ETV Bharat / state

ಓಲಾ, ಉಬರ್ ಅಗ್ರಿಗ್ರೇಟರ್‌ಗಳಲ್ಲಿ ಆಟೋಗಳ ಸೇವಾ ಶುಲ್ಕ ಪಡೆಯಲು ಹೊರಡಿಸಿದ್ದ ಅಧಿಸೂಚನೆಗೆ ತಡೆ - ಮೊಬೈಲ್ ಆಪ್ ಆಧಾರಿತ ಓಲಾ

ಮೊಬೈಲ್​ ಆಧಾರಿತ ಆಟೋಗಳ ಸೇವಾ ಶುಲ್ಕಕ್ಕೆ ತಡೆ - ವೆಂಬರ್ 25ರಂದು ಅಧಿಸೂಚನೆ ಹೊರಡಿಸಿದ್ದ ಸಾರಿಗೆ ಇಲಾಖೆ - ಈ ಹಿಂದೆ ನೀಡಿದ್ದ ಆದೇಶಕ್ಕೆ ತಡೆ

ಓಲಾ, ಉಬರ್ ಅಗ್ರಿಗ್ರೇಟರ್‌ಗಳಲ್ಲಿ ಆಟೋಗಳ ಸೇವಾ ಶುಲ್ಕ ಪಡೆಯಲು ಹೊರಡಿಸಿದ್ದ ಅಧಿಸೂಚನೆಗೆ ತಡೆ
suspension-of-notification-issued-by-ola-uber-aggregators-to-collect-service-fee-for-autos
author img

By

Published : Jan 4, 2023, 4:56 PM IST

ಬೆಂಗಳೂರು: ಮೊಬೈಲ್ ಆಪ್ ಆಧಾರಿತ ಓಲಾ, ಉಬರ್ ಮತ್ತು ರ‍್ಯಾಪಿಡೋ ಅಗ್ರಿಗ್ರೇಟರ್‌ಗಳ ಮೂಲಕ ಆಟೋಗಳ ಸೇವೆಗೆ ಶೇ.5 ರಷ್ಟು ಸೇವಾ ಶುಲ್ಕ ಪಡೆದುಕೊಳ್ಳಬಹುದು ಎಂಬುದಾಗಿ ರಾಜ್ಯ ಸಾರಿಗೆ ಇಲಾಖೆ 2022 ನವೆಂಬರ್ 25 ರಂದು ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಮೊಬೈಲ್ ಆಪ್ ಆಧಾರಿತ ಓಲಾ, ಉಬರ್ ಮತ್ತು ರ‍್ಯಾಪಿಡೋ ಸಾರಿಗೆ ಸೇವೆಯಲ್ಲಿ ಆಟೋ ರಿಕ್ಷಾಗಳ ಸೇವೆಗೆ ನಿರ್ಬಂಧ ವಿಧಿಸಿದ್ದ ಕ್ರಮವನ್ನು ಪ್ರಶ್ನಿಸಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದವು. ಈ ನಡುವೆ ಆಟೋಗಳ ಸೇವೆಗೆ ದರ ಹೆಚ್ಚಳ ಮಾಡುವಂತೆ ಮಧ್ಯಂತರ ಮನವಿ ಮಾಡಿದ್ದರು. ಹೈಕೋರ್ಟ್ ಸೂಚನೆ ಮೇರೆಗೆ ಸಭೆ ನಡೆಸಿದ್ದ ಸಾರಿಗೆ ಇಲಾಖೆ, ನವೆಂಬರ್ 25ರಂದು ಅಧಿಸೂಚನೆ ಹೊರಡಿಸಿದ್ದ ಸಾರಿಗೆ ಇಲಾಖೆ, ನಗರದಲ್ಲಿ ಆಟೋಗಳಿಗೆ ನಿಗದಿ ಪಡಿಸಿರುವ ದರಕ್ಕೆ ಸರಕು ಮತ್ತು ಸೇವಾ ತೆರಿಗೆ ಸೇರಿ ಶೇ.5 ರಷ್ಟು ಹೆಚ್ಚುವರಿಯಾಗಿ ಪಡೆದುಕೊಳ್ಳಬಹುದು ಎಂದು ಅಧಿಸೂಚನೆ ಹೊರಡಿಸಿತ್ತು.

