ETV Bharat / state

ಕರ್ನಾಟಕದ ಮುಡಿಗೆ ಕೇಂದ್ರದ “ಸ್ವಚ್ಛ ಸರ್ವೇಕ್ಷಣಾ-2021" ಪ್ರಶಸ್ತಿ.. - ಸಚಿವ ಬೈರತಿ ಬಸವರಾಜ್​

ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕೊಡಮಾಡುವ “ಸ್ವಚ್ಛ ಸರ್ವೇಕ್ಷಣಾ-2021''(swachh survekshan 2021 award) ಪ್ರಶಸ್ತಿಗಳನ್ನು ಕರ್ನಾಟಕ ಮುಡಿಗೇರಿಸಿಕೊಂಡಿದೆ.

swachh survekshan 2021 award for Karnataka
ಪ್ರಶಸ್ತಿ ಸ್ವೀಕಾರ ಮಾಡಿದ ಸಚಿವ ಬೈರತಿ ಬಸವರಾಜ್​
author img

By

Published : Nov 20, 2021, 5:41 PM IST

ಬೆಂಗಳೂರು/ನವದೆಹಲಿ: ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕೊಡಮಾಡುವ “ಸ್ವಚ್ಛ ಸರ್ವೇಕ್ಷಣಾ-2021"ದ(swachh survekshan award- 2021)ಹಲವಾರು ಪ್ರಶಸ್ತಿಗಳನ್ನು ಕರ್ನಾಟಕ ರಾಜ್ಯ ತನ್ನದಾಗಿಸಿಕೊಂಡಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ “ಸ್ವಚ್ಛ ಸರ್ವೇಕ್ಷಣಾ 2021" ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ (ಬೈರತಿ) ಸ್ವೀಕರಿಸಿದರು.

swachh survekshan 2021 award for Karnataka
ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಸಚಿವ ಬೈರತಿ ಬಸವರಾಜ್​

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ವ್ಯವಹಾರಗಳ ಸಚಿವ ಹರ್ದೀಪ್​ ಸಿಂಗ್ ಪುರಿ, ರಾಜ್ಯ ಸಚಿವ ಕೌಶಲ್ ಕಿಶೋರ್ ಪ್ರಶಸ್ತಿ ಪ್ರದಾನ ಮಾಡಿದರು.

"ಕಸಮುಕ್ತ ನಗರದ" ವರ್ಗದ ಅಡಿಯಲ್ಲಿ ಮೈಸೂರು ನಗರ ಪ್ರಥಮ ಪ್ರಶಸ್ತಿಯನ್ನು ಮತ್ತೊಮ್ಮ ಮುಡಿಗೇರಿಸಿಕೊಂಡಿದೆ. ದೇಶದಲ್ಲಿರುವ 4360 ನಗರಗಳ ಸ್ಥಿತಿಗತಿಗಳನ್ನು ಅಳೆಯಲು ಹಲವಾರು ಮಾನದಂಡಗಳನ್ನು ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರೂಪಿಸಿದ್ದು, ಅದರಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದ್ದು, ಹೆಚ್ಚು ಮನ್ನಣೆಗೆ ಪಾತ್ರವಾಗಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮ

ಕಸಮುಕ್ತ ನಗರದ ವರ್ಗದಲ್ಲಿ 1,3 ಮತ್ತು 5 ಸ್ಟಾರ್​​ ಶ್ರೇಯಾಂಕದಲ್ಲಿ ನಮ್ಮ ರಾಜ್ಯದ ಸಾಂಸ್ಕೃತಿಕ ನಗರಿ, ಅರಮನೆ ನಗರಿ ಎಂದು ಖ್ಯಾತಿ ಪಡೆದಿರುವ ಮೈಸೂರು(Mysore) ಮಹಾನಗರಕ್ಕೆ 5 ಸ್ಟಾರ್​​ ಶ್ರೇಯಾಂಕ ಲಭಿಸಿ, ದೇಶದಲ್ಲಿಯೇ ನಂ.1 ಕಸಮುಕ್ತ ನಗರ ಎನಿಸಿದೆ.

