೋಜನೆಯಲ್ಲಿ ವಾಹನ ಮಾಲೀಕರ ಪರವಾಗಿ ರಾಜ್ಯದಲ್ಲಿಯೂ ಕೆಲವು ರಿಯಾಯತಿಗಳನ್ನು ಘೋಷಿಸುವ ಬಗ್ಗೆ ಪರಿಶೀಲಿಸಲಾಗಿದೆ. ಮೊದಲ ಬಾರಿಗೆ ಈ ಗುಜರಿ ನೀತಿಯನ್ನು ಜಾರಿಗೆ ತರುತ್ತಿರುವುದರಿಂದ ಹದಿನೈದು ವರ್ಷವಾಗಿದ್ದರೂ ಸಹ ಫಿಟ್ ನೆಸ್ ಇರುವ ವಾಹನಗಳಿಗೆ ಆಗುವ ಸಮಸ್ಯೆಗಳ ಬಗ್ಗೆ ಸರ್ಕಾರ ಸ್ಪಷ್ಟತೆ ಹೊಂದಿದ್ದು, ಗುಜರಿ ನೀತಿಯನ್ನು ಕಡ್ಡಾಯಗೊಳಿಸದೆ ಮಾಲೀಕರ ಆಯ್ಕೆಗೆ ಬಿಡಲಾಗಿದೆ.

ಆತಂಕ ಬೇಡ: ಹದಿನೈದು ವರ್ಷ ಮೀರಿದ ವಾಹನಗಳ ನೋಂದಣಿಯನ್ನು ಕಡ್ಡಾಯವಾಗಿ ರದ್ದುಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದು, ಆ ಮೂಲಕ 15 ವರ್ಷವಾದ ಮತ್ತು ಸನಿಹದಲ್ಲಿರುವ ವಾಹನಗಳ ಮಾಲೀಕರಿಗೆ ಬಿಗ್ ರಿಲೀಫ್ ನೀಡಿದ್ದಾರೆ. ಹಾಗಾಗಿ ಹದಿನೈದು ವರ್ಷ ಮುಗಿದಿದ್ದರೂ ಆ ವಾಹನಗಳು ಫಿಟ್ ನೆಸ್ ಹೊಂದಿದ್ದಲ್ಲಿ ಪರವಾನಗಿ ನವೀಕರಣ ಮಾಡುವ ಪ್ರಕ್ರಿಯೆಯನ್ನು ಮುಂದುವರೆಸಲಾಗುತ್ತದೆ. ಹಾಗಾಗಿ ರಾಜ್ಯದಲ್ಲಿರುವ ಹದಿನೈದು ವರ್ಷ ಹಳೆಯ ವಾಹನ ಮಾಲೀಕರು ಆತಂಕಪಡುವ ಅಗತ್ಯವಿಲ್ಲ.

ಸದ್ಯ ಮೊದಲ ಹಂತದಲ್ಲಿ ಗುಜರಿ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಇದರ ಪ್ರಕಾರ ಹದಿನೈದು ವರ್ಷವಾಗಿರುವ ವಾಹನಗಳ ಸ್ಕ್ರ್ಯಾಪ್ ಮಾಡಲು ವಾಹನ ಮಾಲೀಕರಿಗೇ ಆಯ್ಕೆಯ ಅವಕಾಶ ನೀಡಲಾಗುತ್ತದೆ. ಈ ಅವಕಾಶ ಬಳಸಿಕೊಳ್ಳುವವರೆಗೆ ತೆರಿಗೆ ರಿಯಾಯಿತು ಸೌಲಭ್ಯವನ್ನೂ ಸರ್ಕಾರ ನೀಡುತ್ತಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಒಡೆತನದವಾದರೂ ಸರಿ ಸ್ವಯಂಪ್ರೇರಿತವಾಗಿ ವಾಹನಗಳನ್ನು ಗುಜರಿಗೆ ಹಾಕಿದರೆ ಅವರಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ. ಹೊಸ ವಾಹನ ಖರೀದಿಸುವಾಗಿ ಆ ಪ್ರಮಾಣಪತ್ರ ತೋರಿಸಿದಲ್ಲಿ ಸಾರಿಗೇತರ ವಾಹನಕ್ಕೆ 15 ವರ್ಷಗಳ ಕಾಲ ಶೇ.25 ಮತ್ತು ಸಾರಿಗೆ ವಾಹನಕ್ಕೆ 8 ವರ್ಷಗಳ ಕಾಲ ಶೇ.15 ರಷ್ಟು ತೆರಿಗೆ ವಿನಾಯಿತಿ ನೀಡಲಾಗುತ್ತದೆ ಇಂತಹ ರಿಯಾಯಿತಿ ಮೂಲಕ ವಾಹನಗಳ ಸ್ಕ್ರ್ಯಾಪ್ ಮಾಡಲು ವಾಹನ ಮಾಲೀಕರು ಮುಂದಾಗುವಂತೆ ಉತ್ತೇಜನ ನೀಡಲಿದೆ.