ದರ ನಿಗದಿ ಮಾಡುವ ಅಧಿಕಾರ ರಾಜ್ಯಸರ್ಕಾರಕ್ಕೆ ಇಲ್ಲ: ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದ ಅರ್ಜಿದಾರ ಸಂಸ್ಥೆಗಳು ಕೇಂದ್ರ ಸಾರಿಗೆ ನಿಯಮಗಳ ಪ್ರಕಾರ ರಾಜ್ಯ ಸರ್ಕಾರಕ್ಕೆ ದರ ನಿಗದಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ವಾದಿಸಿದ್ದವು. ಅಲ್ಲದೇ, ಸರಕು ಮತ್ತು ಸೇವಾ ಶುಲ್ಕಕ್ಕೆ ಶೇ.10 ರಷ್ಟು ಹೆಚ್ಚುವರಿ ಪಡೆದರೂ ನಷ್ಟವುಂಟಾಗಲಿದೆ. ಆದ್ದರಿಂದ ಶೇ.20ರಷ್ಟು ಹೆಚ್ಚುವರಿ ಶುಲ್ಕ ನಿಗದಿ ಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದವು. ವಾದ ಆಲಿಸಿದ್ದ ನ್ಯಾಯಪೀಠ, ಸಾರಿಗೆ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿದೆ.

ಪ್ರಕರಣದ ಹಿನ್ನೆಲೆ: ಆಟೋ ರಿಕ್ಷಾಗಳನ್ನು ಆಪ್ ಮೂಲಕ ಸಲ್ಲಿಸುತ್ತಿದ್ದ ಸೇವೆಯನ್ನು ಸ್ಥಗಿತಗೊಳಿಸಿದ್ದ ಸಾರಿಗೆ ಇಲಾಖೆ ಕ್ರಮವನ್ನು ಪ್ರಶ್ನಿಸಿ ಎಎನ್‌ಐ ಸೇರಿದಂತೆ ಇತರ ಸಂಸ್ಥೆಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಅಗ್ರಿಗ್ರೇಟರ್‌ಗಳು ಹೆಚ್ಚುವರಿ ಶುಲ್ಕ ಪಡೆಯುತ್ತಿಲ್ಲ ಕಮಿಷನ್​​​ ಆಧಾರದಲ್ಲಿ ಶುಲ್ಕ ಪಡೆಯಲಾಗುತ್ತಿದೆ. ಈ ಆಪ್ ಬುಕ್ಕಿಂಗ್ ಪರವಾನಗಿ ನೀಡುವ ಸಂದರ್ಭದಲ್ಲಿ ಆಟೋ ರಿಕ್ಷಾ ಸೇವೆ ಒದಗಿಸುವಂತಿಲ್ಲ ಎಂಬುದಾಗಿ ಉಲ್ಲೇಖಿಸಿರಲಿಲ್ಲ. ಹೀಗಾಗಿ ಆಟೋ ಸೇವೆ ಪಡೆದುಕೊಳ್ಳಲಾಗಿತ್ತು. ಇದೀಗ ಸ್ಥಗಿತಗೊಳಿಸಿರುವುದು ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ವಿವರಿಸಿದ್ದರು.

ಸಾರಿಗೆ ಇಲಾಖೆ ಅಧಿಸೂಚನೆ: 2022 ನವೆಂಬರ್ 25ರಂದು ಅಧಿಸೂಚನೆ ಹೊರಡಿಸಿದ್ದ ಸಾರಿಗೆ ಇಲಾಖೆ, ಆಟೋರಿಕ್ಷಾ ಅಗ್ರಿಗೇಟರ್ ಸೇವೆ ಒದಗಿಸಲು ಚಾಲ್ತಿಯಲ್ಲಿರುವ ಲೈಸೆನ್ಸ್ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ.5 ರಷ್ಟು ಸೇವಾ ಶುಲ್ಕ ಮತ್ತು ಅನ್ವಯಿಸುವ ಜಿ.ಎಸ್.ಟಿ ತೆರಿಗೆಯನ್ನು ಸೇರಿಸಿ ಅಂತಿಮ ಪ್ರಯಾಣದರ ನಿಗದಿಪಡಿಸಬಹುದಾಗಿದೆ.

ಇದನ್ನೂ ಓದಿ: ಸಕ್ರಿಯ ರಾಜಕಾರಣಕ್ಕೆ ಎಸ್ಎಂ ಕೃಷ್ಣ ಗುಡ್ ಬೈ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.