ETV Bharat / state

ಕಾಲಿಗೆ ಸರಪಳಿ, ಬೀಗ ಹಾಕಿದ ವ್ಯಕ್ತಿಯಿಂದ ಸಂಚಾರ: ಸಾರ್ವಜನಿಕರಲ್ಲಿ ಆತಂಕ - ಮಾನಸಿಕ ಅಸ್ವಸ್ಥ

ಬೆಂಗಳೂರಿನ ಬಿಇಎಲ್ ಸರ್ಕಲ್ ಬಳಿ ಕಾಲಿಗೆ ಸರಪಳಿ ಹಾಗೂ ಬೀಗ ಜಡಿದ ವ್ಯಕ್ತಿಯೊಬ್ಬ ಓಡಾಡುತ್ತಿದ್ದ ದೃಶ್ಯ ಕಂಡು ಬಂದಿದ್ದು, ಸಾರ್ವಜನಿಕರು ಭಯಗೊಂಡಿದ್ದಾರೆ.

suspicious person detected in bangalore
ಕಾಲಿಗೆ ಸರಪಳಿ ಬೀಗ ಹಾಕಿದ ವ್ಯಕ್ತಿಯಿಂದ ಸಂಚಾರ
author img

By

Published : Aug 1, 2020, 3:31 PM IST

ಬೆಂಗಳೂರು: ಕಾಲಿಗೆ ಸರಪಳಿ ಹಾಗೂ ಬೀಗ ಜಡಿದ ವ್ಯಕ್ತಿಯೊಬ್ಬ ಬಿಇಎಲ್ ಸರ್ಕಲ್ ಬಳಿ ನಿಧಾನಕ್ಕೆ ಓಡಾಡುತ್ತಿದ್ದ ದೃಶ್ಯ ಕಂಡು ಬಂದಿದ್ದು, ಸಾರ್ವಜನಿಕರು ಭಯಗೊಂಡಿದ್ದಾರೆ.

ಯಾರೋ ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಫೋನ್ ಮಾಡಿ ತಿಳಿಸಿದ್ದು, ಸಿವಿಲ್ ಡಿಫೆನ್ಸ್ ತಂಡ ತಕ್ಷಣವೇ ಸ್ಥಳಕ್ಕೆ ತೆರಳಿದ್ದಾರೆ. ವ್ಯಕ್ತಿಯನ್ನು ಸುತ್ತಮುತ್ತ ಹುಡುಕಲು ಸಾಧ್ಯವಾಗದೇ ಇದ್ದಾಗ, ಜಾಲಹಳ್ಳಿ ಪೊಲೀಸ್ ಸ್ಟೇಷನ್​​ಗೂ ಮಾಹಿತಿ ನೀಡಿ, ಪೊಲೀಸರು ಹುಡುಕಾಡಿದ್ದಾರೆ.

ಕಾಲಿಗೆ ಸರಪಳಿ ಬೀಗ ಹಾಕಿದ ವ್ಯಕ್ತಿಯಿಂದ ಸಂಚಾರ

ಕಡೆಗೆ ಬಿಇಎಲ್ ಮಾರುಕಟ್ಟೆ ಬಳಿಯ ಹೆಚ್​​ಎಮ್​​ಟಿ ಸರ್ಕಲ್ ಬಳಿ ವ್ಯಕ್ತಿ ನಿಂತಿದ್ದ. ಆತನ ಹೆಸರು ನೀರವ್ ಎಂದು ತಿಳಿದು ಬಂದಿದೆ. ಕುಟುಂಬದವರೇ ಆತ ಮನೆಯಲ್ಲಿರಲು ಚೈನ್ ಹಾಕಿದ್ದಾರೆ. ಅಣ್ಣನಿಗೆ ಹೇಳ್ಬೇಡಿ ಹೊಡೀತಾರೆ ಎಂದು ಮನವಿ ಆತ ಮಾಡಿಕೊಂಡಿದ್ದಾನೆ.

ಕಾಲಿನಲ್ಲಿ ಗಾಯಗಳಾಗಿದ್ದು, ಕಡೆಗೆ ಜಾಲಹಳ್ಳಿ ವಿಲೇಜ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಸಿವಿಲ್ ಡಿಫೆನ್ಸ್ ನ ನಾಗೇಂದ್ರ ತಿಳಿಸಿದರು. ಆತ ಮಾನಸಿಕ ಅಸ್ವಸ್ಥ ಅಥವಾ ಪುನರ್ವಸತಿ ಕೇಂದ್ರದಿಂದ ಬಿಡಿಸಿಕೊಂಡು ಬಂದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.