ETV Bharat / state

'ಉತ್ತರ ಪತ್ರಿಕೆಗಳ ಸ್ಕ್ಯಾಮ್ ಹಾಗೂ ವಿವಿಯ ಭೂ ಒತ್ತುವರಿ ಪ್ರಕರಣ ಸಿಐಡಿಗೆ ನೀಡಿ' - ಬೆಂಗಳೂರು ವಿಶ್ವವಿದ್ಯಾಲಯ

ಕೋವಿಡ್ ಕಾರಣಕ್ಕೆ ಆನ್ ಲೈನ್‌‌ನಲ್ಲಿ ನಡೆಯುತ್ತಿದ್ದ ಸಭೆಯನ್ನು 6 ತಿಂಗಳ ಬಳಿಕ ಇಂದು ಆಫ್​ಲೈನ್​ನಲ್ಲಿ ನಡೆಸಲಾಯಿತು. ಬರೋಬ್ಬರಿ 60ಕ್ಕೂ ಹೆಚ್ಚು ಅಜೆಂಡಾಗಳನ್ನ‌ ಇಟ್ಟುಕೊಂಡು ನಡೆದ ಸಭೆಯಲ್ಲಿ ಮಹತ್ವದ ವಿಚಾರಗಳ ಚರ್ಚೆ ನಡೆಸಲಾಯಿತು.

Bangalore University
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ಸದಸ್ಯರ ಸಭೆ
author img

By

Published : Jan 5, 2021, 7:29 PM IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಉತ್ತರ ಪತ್ರಿಕೆ ಹಗರಣ ವಿಚಾರ ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಹೆಚ್ಚು ಚರ್ಚಿತ ವಿಷಯವಾಗಿತ್ತು. ಕೋವಿಡ್ ಕಾರಣಕ್ಕೆ ಆನ್ ಲೈನ್‌‌ನಲ್ಲಿ ನಡೆಯುತ್ತಿದ್ದ ಸಭೆಯನ್ನು 6 ತಿಂಗಳ ಬಳಿಕ ಇಂದು ಆಫ್​ಲೈನ್​ನಲ್ಲಿ ನಡೆಸಲಾಯಿತು. ಬರೋಬ್ಬರಿ 60ಕ್ಕೂ ಹೆಚ್ಚು ಅಜೆಂಡಾಗಳನ್ನ‌ ಇಟ್ಟುಕೊಂಡು ನಡೆದ ಸಭೆಯಲ್ಲಿ ಹೆಚ್ಚು ಚರ್ಚೆಗೆ ಒಳಗಾದ ವಿಷಯವಾಗಿದ್ದು ಉತ್ತರ ಪತ್ರಿಕೆಗಳ ಸ್ಕ್ಯಾಮ್ ಹಾಗೂ ವಿವಿಯ ಭೂ ಒತ್ತುವರಿ ವಿಚಾರ.

ಉತ್ತರ ಪತ್ರಿಕೆಗಳ ಸ್ಕ್ಯಾಮ್ ಹಾಗೂ ವಿವಿಯ ಭೂ ಒತ್ತುವರಿ ವಿಚಾರ: ಸಿಐಡಿ ತನಿಖೆಗೆ ನೀಡುವಂತೆ ಬೆಂ.ವಿವಿ ಸಿಂಡಿಕೇಟ್ ಸದಸ್ಯರ ಒತ್ತಾಯ

2020ರ ಸೆಪ್ಟೆಂಬರ್​-ಅಕ್ಟೋಬರ್​​ನಲ್ಲಿ ನಡೆದ ಪದವಿ ಪರೀಕ್ಷೆಗಳಲ್ಲಿ 804 ಉತ್ತರ ಪತ್ರಿಕೆಗಳಲ್ಲಿನ ಅಂಕಗಳನ್ನು ತಿರುಚಿ ಮೋಸ ಮಾಡಲಾಗಿತ್ತು. ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡುವ ಗುತ್ತಿಗೆ ಪಡೆದಿದ್ದ ಟಿ.ಆರ್.ಎಸ್.ಫಾರಂ ಆ್ಯಂಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಈ ಕೃತ್ಯ ಜರುಗಿತ್ತು. ಮಹಾ ಮೋಸದ ವಿರುದ್ಧ ತನಿಖೆಗೆ ವಿವಿ ಕುಲಸಚಿವೆ ಕೆ.ಜ್ಯೋತಿ ಆಗ್ರಹಿಸಿ, ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು.‌ ವಿವಿಯ ಕಂಪ್ಯೂಟರ್ ವಿಭಾಗದ ಪ್ರೋಗ್ರಾಮರ್ಸ್, ಶಿಕ್ಷಾಣಧಿಕಾರಿಗಳು, ಕೆಲ ವಿದ್ಯಾರ್ಥಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ದೂರು ಅವರು ದಾಖಲಿಸಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಂಡಿಕೇಟ್ ಸದಸ್ಯ ಪ್ರೇಮ್, ಇಂದಿನ ಸಭೆಯಲ್ಲಿ ಹೆಚ್ಚು ಚರ್ಚಿತ ವಿಷ್ಯವಾಗಿರುವುದು ಮಾರ್ಕ್ಸ್ ಕಾರ್ಡ್ ಸ್ಕ್ಯಾಮ್. 804 ಜನರ ಉತ್ತರ ಪತ್ರಿಕೆಗಳಲ್ಲಿನ ಅಂಕಗಳನ್ನು ತಿದ್ದಲಾಗಿದೆ. ರಿಜಿಸ್ಟ್ರಾರ್​​ ಕೂಡಾ ಅಧಿಕೃತವಾಗಿ ದೂರು ನೀಡಿದ್ದಾರೆ. ಅದರ ತನಿಖೆಯಾಗಬೇಕು ಎಂದು ಚರ್ಚೆ ನಡೆಯುತ್ತಿದೆ. ಆದರೆ ಈ ಸಂಬಂಧ ಯಾವುದೇ ನಿರ್ಣಯಗಳನ್ನು ಕೈಗೊಂಡಿಲ್ಲ. ಇದರ ಈ ಹಿಂದೆ ಯಾರ ಕೈವಾಡ ಇದೆ ಎಂಬುದನ್ನ ತಿಳಿಯಲು ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಲಾಯಿತು ಎಂದು ತಿಳಿಸಿದರು.