ಷರತ್ತುಗಳು ಅನ್ವಯ: ಆದರೆ ಗುಜರಿಗೆ ವಾಹನಗಳನ್ನು ಹಾಕಬೇಕಾದರೂ ಕೆಲವೊಂದು ಷರತ್ತುಗಳನ್ನು ವಿಧಿಸಲಾಗುತ್ತಿದೆ. ಗುಜರಿಗೆ ಹಾಕುವ ವಾಹನಗಳ ಮೇಲೆ ಕ್ರಿಮಿನಲ್ ಕೇಸ್ ಇರಬಾರದು, ಸಂಚಾರ ನಿಯಮ ಉಲ್ಲಂಘನೆಯ ದಂಡ ಬಾಕಿ ಇರಬಾರದು ಈ ಕುರಿತು ಸ್ಕ್ರಾಪಿಂಗ್ ಕೇಂದ್ರದಲ್ಲಿ ಮುಚ್ಚಳಿಕೆ ಬರೆದುಕೊಡಬೇಕಾಗಲಿದೆ. ನಂತರ ಅವರ ವಾಹನದ ಚಾಸಿ ಸಂಖ್ಯೆಯನ್ನು 6 ತಿಂಗಳ ಕಾಲ ಇಟ್ಟಿರಲಾಗುತ್ತದೆ. 2 ವರ್ಷಗಳ ಕಾಲ ಸ್ಕ್ರಾಪ್ ಆದ ವಾಹನಗಳ ಭೌತಿಕ ದಾಖಲೆ ಇರಿಸಿಕೊಳ್ಳಲಿದ್ದು, 10 ವರ್ಷದವರೆಗೂ ಡಿಜಿಟಲ್ ದಾಖಲೆಗಳ ಸಂಗ್ರಹ ಮಾಡಿಕೊಳ್ಳಲಾಗುತ್ತದೆ. ಹಾಗಾಗಿ ಸ್ಕ್ರಾಪ್ ಆದ ವಾಹನಗಳ ದಾಖಲೆಗಳ ದುರ್ಬಳಕೆಯ ಆತಂಕಪಡಬೇಕಿಲ್ಲ.

ನೂತನ ಗುಜರಿ ನೀತಿಯ ಮೊದಲ ಫಲಾನುಭವಿ ಸರ್ಕಾರವೇ ಆಗಬೇಕಾಗುತ್ತದೆ. 15 ವರ್ಷ ಮುಗಿದಿರುವ ಸರ್ಕಾರಿ ವಾಹನಗಳನ್ನು ಸ್ಕ್ರ್ಯಾಪ್‌ಗೆ ಹಾಕಲೇಬೇಕಿದೆ. ತಾನೇ ಮಾಡಿದ ನಿಯಮವನ್ನು ಪಾಲಿಸಿ ಸಾರ್ವಜನಿಕರಿಗೆ ಮಾದರಿಯಾಗಬೇಕಿರುವ ಹಿನ್ನೆಲೆಯಲ್ಲಿ ನಿಗದಿತ ಕಿಲೋಮೀಟರ್ ಸಂಚರಿಸಿರುವ ಅಥವಾ 15 ವರ್ಷ ಮುಗಿದಿರುವ ಯಾವುದು ಮೊದಲೋ ಅದರಂತೆ ಇನ್ಮುಂದೆ ಸರ್ಕಾರಿ ವಾಹನಗಳು ಸ್ಕ್ರ್ಯಾಪಿಂಗ್ ಕೇಂದ್ರಗಳ ಪಾಲಾಗಲಿವೆ.

ಸದ್ಯಕ್ಕೆ ಮೊದಲ ಹಂತದಲ್ಲಿ ವಾಹನ ಮಾಲೀಕರಲ್ಲಿ ಜಾಗೃತಿ ಮೂಡಿಸುವುದಕ್ಕೆ ಆದ್ಯತೆ ನೀಡಲಾಗಿದೆ. ನಂತರದ ದಿನಗಳಲ್ಲಿ ಹಂತಹಂತವಾಗಿ ಸ್ಕ್ರ್ಯಾಪಿಂಗ್ ಪಾಲಿಸಿಯನ್ನು ಕಡ್ಡಾಯಗೊಳಿಸುವ ಚಿಂತನೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಇದು ಅವಲಂಬಿಸಿದೆ. ಹಾಗಾಗಿ ಇನ್ನು ಕೆಲ ವರ್ಷ 15 ವರ್ಷವಾಗಿರುವ ವಾಹನಗಳ ಕಡ್ಡಾಯ ಸ್ಕ್ರ್ಯಾಪಿಂಗ್ ನಿಂದ ವಾಹನ ಮಾಲೀಕರು ಬಚಾವಾಗಿದ್ದು, ತಾತ್ಕಾಲಿಕವಾಗಿ ಗುಜರಿ ನೀತಿಯಿಂದ ರಿಲೀಫ್ ಪಡೆದುಕೊಳ್ಳುತ್ತಿದ್ದಾರೆ. ಆದರೆ ಭವಿಷ್ಯದಲ್ಲಿ 15 ವರ್ಷ ತುಂಬಿದ ವಾಹನಗಳ ನೋಂದಣಿ ಸ್ಥಗಿತದ ಆದೇಶ ತಂದಲ್ಲಿ ಆಗ ಸಂಪೂರ್ಣವಾಗಿ ಸ್ಕ್ರ್ಯಾಪಿಂಗ್ ಪಾಲಿಸಿ ಎಲ್ಲರಿಗೂ ಅನ್ವಯವಾಗಲಿದೆ ಅಲ್ಲಿಯವರೆಗೂ ವಾಹನ ಮಾಲೀಕರು ನಿರಾತಂಕವಾಗಿ ಫಿಟ್‌ನೆಸ್ ಇರುವ ವಾಹನಗಳನ್ನು ರಸ್ತೆಗಿಳಿಸಬಹುದು.

ಇದನ್ನೂ ಓದಿ: ಏರ್ ಶೋ: ಯಲಹಂಕ ವಾಯುನೆಲೆಯಲ್ಲಿ ಉಕ್ಕಿನ ಹಕ್ಕಿಗಳ ತಾಲೀಮು- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.