ಇದನ್ನೂ ಓದಿ:ಸ್ವಚ್ಛ ಸರ್ವೇಕ್ಷಣ-2021 ಪ್ರಶಸ್ತಿ ಪ್ರದಾನ..ಮೈಸೂರಿಗೆ''5 ಸ್ಟಾರ್​ ರ‍್ಯಾಂಕಿಂಗ್ '' ಪಟ್ಟ

ದಕ್ಷಿಣ ವಲಯದ ಸ್ವಚ್ಛ ನಗರ ಎಂದು ಹೊಸದುರ್ಗ ಪುರಸಭೆಗೆ ಪ್ರಶಸ್ತಿ ಲಭಿಸಿದೆ. ಸಾರ್ವಜನಿಕರ ಉತ್ತಮ ಪ್ರತಿಕ್ರಿಯೆ ಪ್ರಶಸ್ತಿಗೆ ಪಿರಿಯಾಪಟ್ಟಣ ಪುರಸಭೆ ಮತ್ತು ಕೆ.ಆರ್‌. ನಗರ ನಗರಸಭೆ ಪಾತ್ರವಾಗಿದೆ. ಹೀಗೆ ಒಟ್ಟು ಕರ್ನಾಟಕ ರಾಜ್ಯ 14 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಪ್ರಶಸ್ತಿಗಳ ವಿವರ ಈ ಕೆಳಗಿನಂತಿದೆ:

ಸ್ವಚ್ಛ ಸರ್ವೇಕ್ಷಣ-2021 ಪ್ರಶಸ್ತಿಗಳು: 1) ಹೊಸದುರ್ಗ 2) ಕೆ.ಆರ್. ನಗರ 3) ಪಿರಿಯಾಪಟ್ಟಣ 4) ಬೃಹತ್ ಬೆಂಗಳೂರು 5) ಹುಬ್ಬಳ್ಳಿ-ಧಾರವಾಡ 6) ಮೈಸೂರು 7) ಮುಧೋಳ 8) ಕುಮಟಾ

ಕಸ ಮುಕ್ತ ನಗರ-2021 ಪಶಸ್ತಿಗಳು: 1) ಮೈಸೂರು (5 ಸ್ಟಾರ್​ ರೇಟಿಂಗ್) 2) ಹುಬ್ಬಳ್ಳಿ-ಧಾರವಾಡ 3) ತುಮಕೂರು

ಸಫಾಯಿ ಮಿತ್ರ ಸುರಕ್ಷಾ ಚಾಲೆಂಜ್-2021 ಪ್ರಶಸ್ತಿಗಳು: 1) ಮೈಸೂರು

ಸಫಾಯಿ ಮಿತ್ರ ಸಮವಸ್ತ್ರ ಸ್ಪರ್ಧೆ-2021 ಪ್ರಶಸ್ತಿಗಳು: 1) ಮೈಸೂರು

2016 ರಲ್ಲಿ 75 ನಗರಗಳ ಸರ್ವೆ ನಡೆಸುವ ಮೂಲಕ ಆರಂಭವಾದ ಈ ಕಾರ್ಯ ದೇಶದ 4360 ನಗರಗಳಿಗೆ ಈಗ ವಿಸ್ತಾರಗೊಂಡಿದೆ. ನಗರಗಳ ನೈರ್ಮಲ್ಯೀಕರಣಕ್ಕೆ ಹೆಚ್ಚು ಒತ್ತು ನೀಡಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುತ್ತಿರುವ ವಿಶ್ವದಲ್ಲಿಯೇ ಬಹು ದೊಡ್ಡ ಸರ್ವೆ ಕಾರ್ಯ ಇದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.