200-300 ಎಕರೆ ಭೂ ಒತ್ತುವರಿ: ಟಾರ್ಸ್ಕ್ ಪೋರ್ಸ್ ನೇಮಕಕ್ಕೆ ಒತ್ತಾಯ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 242 ಎಕರೆಯಷ್ಟು ಭೂಮಿ ಒತ್ತುವರಿಗೆಯಾಗಿರುವ ಸಂಬಂಧವೂ ಸಿಂಡಿಕೇಟ್ ಸಭೆಯಲ್ಲಿ ಚರ್ಚೆಯಾಯಿತು. ವಿವಿಯ 1300 ಎಕರೆ ವಿಸ್ತರಣವೂ 200-300 ಎಕರೆ ಜಾಗ ಒತ್ತುವರಿಯಾಗಿದ್ದು, ಅದಕ್ಕೆ ಕಾಂಪೌಂಡ್ ಹಾಕಲು ತಕ್ಷಣಕ್ಕೆ ಬೇಕಿರುವ ಟಾರ್ಸ್ಕ್ ಪೋರ್ಸ್ ನೇಮಕ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ ಎಂದು ಸಿಂಡಿಕೇಟ್​ ಸದಸ್ಯ ಪ್ರೇಮ್ ತಿಳಿಸಿದರು.

ಕುಲಸಚಿವರು- ಕುಲಪತಿಗಳ ಶೀತಲ ಸಮರ:

ಕುಲಸಚಿವೆ ಜ್ಯೋತಿ ಹಾಗೂ ಕುಲಪತಿ ಕೆ. ಆರ್. ವೇಣುಗೋಪಾಲ್ ನಡುವಿನ‌ ಕಿತ್ತಾಟದಿಂದ ವಿವಿಯ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದ್ದವು.‌ ಹೀಗಾಗಿ ಇಂದಿನ ಸಿಂಡಿಕೇಟ್ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಾಯಕಕ್ಕೂ ಇದು ಸಮಸ್ಯೆ ಆಗಿತ್ತು. ‌ಈ ಬಗ್ಗೆ ಪ್ರತಿಕ್ರಿಯಿಸಿದ ಸಿಂಡಿಕೇಟ್ ಸದಸ್ಯ ಸುಧಾಕರ್, ಸಿಂಡಿಕೇಟ್ ಸಭೆಯಲ್ಲಿ ನಾವು ಗಮನಿಸಿದ್ದಂತೆ ಅಂತಹ ವಾತಾವರಣ ಇರಲಿಲ್ಲ. ಇಬ್ಬರು ಹೊಂದಾಣಿಕೆಯಿಂದ ನಡೆದುಕೊಂಡಿದ್ದು, ನಮ್ಮೆಲ್ಲರಿಗೂ ಖುಷಿ ತಂದಿದೆ ಎಂದರು.

60 ಅಜೆಂಡಾ ಇಟ್ಟುಕೊಂಡಿದ್ದು ಸಿಂಡಿಕೇಟ್ ಸಭೆ ನಡೆಯುತ್ತಿದ್ದು, ಇದರಲ್ಲಿ ಮಾರ್ಕ್ಸ್ ಕಾರ್ಡ್ ಸ್ಕ್ಯಾಮ್ ಹಾಗೂ ಭೂ ಕಬಳಿಕೆ, ಸಿಬ್ಬಂದಿಗಳ ಮುಷ್ಕರ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಉಳಿದಂತೆ ಎರಡು ವರ್ಷದಿಂದ ನಿಂತು ಹೋಗಿರುವ ವಿವಿಯ ಘಟಿಕೋತ್ಸವದ ಕುರಿತು ಇನ್ನು 15 ದಿನದೊಳಗೆ ನಿರ್ಣಯ ತೆಗೆದುಕೊಳ್ಳುವುದಾಗಿ ಕುಲಪತಿಗಳು ಭರವಸೆ ನೀಡಿದ್ದಾರೆ ಎಂದು ಸಿಂಡಿಕೇಟ್​ ಸದಸ್ಯರು ತಿಳಿಸಿದರು.

ಲಿಗಲ್ ಸೆಲ್ ಬಗ್ಗೆ ಮಾಹಿತಿ ನೀಡಲಿ-ಗೋವಿಂದ್ ರಾಜ್:

ಸಿಂಡಿಕೇಟ್ ಸಭೆಯಲ್ಲಿ ಲೀಗಲ್ ಸೆಲ್ ವಿಚಾರವಾಗಿ ವರದಿಯನ್ನ ನೀಡುವಂತೆ ಒತ್ತಾಯ ಮಾಡಲಾಗುತ್ತಿದೆ. ಬೆಂಗಳೂರು ವಿವಿಯ ವಿಚಾರವಾಗಿ ಎಷ್ಟು ದೂರುಗಳಿವೆ? ಎಂಬ ಲೀಗಲ್ ಸೆಲ್ ವಿಚಾರಗಳ ವರದಿಯನ್ನು ಪ್ರತಿ ತಿಂಗಳು ನೀಡಿದರೆ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಿಂಡಿಕೇಟ್ ಸದಸ್ಯ ಗೋವಿಂದ್ ರಾಜ್ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.