ETV Bharat / state

ಪಠ್ಯದ ಜೊತೆಗೆ ಮಾನವೀಯ ಮೌಲ್ಯ ಕಲಿಸುವುದು ನಿಜವಾದ ಶಿಕ್ಷಣ: ಸುಧಾಮೂರ್ತಿ - ಮೌಲ್ಯಾಧಾರಿತ ಶಿಕ್ಷಣ ಪ್ರಯೋಗಾಲಯ

ಪಠ್ಯಕ್ರಮ ಜೀವನದ ಭಾಗವೇ ಹೊರತು, ಅದೆ ಇಡೀ ಜೀವನವಲ್ಲ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಹೇಳಿದರು.

teaching-human-values-along-with-text-is-real-education-sudha-murthy
ಪಠ್ಯದ ಜೊತೆಗೆ ಮಾನವೀಯ ಮೌಲ್ಯ ಕಲಿಸುವುದು ನಿಜವಾದ ಶಿಕ್ಷಣ: ಸುಧಾಮೂರ್ತಿ
author img

By

Published : Nov 2, 2022, 10:28 PM IST

ಬೆಂಗಳೂರು: ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಷ್ಟೇ ಅಲ್ಲ. ಶಿಕ್ಷಣ ಎಂದರೆ ಹೆಚ್ಚಿನ ಅಂಕಗಳಿಸುವುದಷ್ಟೇ ಅಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳಾದ ಆತ್ಮವಿಶ್ವಾಸ, ಮನೋಬಲ, ಸಮಸ್ಯೆಗಳನ್ನು ನಿಭಾಯಿಸುವುದಕ್ಕಿಂತ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ವಿನಯವನ್ನು ಕಲಿಸುವುದಾಗಿದೆ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ತಿಳಿಸಿದರು.

ಬೆಂಗಳೂರಿನ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿನ ನೂತನ ಮೌಲ್ಯಾಧಾರಿತ ಶಿಕ್ಷಣ ಪ್ರಯೋಗಾಲಯ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂಲತಃ ನಾನು ಶಿಕ್ಷಕಿಯಾಗಿದ್ದು, ಶಿಕ್ಷಕರ ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇನೆ. ನನ್ನ ತಂದೆ ಪ್ರೊಫೆಸರ್ ಆಗಿದ್ದರು. ನನ್ನ ತಾತ ಶಾಲಾ ಶಿಕ್ಷಕರಾಗಿದ್ದರು, ತಾಯಿ ಕೂಡ ಶಾಲಾ ಶಿಕ್ಷಕಿ ಆಗಿದ್ದರು. ನನ್ನ ಸಹೋದರಿಯರು ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್​. ಹೀಗಾಗಿ ನನ್ನನ್ನು ಹೊಸ ಆಲೋಚನೆಗಳು ಆಕರ್ಷಿಸುತ್ತವೆ ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಪೋಷಕರಿಂದ ಒತ್ತಡ ಹೆಚ್ಚುತ್ತಿದೆ. ಪಕ್ಕದ ಮನೆ ಹುಡುಗೆ ಶೇ.99 ಅಂಕ ಪಡೆದಿದ್ದು, ನೀನು ಅಷ್ಟೇ ಗಳಿಸಬೇಕು ಎನ್ನುತ್ತಾರೆ. ಇದು ಮಕ್ಕಳಿಗೆ ಹೇಳಬಹುದಾದ ಅತ್ಯಂತ ಕೆಟ್ಟ ವಿಧಾನದ ಬೋಧನೆ. ಪಠ್ಯಕ್ರಮ ಜೀವನದ ಭಾಗವೇ ಹೊರತು, ಅದೇ ಇಡೀ ಜೀವನವಲ್ಲ. ನೀವು ಉತ್ತಮ ಹಾಗೂ ಸಂತೋಷದ ಜೀವನ ಸಾಗಿಸಬೇಕಾದರೆ, ಪಠ್ಯಕ್ರಮದ ಜೊತೆಗೆ ಬೇರೆ ವಿಷಯಗಳ ಬಗ್ಗೆಯೂ ಗಮನ ಹರಿಸಬೇಕು. ಅಂಕಗಳೇ ಸರ್ವಸ್ವ ಎಂದು ಭಾವಿಸಬಾರದು ಎಂದರು.

ಮಕ್ಕಳ ಕಲೆ, ಕೌಶಲ್ಯವನ್ನು ಗುರುತಿಸಿ: ಇಂದಿನ ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಲ್ಲ. ಏಕೆಂದರೆ ಇಂದಿನ ದಿನಗಳಲ್ಲಿ ಮಕ್ಕಳು ಗೂಗಲ್​ನಲ್ಲೇ ಆ ವಿಚಾರಗಳನ್ನು ಕಲಿಯುತ್ತಾರೆ. ಈಗಿನ ಮಕ್ಕಳು ಬಹಳ ಬುದ್ಧಿವಂತರಿದ್ದು, ಪಾಠ ಮಾಡುವ ಮುನ್ನ ಬೋಧಕರು ಉತ್ತಮ ತಯಾರಿ ಮಾಡಿಕೊಳ್ಳಬೇಕು. ಮಕ್ಕಳಿಗೆ ತಂದೆ ತಾಯಿ, ಶಿಕ್ಷಕರು, ಸಹಪಾಠಿ, ಸಹೋದ್ಯೋಗಿಗಳ ಜೊತೆಗೆ ಉತ್ತಮ ಸಂಬಂಧ ಹೊಂದುವುದನ್ನು ಕಲಿಸುವುದು ಬಹಳ ಮುಖ್ಯ ಎಂದು ಹೇಳಿದರು.

