ಬೆಂಗಳೂರು: ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಕೆ.ಜಿ ಹಳ್ಳಿಯ ಬಳಿ ನಡೆದಿದೆ.
ನೀನಾದ್ ತಾಜ್ ಮೃತಪಟ್ಟ ಮಹಿಳೆ. ನೀನಾದ್ ತಾಜ್, ರಜಾಕ್ ಎಂಬಾತನನ್ನ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದು, ಬೆಂಗಳೂರಿನ ಕೆ.ಜಿ ಹಳ್ಳಿಯ ಬಳಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ರಜಾಕ್ ಕೌಟುಂಬಿಕ ವಿಚಾರದ ಹಿನ್ನೆಲೆ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ.
![Suspected death of a housewife](https://etvbharatimages.akamaized.net/etvbharat/prod-images/4679935_vicky.jpg)
ನಿನ್ನೆಯೂ ಸಹ ಇಬ್ಬರು ಜಗಳವಾಡಿದ್ದು, ಈ ವೇಳೆ ರಜಾಕ್, ನೀನಾದ್ರನ್ನು ಕೊಲೆ ಮಾಡಿ ನೇಣು ಹಾಕಿರುವ ಆರೋಪ ಕೇಳಿ ಬಂದಿದೆ. ಸದ್ಯ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.