ಬೆಂಗಳೂರು: ನಾವು ನಮ್ಮ ಕನ್ನಡ ಭಾಷೆಯನ್ನು ಯಾವತ್ತಿಗೂ ಬಿಟ್ಟು ಕೊಡಬಾರದು, ಬಿಟ್ಟು ಕೊಡೋದು ಇಲ್ಲ ಅಂತ ಕಿರುತೆರೆ ನಟಿ ಶರಣ್ಯ ಶೆಟ್ಟಿ ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವದ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸಂವಹನದ ಕಾರಣಕ್ಕಾಗಿ ಬೇರೆ ಭಾಷೆಗಳನ್ನು ಕಲಿಯಬೇಕು. ನಾವು ಮತ್ತೊಂದು ರಾಜ್ಯಕ್ಕೆ ಹೋದಾಗ ಭಾಷಾ ಜ್ಞಾನ ಗೊತ್ತಿರಬೇಕು. ಹಾಗಂತ ನಮ್ಮ ಭಾಷೆಯನ್ನು ಬಿಟ್ಟುಕೊಟ್ಟು ಬೇರೆ ಭಾಷೆ ಬಳಕೆ ಮಾಡೋದು ಸರಿಯಲ್ಲ.
ಕನ್ನಡವನ್ನು ನಾವಷ್ಟೇ ಮಾತಾಡಿದರೆ ಸಾಲದು, ಬದಲಿಗೆ ಬೇರೆ ರಾಜ್ಯದಿಂದ ಬಂದವರು ಸಹ ನಮ್ಮ ಭಾಷೆಯನ್ನ ಮಾತಾಡಬೇಕು. ಅವರಿಗೂ ಕನ್ನಡವನ್ನ ಕಲಿಸಬೇಕು. ಅನ್ಯ ರಾಜ್ಯಕ್ಕೆ ಹೋದರೆ ಬದುಕೋಕೆ ಹೇಗೆ ಅಲ್ಲಿನ ಭಾಷೆ ಕಲಿಯುತ್ತೇವೆಯೋ, ಅಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣ ಮಾಡಬೇಕು. ನಾವು ಬೇರೆ ಭಾಷೆಯನ್ನೂ ಕಲಿಯೋಣ. ಆದರೆ, ನಮ್ಮ ಭಾಷೆಯನ್ನು ಉಳಿಸೋಣ ಎಂದರು ಕರೆ ನೀಡಿದರು.