ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡ 104 ಜನರಲ್ಲಿ ಕ್ಷಯರೋಗ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಆಗಸ್ಟ್ 16ರಿಂದ ಆಗಸ್ಟ್ 29ರ ಅವಧಿಯಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಮತ್ತು ಸಂಪರ್ಕದಲ್ಲಿರುವವರ ಮನೆಗಳಿಗೆ ತೆರಳಿ ಕ್ಷಯ ರೋಗ ಪತ್ತೆ ಮಾಡುವ ಅಭಿಯಾನ ಹಮ್ಮಿಕೊಂಡಿತ್ತು.

ಕೋವಿಡ್‌ನಿಂದ ಚೇತರಿಸಿಕೊಂಡ 5,37,333 ಜನರನ್ನು ಕ್ಷಯ ರೋಗ ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ 104 ಜನರಲ್ಲಿ ಕ್ಷಯರೋಗ ಪತ್ತೆಯಾಗಿದೆ. ಇದೇ ವೇಳೆ ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಮನೆಯ ಸಂಪರ್ಕದಲ್ಲಿರುವ 51 ಜನರಲ್ಲಿ ಕ್ಷಯ ರೋಗ ಕಂಡು ಬಂದಿದೆ.

ಒಟ್ಟು 24,598 ಜನರಲ್ಲಿ ಕ್ಷಯ ರೋಗ ಇರುವ ಬಗ್ಗೆ ಶಂಕಿಸಲಾಗಿತ್ತು. ಈ ವೇಳೆ ರೋಗ ತಪಾಸಣೆಗಾಗಿ 17,74,240 ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಮನೆಯ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಲಾಗಿತ್ತು ಎಂದು ಇಲಾಖೆ ತಿಳಿಸಿದೆ.
ಕ್ಷಯ ರೋಗವು ಕೋವಿಡ್ ಸೋಂಕಿತರಲ್ಲಿ ಹೆಚ್ಚಿನ ಅಪಾಯ ಉಂಟು ಮಾಡುವುದರಿಂದ, ಸರ್ಕಾರ ಕೋವಿಡ್‌ನಿಂದ ಚೇತರಿಸಿಕೊಂಡವರ ಕ್ಷಯ ರೋಗ ಪತ್ತೆ ಅಭಿಯಾನ ಹಮ್ಮಿಕೊಂಡಿದೆ.