ಪ್ರತಿ ಮಗುವು ವಿಭಿನ್ನ ವಿಚಾರದಲ್ಲಿ ಆಸಕ್ತಿ ಹಾಗೂ ಕೌಶಲ್ಯ ಹೊಂದಿರುತ್ತದೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಕಲೆ, ಕೌಶಲ್ಯ ಗುರುತಿಸಿ ಗೌರವಿಸಬೇಕು. ಕೇವಲ ಅವರ ಅಂಕಗಳ ಬಗ್ಗೆ ಮಾತ್ರ ಗಮನ ಹರಿಸಬಾರದು. ಆ ಮೂಲಕ ಮಕ್ಕಳನ್ನು ಅವರ ಆಸಕ್ತಿ ವಿಚಾರದಲ್ಲಿ ಮೇಲೆತ್ತಬೇಕು. ನಾನು ಹಳ್ಳಿಯ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದೆ. ಹಳ್ಳಿ ಮಕ್ಕಳಿಗೆ ಧೈರ್ಯ ಜಾಸ್ತಿ ಎಂದು ಹೇಳಿದರು.

ನಡೆದು ಬಂದ ದಾರಿಯನ್ನು ಮರೆಯಬಾರದು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಇಂದು ನನ್ನ ಜೀವನದಲ್ಲಿ ಅತ್ಯಂತ ಮುಖ್ಯವಾದ ದಿನ. ನಿನ್ನೆ ಎಂಬುದು ಇತಿಹಾಸ, ನಾಳೆ ಎಂಬುದು ಭವಿಷ್ಯ. ಆದರೆ, ಇಂದು ಎಂಬುದು ಬಹಳ ಮುಖ್ಯ. 23 ವರ್ಷಗಳ ನನ್ನ ಶಿಕ್ಷಣ ಕ್ಷೇತ್ರದ ಅನುಭವದಲ್ಲಿ ಸುಧಾಮೂರ್ತಿ ಮಾತುಗಳು ನಾನು ಕೇಳಿದ ಅತ್ತ್ಯುತ್ತಮ ಭಾಷಣವಾಗಿತ್ತು. ಸೌಂದರ್ಯಕ್ಕಿಂತ ನಮ್ರತೆ ಹೆಚ್ಚು ಮೋಡಿ ಮಾಡುತ್ತದೆ. ಅದೇ ರೀತಿ ಇಂದು ಸುಧಾಮೂರ್ತಿ ಅವರ ನಮ್ರತೆ, ಅವರ ಮಾತುಗಳು ಇಂದು ಎಲ್ಲರನ್ನು ಮೋಡಿ ಮಾಡಿದೆ ಎಂದರು.

ಮಕ್ಕಳು ನಿಮ್ಮಲ್ಲಿರುವ ಪ್ರತಿಭೆ, ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕು, ಬೇರೆಯವರ ಬಗ್ಗೆ ಕಾಳಜಿ ಹೊಂದಿರಬೇಕು. ನೀವು ನಡೆದು ಬಂದ ದಾರಿ ಮರೆಯಬಾರದು. ನಿಮ್ಮ ಬೆಳವಣಿಗೆಗೆ ಸಹಕಾರಿಯಾದವರನ್ನು ಎಂದಿಗೂ ಮರೆಯಬಾರದು. ನಿಮಗೆ ಯಾರೆಲ್ಲ ಬೆಂಬಲವಾಗಿ ನಿಂತು ಸಹಾಯ ಮಾಡಿರುತ್ತಾರೋ ಅವರಿಗೆ ನೀವು ಚಿರ ಋಣಿಯಾಗಿರಬೇಕು. ಇದು ನಿಮ್ಮ ಜೀವನದ ಚಿತ್ರಣವನ್ನೇ ಬದಲಿಸಲಿದೆ ಎಂದು ಹೇಳಿದರು.

ಐಶ್ವರ್ಯ ಡಿಕೆಎಸ್ ಹೆಗ್ಡೆ ಮಾತನಾಡಿ, ಮೂರು ವರ್ಷಗಳ ಹಿಂದೆ ಮೌಲ್ಯಾಧಾರಿತ ಶಿಕ್ಷಣದ ಆಲೋಚನೆ ಆರಂಭವಾಯಿತು. ನಮ್ಮ ಪ್ರಾಂಶುಪಾಲರು ಹಾಗೂ ಶಿಕ್ಷಕರ ತಂಡದ ಪರಿಶ್ರಮದೊಂದಿಗೆ ಈ ಪ್ರಯೋಗಾಲಯ ಜೀವ ತಾಳಿದೆ. ಆವಿಷ್ಕಾರಿ ಆಲೋಚನೆ ಮೂಲಕ ಈ ಮೌಲ್ಯಾಧಾರಿತ ಶಿಕ್ಷಣದ ಪ್ರಯೋಗಾಲಯಕ್ಕೆ ದಾರಿ ಮಾಡಿಕೊಟ್ಟಿತು. 5 ವರ್ಷಗಳ ಈ ಶಿಕ್ಷಣದ ಪಯಣದಲ್ಲಿ ಮನಸ್ಥಿತಿ ವಿಕಸನ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ಆತ್ಮವಿಶ್ವಾಸ, ಉಪಕಾರ ಸ್ಮರಣೆ, ಕ್ಷಮಾಶೀಲತೆ ಕಲಿಸಲಾಗುವುದು ಎಂದರು.

ಇದನ್ನೂ ಓದಿ: ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ಹೇಳಿದ ಇಂಗ್ಲೆಂಡ್ ಪ್ರವಾಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.